ಅಣುವಿದ್ಯುತ್ ಕೇಂದ್ರದಲ್ಲಿ 4,374 ಹುದ್ದೆಗಳಿಗೆ ಭರ್ತಿಗೆ ಕ್ರಮ – 10ನೇ ತರಗತಿ ಓದಿದರೂ ಅರ್ಜಿ ಸಲ್ಲಿಸಿ

Team Newsnap
2 Min Read

ಮುಂಬೈನಲ್ಲಿರುವ ಬಾಬಾ ಅಣುವಿದ್ಯುತ್ ಪರಿಶೋಧನಾ ಕೇಂದ್ರ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದೆ.

ಈ ಹುದ್ದೆಗಳನ್ನು ನೇರ ನೇಮಕಾತಿ ಮತ್ತು ತರಬೇತಿ ಯೋಜನೆಯಡಿ ಭರ್ತಿ ಮಾಡಲಾಗುತ್ತದೆ.

ಡಿಎಇ ಇಲಾಖೆಗಳಲ್ಲಿನ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಏಪ್ರಿಲ್ 24 ರಿಂದ ಮೇ 22 ರವರೆಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಸಂಖ್ಯೆ 4,374. ಇದರಲ್ಲಿ 212 ಹುದ್ದೆಗಳನ್ನ ನೇರ ನೇಮಕಾತಿ ಅಡಿಯಲ್ಲಿ ಮತ್ತು 4,162 ಹುದ್ದೆಗಳನ್ನು ತರಬೇತಿ ಯೋಜನೆಯಡಿ ಭರ್ತಿ ಮಾಡಲಾಗುತ್ತದೆ.

ನೇರ ನೇಮಕಾತಿ ಅಡಿಯಲ್ಲಿ ಭರ್ತಿ ಮಾಡಬೇಕಾದ ಹುದ್ದೆಗಳ ಪೈಕಿ, ಟೆಕ್ನಿಕಲ್ ಆಫೀಸರ್/ ಸಿ 181 ಹುದ್ದೆಗಳು, ವೈಜ್ಞಾನಿಕ ಸಹಾಯಕ/ ಬಿ 7 ಹುದ್ದೆಗಳು, ತಂತ್ರಜ್ಞ/ ಬಿ 24 ಹುದ್ದೆಗಳು. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 56,100 ರೂಪಾಯಿ, ಎಸ್‌ಎಗೆ 35,400 ರೂಪಾಯಿ ಮತ್ತು ತಂತ್ರಜ್ಞರ ಹುದ್ದೆಗಳಿಗೆ 21,700 ರೂಪಾಯಿ ನೀಡಲಾಗುತ್ತದೆ.

ತರಬೇತಿ ಯೋಜನೆ (ಸ್ಟೈಪೆಂಡಿಯರಿ ಟ್ರೈನಿ) ಪ್ರವರ್ಗ-1ರಲ್ಲಿ 1216 ಹುದ್ದೆಗಳು, ಪ್ರವರ್ಗ-2ರಲ್ಲಿ 2946 ಹುದ್ದೆಗಳಿವೆ. ಆಯ್ಕೆಯಾದ ಅಭ್ಯರ್ಥಿಗಳು ಪ್ರವರ್ಗ-1ಕ್ಕೆ 24,000 ರೂಪಾಯಿಂದ 26,000 ಮತ್ತು ಪ್ರವರ್ಗ-2ಕ್ಕೆ 20,000 ರಿಂದ 22,000 ವರೆಗೆ ವೇತನವನ್ನ ಪಡೆಯುತ್ತಾರೆ.

ಅರ್ಹತೆಗಳು :

ಹುದ್ದೆಗೆ ಅನುಗುಣವಾಗಿ 10ನೇ, 12ನೇ, ಐಟಿಐ, ಡಿಪ್ಲೊಮಾ, ಬಿಇ, ಬಿಟೆಕ್, ಬಿಎಸ್ಸಿ, ಎಂಎಸ್ಸಿ, ಎಂಎಲ್‌ಐಎಸ್‌ಸಿ ತೇರ್ಗಡೆಯಾಗಿರಬೇಕು.

ವಯಸ್ಸಿನ ಮಿತಿ :

ಅಭ್ಯರ್ಥಿಗಳ ವಯಸ್ಸು ಟೆಕ್ನಿಕಲ್ ಆಫೀಸರ್‌ಗೆ 18-35 ವರ್ಷಗಳು, ಸೈಂಟಿಫಿಕ್ ಅಸಿಸ್ಟೆಂಟ್‌ಗೆ 18-30 ವರ್ಷಗಳು, ತಂತ್ರಜ್ಞರಿಗೆ 18-25 ವರ್ಷಗಳು, ಸ್ಟೈಪೆಂಡಿಯರಿ ಟ್ರೈನಿ ಪ್ರವರ್ಗ-1 ಕ್ಕೆ 19-24 ವರ್ಷಗಳು ಮತ್ತು ಸ್ಟೈಪಂಡಿಯರಿ ಟ್ರೇನಿ ಕೆಟಗರಿ-2 ಗೆ 18-22 ವರ್ಷಗಳು 22 ಮೇ 2023 ರಂದು.

ಅರ್ಜಿ ಶುಲ್ಕ :

ಸಾಮಾನ್ಯ ವರ್ಗ 500 ರೂಪಾಯಿ ಆಗಿದ್ರೆ, SC/ST, ಅಂಗವಿಕಲರು ಮತ್ತು ಮಹಿಳೆಯರಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಇದೆ.

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಪ್ರಾಥಮಿಕ ಪರೀಕ್ಷೆ, ಸುಧಾರಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಸಂದರ್ಶನ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಇತ್ಯಾದಿಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಪೂರ್ವಭಾವಿ ಪರೀಕ್ಷೆ :

50 ಪ್ರಶ್ನೆಗಳಿಗೆ ಉತ್ತರಿಸಬೇಕು. ಇದರಲ್ಲಿ ಗಣಿತದಲ್ಲಿ 20, ವಿಜ್ಞಾನದಲ್ಲಿ 20 ಮತ್ತು ಸಾಮಾನ್ಯ ಜಾಗೃತಿಯಲ್ಲಿ 10 ಪ್ರಶ್ನೆಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ಸರಿಯಾದ ಉತ್ತರಕ್ಕೆ ಮೂರು ಅಂಕಗಳನ್ನು ನಿಗದಿಪಡಿಸಿದರೆ, ಪ್ರತಿ ತಪ್ಪು ಉತ್ತರಕ್ಕೆ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ.

ಇದನ್ನು ಓದಿ –ಕಾರುಗಳ ಮುಖಾಮುಖಿ ಡಿಕ್ಕಿ – ದಂಪತಿ, ಮೂವರ ಪುತ್ರಿಯರ ದುರಂತ ಸಾವು

ಪ್ರತಿಭಾವಂತ ಅಭ್ಯರ್ಥಿಗಳಿಗೆ ಸುಧಾರಿತ ಪರೀಕ್ಷೆ ಇರುತ್ತದೆ. ಇದರ ನಂತರ ಕೌಶಲ್ಯ ಪರೀಕ್ಷೆ ನಡೆಯಲಿದೆ.

Share This Article
Leave a comment