3 ವರ್ಷಗಳಲ್ಲಿ 49 ಹುಲಿ, 237 ಆನೆ ಸಾವು – ಸಚಿವ ಈಶ್ವರ ಖಂಡ್ರೆ

Team Newsnap
1 Min Read
  • ಮಧು ಜಿ ಮಾದೇಗೌಡರ ಪ್ರಶ್ನೆಗೆ ಸಚಿವ ಖಂಡ್ರೆ ಉತ್ತರ

ಬೆಳಗಾವಿ : ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 49 ಹುಲಿ ಹಾಗೂ 237 ಆನೆಗಳು ಮೃತಪಟ್ಟಿವೆ. ಇದೇ ಅವಧಿಯಲ್ಲಿ ಹುಲಿ ದಾಳಿಯಿಂದ 11 ಹಾಗೂ ಆನೆಗಳ ದಾಳಿಯಿಂದ 84 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಶಾಸಕ ಮಧು ಜಿ.ಮಾದೇಗೌಡ ಅವರ ಚುಕ್ಕೆ ಗುರುತ್ತಿಲ್ಲದ ಪ್ರಶ್ನೆಗೆ ಲಿಖಿತ ನೀಡಿರುವ ಸಚಿವರು, 2020-21ರಲ್ಲಿ 14 ಹುಲಿ, 74 ಆನೆ; 2021-22ರಲ್ಲಿ 19 ಹುಲಿ, 90 ಆನೆ ಹಾಗೂ 2022-23ರಲ್ಲಿ 16 ಹುಲಿ, 73 ಆನೆಗಳು ಮೃತಪಟ್ಟಿವೆ ಎಂದು ವಿವರ ನೀಡಿದ್ದಾರೆ.

ರಾಷ್ಟ್ರೀಯ ಹುಲಿ ಗಣತಿ 2022ರ ವರದಿ ಪ್ರಕಾರ ರಾಜ್ಯದಲ್ಲಿ ಒಟ್ಟು 563 ಹುಲಿಗಳಿವೆ. 2023ನೇ ಸಾಲಿನಲ್ಲಿ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ನೇರ ವೀಕ್ಷಣೆಯಿಂದ ನಡೆದ ಆನೆ ಗಣತಿ ವರದಿಯಂತೆ ರಾಜದಲ್ಲಿ ಅಂದಾಜು 6395 ಆನೆಗಳಿವೆ. 2022-23ನೇ ಸಾಲಿನಲ್ಲಿ ಉತ್ತರ ಪ್ರದೇಶಕ್ಕೆ 4 ಹಾಗೂ ಮಧ್ಯಪ್ರದೇಶಕ್ಕೆ 14 ಬಂಧಿತ ಆನೆಗಳನ್ನು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ‘ಪ್ರಾಜೆಕ್ಟ್ ಟೈಗರ್’ ಮತ್ತು ‘ಪ್ರಾಜೆಕ್ಟ್ ಎಲಿಫೆಂಟ್’ ಅಡಿಯಲ್ಲಿ ಹುಲಿ ಮತ್ತು ಆನೆಗಳ ಆವಾಸಸ್ಥಾನಗಳ ಸಂರಕ್ಷಣೆಗಾಗಿ ಕ್ರಮವಾಗಿ ರೂ. 6782.14 ಲಕ್ಷ ಮತ್ತು ರೂ. 1312.41 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.ಕರ್ನಾಟಕದಲ್ಲಿ ಬರ : ಕೇಂದ್ರದ ನೆರವಿಗೆ ಸಂಸದೆ ಸುಮಲತಾ ಪ್ರಧಾನಿಗೆ ಮನವಿ

ಪರಿಹಾರ : ಕಳೆದ ಮೂರು ವರ್ಷಗಳಲ್ಲಿ ಹುಲಿ ದಾಳಿಯಿಂದ ಮೃತಪಟ್ಟ 11 ಮಂದಿಯ ಕುಟುಂಬಕ್ಕೆ 105 ಲಕ್ಷ ರೂಪಾಯಿ ಹಾಗೂ ಆನೆ ದಾಳಿಯಿಂದ ಮೃತಪಟ್ಟ 84 ಮಂದಿಯ ಕುಟುಂಬಗಳಿಗೆ 695 ಲಕ್ಷ ರೂಪಾಯಿಗಳ ಪರಿಹಾರ ಮೊತ್ತವನ್ನು ಪಾವತಿಸಲಾಗಿದೆ ಎಂದು ತಿಳಿಸಿದರು.

Share This Article
Leave a comment