ಹಿಂದೂ ಮಹಾಸಾಗರದಲ್ಲಿ ಸುನಾಮಿ ಎಚ್ಚರಿಕೆ; 6.1 ತೀವ್ರತೆಯ ಭೂಕಂಪ

Team Newsnap
1 Min Read
6.1 Strong earthquake of intensity; possibility of tsunami in Indian Ocean

ಪೂರ್ವ ಟಿಮೋರ್ ಕರಾವಳಿಯಲ್ಲಿ ಶುಕ್ರವಾರ 6.1 ತೀವ್ರತೆಯ ಭೂಕಂಪನ ಉಂಟಾಗಿದೆ. ಈ ಬಗ್ಗೆ ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿದ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿದೆ.

tsunami,earthquake,indian ocean
tsunami and earthquake

ಇದನ್ನು ಓದಿ 2 ದಿನಗಳಿಂದ ಚಿನ್ನದ ಬೆಲೆ ಕುಸಿತ; ಬೆಳ್ಳಿ ದರವೂ 500 ರು ಇಳಿಕೆ

ಭೂಕಂಪದಿಂದಾಗಿ ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಸುನಾಮಿ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಪೂರ್ವ ಟಿಮೋರ್ ಮತ್ತು ಇಂಡೋನೇಷ್ಯಾ ನಡುವೆ ಇರುವ ಟಿಮೋರ್ ದ್ವೀಪದ ಪೂರ್ವದಲ್ಲಿ 51.4 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ. ಇದರ ಬೆನ್ನಲ್ಲೇ ಹಿಂದೂ ಮಹಾಸಾಗರದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಪೂರ್ವ ಟಿಮೋರ್ ಪೆಸಿಫಿಕ್ ರಿಂಗ್ ಆಫ್ ಫೈರ್ ನಲ್ಲಿದೆ. ಇದು ಆಗಾಗ ಭೂಕಂಪಗಳಿಗೆ ಗುರಿಯಾಗುತ್ತದೆ.

2004ನಲ್ಲಿ ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪ

ಫೆಬ್ರವರಿಯಲ್ಲಿ ಇಂಡೋನೇಷ್ಯಾದ ಉತ್ತರ ಸುಮಾತ್ರದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿ 12 ಜನ ಸಾವನ್ನಪ್ಪಿದರು. 2004 ರಲ್ಲಿ 9.1 ತೀವ್ರತೆಯ ಭೂಕಂಪದಿಂದ ಸುನಾಮಿ ಉಂಟಾಗಿ ಸುಮಾತ್ರಾ ತೀರವನ್ನು ಅಪ್ಪಳಿಸಿ ಇಂಡೋನೇಷ್ಯಾದಲ್ಲಿ ಸುಮಾರು 1,70,000 ಸೇರಿದಂತೆ ಈ ಪ್ರದೇಶದಾದ್ಯಂತ 2,20,000 ಜನ ಸಾವಿಗೀಡಾಗಿದ್ದರು.

Share This Article
Leave a comment