November 16, 2024

Newsnap Kannada

The World at your finger tips!

jewellery

ಹರಿಯಾಣದಲ್ಲಿ 5 ಸಾವಿರ ವರ್ಷಗಳ ಹಳೆಯ ಆಭರಣ ಕಾರ್ಖಾನೆ ಪತ್ತೆ

Spread the love

ಕಳೆದ 32 ವರ್ಷಗಳಿಂದ ಹರಿಯಾಣದ ರಾಖಿ ಗರ್ಹಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಯು 5 ಸಾವಿರ ವರ್ಷಗಳ ಹಳೆಯ ಆಭರಣ ತಯಾರಿಕೆ ಕಾರ್ಖಾನೆಯನ್ನು ಪತ್ತೆ ಹಚ್ಚಿದೆ. ಇದು ಎಎಸ್‌ಐಯ ಅತೀ ದೊಡ್ಡ ಆವಿಷ್ಕಾರಗಳಲ್ಲಿ ಒಂದಾಗಿದೆ.

ರಾಖಿ ಗರ್ಹಿ ಒಂದು ಹಳ್ಳಿ ಮತ್ತು ಹರಿಯಾಣದ ಹಿಸಾರ್ ಜಿಲ್ಲೆಯ ಸಿಂಧೂ ಕಣಿವೆ ನಾಗರಿಕತೆಗೆ ಸೇರಿದ ಅತ್ಯಂತ ಹಳೆಯ ಪುರಾತನ ಸ್ಥಳಗಳಲ್ಲಿ ಒಂದಾಗಿದೆ.

5 ಸಾವಿರ ವರ್ಷಗಳ ಹಳೆಯ ಆಭರಣ ತಯಾರಿಕೆ ಕಾರ್ಖಾನೆಯಲ್ಲಿ ಕೆಲವು ಮನೆಗಳ ರಚನೆ ಹಾಗೂ ಅಡುಗೆ ಮನೆಗಳು, ಜೊತೆಗೆ ಸಾವಿರಾರು ವರ್ಷಗಳಿಂದ ಬಚ್ಚಿಡಲಾದ ತಾಮ್ರ, ಬಂಗಾರದ ಆಭರಣಗಳನ್ನು ಪತ್ತೆ ಹಚ್ಚಲಾಗಿದೆ.

gold

ಈ ಕುರಿತಂತೆ ಮಾತನಾಡಿರುವ ಎಎಸ್‍ಐ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಡಾ.ಸಂಜಯ್ ಅವರು, ಕಳೆದ 20 ವರ್ಷಗಳಲ್ಲಿ ನಾವು ಸಿನೌಲಿ, ಹಸ್ತಿನಾಪುರ ಮತ್ತು ರಾಖಿಗರ್ಹಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ. ರಾಖಿಗರ್ಹಿಯ ಜನರು ಹಸ್ತಿನಾಪುರದ ಪೂರ್ವಜರ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ ಮತ್ತು ಇದರಿಂದ ಸಂಸ್ಕೃತಿಯು ಅಭಿವೃದ್ಧಿಯತ್ತ ವೇಗವಾಗಿ ಸಾಗುತ್ತಿದೆ ಅಂತ ಹೇಳಬಹುದು ಎಂದಿದ್ದಾರೆ.

ಇದನ್ನು ಓದಿ : ಜೂ.30ರವರೆಗೆ ತಿಮ್ಮಪ್ಪನಿಗೆ ಕೆಲವು ಸಾಪ್ತಾಹಿಕ ಸೇವೆಗಳು ತಾತ್ಕಾಲಿಕ ಸ್ಥಗಿತ

ಕಳೆದ ಎರಡು ವರ್ಷಗಳಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‍ಐ)ಯು ರಾಖಿ ಗರ್ಹಿಯಲ್ಲಿ ಸಾಕಷ್ಟು ಆವಿಷ್ಕಾರಗಳನ್ನು ಮಾಡಿದೆ, ಈ ನಾಗರಿಕತೆಯು ಅಭಿವೃದ್ಧಿಯತ್ತ ಸ್ಥಿರವಾಗಿ ಮುನ್ನಡೆಯುತ್ತಿರುವುದನ್ನು ಸೂಚಿಸುತ್ತದೆ.

ಇದನ್ನು ಓದಿ : ರಾಜ್ಯದಲ್ಲಿ ಧರ್ಮಯುದ್ಧ ಆರಂಭ: ಆಜಾನ್‌ ವಿರುದ್ಧವಾಗಿ ಸುಪ್ರಭಾತ, ಓಂಕಾರ, ಹನುಮಾನ ಚಾಲೀಸಾ

ಈ ಮುನ್ನ 2018 ರಲ್ಲಿ ಉತ್ತರ ಪ್ರದೇಶದ ಸಿನೌಲಿಯಲ್ಲಿ ಪತ್ತೆಯಾಗಿದ್ದ ಕಂಚಿನ ಯುಗದ ದೊಡ್ಡ ಡಿಸ್ಕ್ (ಚಕ್ರದ ಬಂಡಿ)ಗಳು ಎಲ್ಲರ ಗಮನಸೆಳೆದಿತ್ತು. ಇದನ್ನು ಕೆಲವರು ಕುದುರೆ ರಥಗಳು ಎಂದು ತಿಳಿಸಿದ್ದರು. ಅದೇ ಉತ್ಖನನದ ಸ್ಥಳಗಳಲ್ಲಿ ಸ್ಮಶಾನಗಳೂ ಕಂಡುಬಂದಿತ್ತು, ಆಗಿನ ಜನರು ಮರಣದ ಬಳಿಕ ಜೀವನದ ಬಗ್ಗೆ ನಂಬಿಕೆ ಇಟ್ಟಿದ್ದರು ಎಂದು ತಿಳಿಯಲಾಗಿದೆ.

Copyright © All rights reserved Newsnap | Newsever by AF themes.
error: Content is protected !!