January 8, 2025

Newsnap Kannada

The World at your finger tips!

dam,rain,water

ತಮಿಳುನಾಡಿಗೆ 6 ರಿಂದ 7 ಟಿಎಂಸಿ ನೀರು ಬಿಡಿ – ಕರ್ನಾಟಕಕ್ಕೆ ಪ್ರಾಧಿಕಾರದ‌ ಆದೇಶ

Spread the love

ತಮಿಳುನಾಡಿಗೆ ಸೆಪ್ಟೆಂಬರ್ ನಲ್ಲಿ 6 ರಿಂದ 7 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೂಚಿಸಿದೆ.

ತಮಿಳುನಾಡು ಸಲ್ಲಿಸಿದ ನೀರು ಬಿಡುಗಡೆಯ ಅರ್ಜಿ ಪರಿಶೀಲನೆ ಮಾಡಲು ಸಭೆ ಸೇರಿದ್ದ ಸದಸ್ಯರು ಈ ನಿರ್ಧಾರ ಕೈಗೊಂಡರು.

ಜೂನ್, ಜುಲೈ ,ಆಗಸ್ಟ್ ನಲ್ಲಿ 27 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕಿತ್ತು. ಈಗ ಸಧ್ಯಕ್ಕೆ 6ರಿಂದ 7 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಸೂಚಿಸಿದೆ.

ಕೃಷ್ಣರಾಜಸಾಗರ ಆಣೆಕಟ್ಟಿನಲ್ಲಿ ನೀರಿನ‌ ಸಂಗ್ರಹ ಪ್ರಮಾಣ ಕುಸಿದಿದೆ. ಮಳೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಒಳ ಹರಿವೂ ಕೂಡ ಕುಸಿದಿದೆ. ಇಂದಿನ ನೀರಿನ‌ ಮಟ್ಟ 117 ಅಡಿ ಆಸು‌ಪಾಸಿನಲ್ಲಿದೆ.

Copyright © All rights reserved Newsnap | Newsever by AF themes.
error: Content is protected !!