ಜೂ.30ರವರೆಗೆ ತಿಮ್ಮಪ್ಪನಿಗೆ ಕೆಲವು ಸಾಪ್ತಾಹಿಕ ಸೇವೆಗಳು ತಾತ್ಕಾಲಿಕ ಸ್ಥಗಿತ

Team Newsnap
1 Min Read
Second temple of 'Tirupati Thimmappa' opening in Chennai from March 17 ಮಾರ್ಚ್ 17 ರಿಂದ ಚೆನ್ನೈನಲ್ಲಿ ʻತಿರುಪತಿ ತಿಮ್ಮಪ್ಪʼನ ಎರಡನೇ ದೇವಾಲಯ ಪ್ರಾರಂಭ

ತಿರುಪತಿಯಲ್ಲಿರುವ ತಿರುಮಲ ದೇವಾಲಯದಲ್ಲಿ ಕೆಲವು ವಾರಗಳ ಕಾಲ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿರುವುದಾಗಿ ತಿಳಿಸಿದೆ.

ವೆಂಕಟೇಶ್ವರನ ಬೆಟ್ಟದ ದೇವಾಲಯದೊಳಗೆ ಮಂಗಳವಾರ ನಡೆಯುವ ಅಸ್ತದಳ ಪಾದಪದ್ಮರದಾನ, ಗುರುವಾರದ ತಿರುಪ್ಪವಾಡ, ಶುಕ್ರವಾರದ ನಿಜಪಾದ ದರ್ಶನಂ ಮುಂತಾದ ಸಾಪ್ತಾಹಿಕ ಸೇವೆಗಳನ್ನು ಜೂನ್ 30ರವರೆಗೆ ಸ್ಥಗಿತಗೊಳಿಸಲಾಗಿದೆ.

ಈ ಬೇಸಿಗೆಯಲ್ಲಿ ಭಾರೀ ಸಂಖ್ಯೆಯಲ್ಲಿ ದೇವಾಲಯಕ್ಕೆ ಭಕ್ತರು ಭೇಟಿ ನೀಡುವ ಹಿನ್ನೆಲೆ ಸಾಮಾನ್ಯ ಯಾತ್ರಾರ್ಥಿಗಳಿಗೆ ಹೆಚ್ಚಿನ ಸಮಯ ದರ್ಶನವನ್ನು ಒದಗಿಸುವ ಉದ್ದೇಶದಿಂದ ಕೆಲವು ಸೇವೆಗಳನ್ನು ಅಮಾನತುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾ ರೆಡ್ಡಿ ಸುದ್ದಿಗಾರರಿಗೆ ಈ ಮಾಹಿತಿ ನೀಡಿ ಸಾಪ್ತಾಹಿಕ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಮಂಗಳವಾರ ಮತ್ತು ಶುಕ್ರವಾರದಂದು ಹೆಚ್ಚುವರಿಯಾಗಿ ಸುಮಾರು 5,000 ಯಾತ್ರಾರ್ಥಿಗಳಿಗೆ ಮತ್ತು ಗುರುವಾರದಂದು 9,000 ಭಕ್ತರಿಗೆ ದರ್ಶನಕ್ಕೆ ಅನುಕೂಲವಾಗುವಂತೆ ಟಿಟಿಡಿಗೆ ಅನುವು ಮಾಡಿಕೊಡುತ್ತದೆ. ಈ ನಿರ್ಧಾರದಿಂದ ಭಕ್ತರು ವೆಂಕಟೇಶ್ವರ ದೇವಾಲಯದ ಒಳಗೆ ಹೆಚ್ಚು ಗಂಟೆಗಳ ಕಾಲ ಕಾಯಬೇಕಾಗಿಲ್ಲ ಎಂದಿದ್ದಾರೆ.

Share This Article
Leave a comment