ಹಾಸನಾಂಬೆ ದೇಗುಲದ ಹುಂಡಿಯಲ್ಲಿ 4.51 ಕೋಟಿ ರು ಸಂಗ್ರಹ

Team Newsnap
1 Min Read

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಉತ್ಸವ ಈ ಬಾರಿ ಅದ್ಧೂರಿಯಾಗಿ ಸಂಪನ್ನಗೊಂಡಿದೆ. , ಈ ವರ್ಷ ಅ. 13 ರಿಂದ ಅ. 27 ರ ವರೆಗೆ ನಡೆದಿದ್ದ ಹಾಸನಾಂಬೆ ಉತ್ಸವ ಸಂದರ್ಭದಲ್ಲಿ 4.51 ಕೋಟಿ ಆದಾಯ ಸಂಗ್ರಹವಾಗಿದೆ.

ಸತತ 12 ಗಂಟೆಗಳಿಂದ ನಡೆದ ಹಾಸನಾಂಬೆ ದೇಗುಲದ ಹುಂಡಿ ಎಣಿಕೆ ಕಾರ್ಯ ತಡ ರಾತ್ರಿ ಅಂತ್ಯವಾಗಿದೆ, ಈ ವರ್ಷ ಒಟ್ಟು ಹಾಸನಾಂಬೆ ಉತ್ಸವದಿಂದ 3 ಕೋಟಿ 69 ಲಕ್ಷದ 51 ಸಾವಿರದ 251 ರೂ ಆದಾಯ ಸಂಗ್ರಹವಾಗಿದೆ.
ಹಾಸನಾಂಬೆ ಉತ್ಸವದಲ್ಲಿ ಆರು ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆದಿದ್ದಾರೆ, ಭಕ್ತರಿಂದ ಕಾಣಿಕೆ ರೂಪದಲ್ಲಿ 1 ಕೋಟಿ 88 ಲಕ್ಷದ 40 ಸಾವಿರದ 935 ರೂ. ಸಂಗ್ರಹವಾಗಿದೆ.

ವಿಶೇಷ ದರ್ಶನದ ಪಾಸ್ ಮಾರಾಟದಿಂದ 1 ಕೋಟಿ 48 ಲಕ್ಷದ,27 ಸಾವಿರದ 600 ರೂ ಸಂಗ್ರಹವಾಗಿದೆ. ಇನ್ನು ಲಡ್ಡು ಪ್ರಸಾದ ಮಾರಾಟ ದಿಂದ 32 ಲಕ್ಷದ 82 ಸಾವಿರದ 716 ರೂ ಆದಾಯ ಬಂದಿದೆ. ಎಲ್ಲಾ ಮೂಲಗಳೂ ಸೇರಿ ಒಟ್ಟು 3,69,51,251 ರೂ ಸಂಗ್ರಹವಾದಂತಾಗಿದೆ.

ಹಾಸನಾಂಬೆ ದರ್ನದ ವೇಳೆ ಸಂಗ್ರಹದಲ್ಲಿ ಎರಡನೇ ಅತಿ ಹೆಚ್ಚು ಮೊತ್ತದ ದಾಖಲೆಯ ಆದಾಯ ಸಂಗ್ರಹವಾಗಿದೆ. ಕೋವಿಡ್ ಸಂದರ್ಭ ದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಇಲ್ಲದೆ ಆದಾಯ ಕುಸಿದಿತ್ತು. ಈ ಬಾರಿ ಮತ್ತೆ ಕೋಟಿ ಕೋಟಿ ಆದಾಯ ಸಂಗ್ರಹವಾಗಿದೆ.

ಉಪ ವಿಭಾಗಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ, ಮುಜರಾಯಿ ಇಲಾಖೆ ಸಿಬ್ಬಂದಿ, ಸ್ಕೌಟ್ಸ್​ & ಗೈಡ್ಸ್​ ಸ್ವಯಂಸೇವಕರಿಂದ ಹುಂಡಿ ಎಣಿಕೆ ಕಾರ್ಯ ನಡೆದಿತ್ತು.

ಈ ಹಿಂದೆ 2017 ರಲ್ಲಿ ಅತಿ ಹೆಚ್ಚು 4.14 ಕೋಟಿ ಹಣ ಸಂಗ್ರಹವಾಗಿತ್ತು. 2017ರ ಹೊರತುಪಡಿಸಿ ಈ ವರ್ಷ ಅತಿ ಹೆಚ್ಚು ಆದಾಯ ಹರಿದುಬಂದಿದೆ.

Share This Article
Leave a comment