ಕಾಂಗ್ರೆಸ್ ಕಾವೇರಿ, ಮೇಕೆದಾಟು ಹೋರಾಟ ಮಾಡಿ ತಮಿಳುನಾಡು-ಕರ್ನಾಟಕ ನಡುವೆ ಬಿರುಕು ತಂದಿತು: ಅಣ್ಣಾಮಲೈ

Team Newsnap
1 Min Read

ತಮಿಳುನಾಡು ಮತ್ತು ಕರ್ನಾಟಕ ಬಾಂಧವ್ಯ ಚೆನ್ನಾಗಿರಲು ಹಲವು ವಿಚಾರಗಳಿವೆ. ಆದರೆ ಕಾಂಗ್ರೆಸ್
ಎರಡೂ ರಾಜ್ಯಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೋಲಾರದಲ್ಲಿ ಭಾನುವಾರ ಹೇಳಿದರು.

ಕೋಲಾರದ ಕೆಜಿಎಫ್ ನಗರದಲ್ಲಿ ಭಾನುವಾರ ಬಿಜೆಪಿ ಸಮಾವೇಶ ಮಾಡುವ ಮೂಲಕ ತಮಿಳು ಮತಗಳನ್ನು ಸೆಳೆಯಲು ಬಿಜೆಪಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೂ ಮುನ್ನ ಅಣ್ಣಾಮಲೈ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಮೇಕೆದಾಟು ವಿಚಾರದಲ್ಲಿ ತಮ್ಮ ಅಭಿಪ್ರಾಯ ಏನು ಎಂಬುದಕ್ಕೆ ಪ್ರತಿಕ್ರಿಯೆ ನೀಡಿದರು.

ತಮಿಳುನಾಡು ಮತ್ತು ಕರ್ನಾಟಕದ ಬಾಂಧವ್ಯಕ್ಕಾಗಿ ಹಲವು ವಿಚಾರಗಳಿವೆ. ವ್ಯಾಪಾರ, ಕೃಷಿ ಸೇರಿದಂತೆ ಹಲವು ವಿಚಾರಗಳಲ್ಲಿ ಒಬ್ಬರಿಗೊಬ್ಬರು ಚೆನ್ನಾಗಿಯೇ ಇದ್ದೇವೆ.

ಇದನ್ನು ಓದಿ: ರಾಜ್ಯದ ಹವಾಮಾನ ವರದಿ (Weather Report)

ತಮಿಳುನಾಡಿನ ಎಷ್ಟೋ ಮಂದಿ ಬೆಂಗಳೂರಿನ ಐಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಬಾಂಧವ್ಯಕ್ಕೆ ಹಲವು ವಿಚಾರಗಳಿದ್ರು, ಕಾಂಗ್ರೆಸ್ ಜನರನ್ನು ಒಡೆಯುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾವೇರಿ ವಿಚಾರವಾಗಿ ಜನರನ್ನು ಇಬ್ಭಾಗ ಮಾಡಿದರು ಮೇಕೆದಾಟು ವಿಚಾರ ಕೇಂದ್ರ ಸಚಿವರೊಬ್ಬರ ಕೈಯಲ್ಲಿದೆ. ಹಾಗಾಗಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಆಗಲಿದೆ. ಇದರಲ್ಲಿ ಯಾರಿಗೂ ತೊಂದರೆಯಾಗುವುದಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನಡೆದುಕೊಳ್ಳಬೇಕು. ಕರ್ನಾಟಕ, ತಮಿಳುನಾಡಿನ ಮುಖ್ಯಮಂತ್ರಿಗಳು ಇದನ್ನೆ ಹೇಳಿದ್ದಾರೆ. ನಾನು ಯೋಜನೆ ಪರವೋ, ವಿರುದ್ಧವೋ ಎನ್ನುವುದು ಮುಖ್ಯವಲ್ಲ ಎಂದು ಹೇಳಿದರು.

Share This Article
Leave a comment