November 8, 2025

Newsnap Kannada

The World at your finger tips!

lake 1

ಒಂದೇ ಕುಟುಂಬದ 6 ಮಂದಿ ನೀರಿನ ಪಾಲು

Spread the love

ನಿನ್ನೆ (ಭಾನುವಾರ ) ಸಂಜೆ ಒಂದೇ ಕುಟುಂಬದ ಆರು ಜನ ಪ್ರವಾಸಿಗರು ಕಾಳಿ ನದಿ ಹಿನ್ನೀರು ಪ್ರದೇಶವಾದ ಬೀರಂಪಾಲಿಯ ಅಕ್ವಾಡ ಗ್ರಾಮದ ಹತ್ತಿರ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಹುಬ್ಬಳ್ಳಿ ನಿವಾಸಿಗಳಾದ ನಜೀರ್ ಅಹ್ಮದ್ ಹೊಂಬಳ (40), ಅಲ್ಛೀಯಾ ಅಹ್ಮದ್ (10), ಮೋಹಿನ್ ಅಹ್ಮದ್‌ (6), ಬೆಂಗಳೂರಿನ ನಿವಾಸಿಗಳಾದ ರೇಷಾ ಉನ್ನಿಸಾ ತೋಸಿಫ್ ಅಹ್ಮದ್ (38), ಇಫ್ರಾ‌ ತೋಸಿಫ್ ಅಹ್ಮದ್ (15), ಅಬೀದ್ ಅಹ್ಮದ್ (12) ಮೃತಪಟ್ಟಿದ್ದಾರೆ.

ಕುಟುಂಬ ಸಮೇತರಾಗಿ ಎಂಟು ಜನರು ಹುಬ್ಬಳ್ಳಿಯಿಂದ ದಾಂಡೇಲಿಯ ಪ್ರವಾಸಕ್ಕೆ ಬಂದಿದ್ದು ನದಿ ನೀರಿನಲ್ಲಿ ಆಟ ಆಡುತ್ತಿದ್ದಾಗ ಆಳ ನೀರಿಗೆ ಕಾಲು ಜಾರಿದ ಮಕ್ಕಳನ್ನು ರಕ್ಷಿಸಲು ಮುಂದಾದರು.

ಒಬ್ಬರ ನಂತರ ಒಬ್ಬರು ಮುಳುಗಿ ಮೃತಪಟ್ಟಿದ್ದು , ಎಂಟು ಮಂದಿಯಲ್ಲಿ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.

ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ.

error: Content is protected !!