ಕರ್ನಾಟಕದಲ್ಲಿ ಬರ : ಕೇಂದ್ರದ ನೆರವಿಗೆ ಸಂಸದೆ ಸುಮಲತಾ ಪ್ರಧಾನಿಗೆ ಮನವಿ

Team Newsnap
1 Min Read

ನವದೆಹಲಿ: ಕರ್ನಾಟಕದ ಬರ ಪೀಡಿತ ತಾಲೂಕುಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ನೆರವಿಗೆ ಧಾವಿಸುವಂತೆ ಸಂಸದೆ ಸುಮಲತಾ ಮಂಗಳವಾರ ಮನವಿ ಮಾಡಿದರು .

ಲೋಕಸಭೆಯ ಅಧಿವೇಶನದ ಶೂನ್ಯ ವೇಳೆಯಲ್ಲಿ ಮಾತನಾಡಿದ ಸಂಸದೆ ಸುಮಲತಾ ರಾಜ್ಯದ ಬರ ಪರಿಸ್ಥಿತಿಯ ಕುರಿತು ಗಮನ ಸೆಳೆದರು.

ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತವಾಗಿವೆ, ಅಂದಾಜು 37 ಸಾವಿರ ಕೋಟಿ ಹಾನಿಯಾಗಿರುವ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿದರು.

ನಾನು ಪ್ರತಿನಿಧಿಸುವ ಮಂಡ್ಯ ಕ್ಷೇತ್ರದ ಎಲ್ಲಾ ತಾಲೂಕುಗಳು ಬರದಿಂದ ತತ್ತರಿಸಿವೆ, ಶೇಕಡಾ 50 ರಿಂದ 70ರಷ್ಟು ಬೆಳೆ ಹಾನಿಯಾಗಿ, ರೈತರು ಸಂಕಷ್ಟಕ್ಕೆ ಸಿಲುಕಿರುವ ಹಾಗೂ ಮಳೆ ಬಾರದೇ ಇರುವ ಕಾರಣದಿಂದಾಗಿ ಕುಡಿಯುವ ನೀರಿಗೂ ಹಾಹಾಕಾರ ಎದ್ದಿರುವ ಕುರಿತು ಸಂಸದೆ ಗಮನಸೆಳೆದರು .ಕರ್ನಾಟಕದ ರಾಜಭವನಕ್ಕೆ ಬಾಂಬ್ ಬೆದರಿಕೆ

ಪ್ರಧಾನ ಮಂತ್ರಿಗಳು ಕೂಡಲೇ ಬರಪೀಡಿತ ಪ್ರದೇಶಗಳಿಗೆ ಆರ್ಥಿಕ ಸಹಾಯ ಒದಗಿಸುವಂತಹ ಪ್ಯಾಕೇಜ್ ಗಳನ್ನು ಘೋಷಣೆ ಮಾಡುವ ಮೂಲಕ ಕರ್ನಾಟಕದ ಜನತೆ ಹಾಗೂ ರೈತರ ಜೊತೆ ನಿಲ್ಲಬೇಕು ಎಂದು ವಿನಂತಿಸಿದರು

Share This Article
Leave a comment