6ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

heart attack , girl, death

6ನೇ ತರಗತಿ ವಿದ್ಯಾರ್ಥಿಯೋರ್ವ ಹೃದಯಾಘಾತದಿಂದ ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮದಲ್ಲಿ ಜರುಗಿದೆ.

ಕೀರ್ತನ್ (12) ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ.ಮಂಡ್ಯದಲ್ಲಿ ಮುಂದಿನ ವರ್ಷ 87 ನೇ ಕನ್ನಡ ಸಾಹಿತ್ಯ ಸಮ್ಮೇಳನ

WhatsApp Image 2023 01 08 at 12.24.27 PM

ಕೂಡುಮಂಗಳೂರು ಗ್ರಾಮದ ಚಾಲಕ ಮಂಜಾಚಾರಿ ಅವರ ಪುತ್ರ ಕೀರ್ತನ್ ಕುಶಾಲನಗರ ಸಮೀಪದ ಕೊಪ್ಪಭಾರತ ಮಾತಾ ಶಾಲಾ ವಿದ್ಯಾರ್ಥಿಯಾಗಿದ್ದ. ಕೀರ್ತನ್‌ ಓದುತ್ತಿದ್ದ ಅದೇ ಶಾಲೆಯಲ್ಲೇ ಬಸ್ ಚಾಲಕನಾಗಿ ತಂದೆ ಮಂಜಾಚಾರಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಶನಿವಾರ ತಡರಾತ್ರಿ ಕೀರ್ತನ್ ಮಲಗಿದ್ದ ಜಾಗದಿಂದಲೇ ಎರಡು ಬಾರಿ ಎದೆ ನೋವು ಎಂದು ಕಿರುಚಿಕೊಂಡಿದ್ದ. ಇದರಿಂದಾಗಿ ಗಾಬರಿಗೊಂಡ ಆತನ ಪೋಷಕರು ತಕ್ಷಣವೇ ಕುಶಾಲನಗರ ಆಸ್ಪತ್ರೆ ಕರೆದೊಯ್ದಿದ್ದಾರೆ. ಆದರೆ ಕೀರ್ತನ್‌ ಆ ವೇಳೆಗೆ ಮೃತಪಟ್ಟಿದ್ದ.

Leave a comment

Leave a Reply

Your email address will not be published. Required fields are marked *

error: Content is protected !!