September 27, 2022

Newsnap Kannada

The World at your finger tips!

WhatsApp Image 2022 06 22 at 11.02.18 AM

ಮಹಾ ಬಂಡಾಯ: 45 ಶಾಸಕರ ಬೆಂಬಲ ಇದೆ- ಏಕ್​ನಾಥ್ ಶಿಂಧೆ

Spread the love

ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಮಹಾ ಪತನವಾಗುವ ಹಂತಕ್ಕೆ ಬಂದಿದೆ. ಮಹಾ ಬಂಡಾಯ ನಾಯಕ ಏಕ್​ನಾಥ್ ಶಿಂಧೆ ನೇತೃತ್ವದಲ್ಲಿ 40 ಹೆಚ್ಚು ಶಾಸಕರುಗಳು ಅಸ್ಸಾಂನ ಗುವಾಹಟಿಯ ರೆಡಿಸನ್ ಬ್ಲೂ ರೆಸಾರ್ಟ್​ನಲ್ಲಿ ಬೀಡು ಬಿಟ್ಟಿದ್ದಾರೆ.

ಮಹಾ ಬಂಡಾಯ ನಾಯಕ ಶಿವಸೇನೆಯ ಏಕ್​ನಾಥ್ ಶಿಂಧೆ ತಮಗೆ 45 ಶಾಸಕರ ಬೆಂಬಲವಿದೆ ಎಂದು ಘೋಷಿಸಿದ್ದಾರೆ. ಅಲ್ಲದೇ, ರೆಸಾರ್ಟ್​ನಲ್ಲಿ ಮಹತ್ವದ ಸಭೆ ಕೂಡ ನಡೆಸಲಾಗುತ್ತಿದೆ ಶಿವಸೇನೆಯ 35 ಹಾಗೂ 5 ಪಕ್ಷೇತರ ಶಾಸಕರು ಉಪಸ್ಥಿತರಿರೋ ಮಾಹಿತಿ ಲಭ್ಯವಾಗಿದೆ. ವಿಶೇಷವೆಂದರೆ ಈ ಸಭೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾರ ಇಬ್ಬರು ಅತ್ಯಾಪ್ತ ಸಚಿವರು ಕೂಡ ಉಪಸ್ಥಿತರಿದ್ದಾರೆ. ಈ ಅಂಶ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

288 ಶಾಸಕರ ಬಲದ ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಬಹುಮತ ನಿರೂಪಿಸಲು ಯಾವುದೇ ಸರ್ಕಾರಕ್ಕೆ 145 ಶಾಸಕರ ಬೆಂಬಲ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ 169 ಶಾಸಕರ ಬಲ ಹೊಂದಿರುವ ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಕೂಟ ಸರ್ಕಾರ ಸ್ಥಿರವಾಗಿದೆ ಎಂದೇ ಭಾವಿಸಲಾಗಿತ್ತು.

ಇದನ್ನು ಓದಿ ದ್ರೌಪದಿ ಮುರ್ಮು ರಾಷ್ಟ್ರದ ಶ್ರೇಷ್ಠ ರಾಷ್ಟ್ರಪತಿಯಾಗುತ್ತಾರೆ – ಪ್ರಧಾನಿ ಮೋದಿ ವಿಶ್ವಾಸ

ಈಗ ಏಕ್​ನಾಥ್ ಶಿಂಧೆ ಹೇಳಿದಂತೆ 45 ಶಾಸಕರು ಬೆಂಬಲ ಹಿಂತೆಗೆದುಕೊಂಡ ಪಕ್ಷದಲ್ಲಿ 124 ಕ್ಕೆ ಮೈತ್ರಿಕೂಟದ ಶಾಸಕ ಬಲ ಕುಸಿಯಲಿದೆ, ಸರ್ಕಾರ ಮಹಾಪತನವಾಗುತ್ತೆ. ಈ ಹಿನ್ನೆಲೆಯಲ್ಲಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ, ಎನ್​ಸಿಪಿ ಹಾಗೂ ಕಾಂಗ್ರೆಸ್ ನಾಯಕರು ಹರಸಾಹಸ ಮಾಡುತ್ತಿದ್ದಾರೆ.

error: Content is protected !!