ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಮಹಾ ಪತನವಾಗುವ ಹಂತಕ್ಕೆ ಬಂದಿದೆ. ಮಹಾ ಬಂಡಾಯ ನಾಯಕ ಏಕ್ನಾಥ್ ಶಿಂಧೆ ನೇತೃತ್ವದಲ್ಲಿ 40 ಹೆಚ್ಚು ಶಾಸಕರುಗಳು ಅಸ್ಸಾಂನ ಗುವಾಹಟಿಯ ರೆಡಿಸನ್ ಬ್ಲೂ ರೆಸಾರ್ಟ್ನಲ್ಲಿ ಬೀಡು ಬಿಟ್ಟಿದ್ದಾರೆ.
ಮಹಾ ಬಂಡಾಯ ನಾಯಕ ಶಿವಸೇನೆಯ ಏಕ್ನಾಥ್ ಶಿಂಧೆ ತಮಗೆ 45 ಶಾಸಕರ ಬೆಂಬಲವಿದೆ ಎಂದು ಘೋಷಿಸಿದ್ದಾರೆ. ಅಲ್ಲದೇ, ರೆಸಾರ್ಟ್ನಲ್ಲಿ ಮಹತ್ವದ ಸಭೆ ಕೂಡ ನಡೆಸಲಾಗುತ್ತಿದೆ ಶಿವಸೇನೆಯ 35 ಹಾಗೂ 5 ಪಕ್ಷೇತರ ಶಾಸಕರು ಉಪಸ್ಥಿತರಿರೋ ಮಾಹಿತಿ ಲಭ್ಯವಾಗಿದೆ. ವಿಶೇಷವೆಂದರೆ ಈ ಸಭೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾರ ಇಬ್ಬರು ಅತ್ಯಾಪ್ತ ಸಚಿವರು ಕೂಡ ಉಪಸ್ಥಿತರಿದ್ದಾರೆ. ಈ ಅಂಶ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
288 ಶಾಸಕರ ಬಲದ ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಬಹುಮತ ನಿರೂಪಿಸಲು ಯಾವುದೇ ಸರ್ಕಾರಕ್ಕೆ 145 ಶಾಸಕರ ಬೆಂಬಲ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ 169 ಶಾಸಕರ ಬಲ ಹೊಂದಿರುವ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಕೂಟ ಸರ್ಕಾರ ಸ್ಥಿರವಾಗಿದೆ ಎಂದೇ ಭಾವಿಸಲಾಗಿತ್ತು.
ಇದನ್ನು ಓದಿ – ದ್ರೌಪದಿ ಮುರ್ಮು ರಾಷ್ಟ್ರದ ಶ್ರೇಷ್ಠ ರಾಷ್ಟ್ರಪತಿಯಾಗುತ್ತಾರೆ – ಪ್ರಧಾನಿ ಮೋದಿ ವಿಶ್ವಾಸ
ಈಗ ಏಕ್ನಾಥ್ ಶಿಂಧೆ ಹೇಳಿದಂತೆ 45 ಶಾಸಕರು ಬೆಂಬಲ ಹಿಂತೆಗೆದುಕೊಂಡ ಪಕ್ಷದಲ್ಲಿ 124 ಕ್ಕೆ ಮೈತ್ರಿಕೂಟದ ಶಾಸಕ ಬಲ ಕುಸಿಯಲಿದೆ, ಸರ್ಕಾರ ಮಹಾಪತನವಾಗುತ್ತೆ. ಈ ಹಿನ್ನೆಲೆಯಲ್ಲಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ, ಎನ್ಸಿಪಿ ಹಾಗೂ ಕಾಂಗ್ರೆಸ್ ನಾಯಕರು ಹರಸಾಹಸ ಮಾಡುತ್ತಿದ್ದಾರೆ.
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
More Stories
ನಂಬುಗೆಯೇ ಇಂಬು
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.