July 7, 2022

Newsnap Kannada

The World at your finger tips!

varthuru 1

ಸಂದೇಶ್ ನಾಗರಾಜ್, ವರ್ತೂರು, ಮಧ್ವರಾಜ್ ಸೇರಿ ಒಟ್ಟು 7 ನಾಯಕರು ಬಿಜೆಪಿಗೆ ಸೇರ್ಪಡೆ

Spread the love

ಕಮಲ ಬಿಗ್ ಆಪರೇಷನ್ ಶುರು ಮಾಡಿದೆ . ಸಂದೇಶ್ ನಾಗರಾಜ್ , ವರ್ತೂರು, ಮಧ್ವರಾಜ್ , ಲಕ್ಷ್ಮಿ ಅಶ್ವಿನ್ ಗೌಡ ಸೇರಿ ಒಟ್ಟು 7 ನಾಯಕರು ಬಿಜೆಪಿಗೆ ಸೇರ್ಪಡೆಯಾದರು.

ಕೆಪಿಸಿಸಿ ಉಪಾಧ್ಯಕ್ಷ ಪ್ರಮೋದ್​ ಮಧ್ವರಾಜ್​, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಸಿಎಂ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸಮ್ಮುಖದಲ್ಲಿ ಕಮಲ ಹಿಡಿದಿದ್ದಾರೆ.

ಮಂಡ್ಯದ ಲಕ್ಷ್ಮೀ ಅಶ್ವಿನ್‌ಗೌಡ, ಸಂದೇಶ್​ ನಾಗರಾಜ್ ಹಾಗೂ ವರ್ತೂರ್‌ ಪ್ರಕಾಶ್‌ ಸೇರಿದಂತೆ ಹಲವರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.

ಪ್ರಮೋದ್‌ಗೆ ಯಾವ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗಲಿದೆ ಅನ್ನೋ ಚರ್ಚೆ ಬಿಜೆಪಿಯಲ್ಲಿ ಶುರುವಾಗಿದೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಮಂಡ್ಯ ಜಿಲ್ಲಾ ಮುಖಂಡ ಅಶೋಕ್‌ ಜಯರಾಮ್, ಮಾಜಿ ಐಆರ್‌ಎಸ್‌ ಅಧಿಕಾರಿ ಡಾ. ಲಕ್ಷ್ಮಿ ಅಶ್ವಿನ್‌ ಗೌಡ ಮತ್ತು ಬೆಂಬಲಿಗರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಸಚಿವರು, ಶಾಸಕರು, ರಾಜ್ಯ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!