ಅಪ್ಪುಗೆ ಕೆಎಂಎಫ್​ನಿಂದ ವಿಶೇಷ ಗೌರವ! ನಂದಿನಿ ಹಾಲಿನ ಪ್ಯಾಕೇಟ್​ನಲ್ಲಿ ಗಂಧದಗುಡಿ ಹೆಸರು

Team Newsnap
1 Min Read

ನಂದಿನಿ ಹಾಲಿನ ಪ್ಯಾಕೇಟ್ ನಲ್ಲಿ ಗಂಧದಗುಡಿ ಹೆಸರನ್ನು ಮುದ್ರಿಸಿದೆ ಕೆಎಂಎಫ್ ವಿಭಿನ್ನವಾಗಿ ಗೌರವ ತೋರಿದೆ.ಮುಂದಿನ 15 ದಿನಗಳ ಕಾಲ ಹಾಲಿನ ಪ್ಯಾಕೆಟ್ ಮೇಲೆ ಗಂಧದಗುಡಿ ಹೆಸರನ್ನು ಮುದ್ರಿಸಿ KMF ನಿರ್ಧರಿಸಿದೆ. ಕರ್ನಾಟಕ ರತ್ನ ನೀಡುತ್ತಿರುವ ಸಲುವಾಗಿಯೂ ಈ ರೀತಿ ಗೌರವಿಸಲು ಕೆಎಂಎಫ್ ನಿರ್ಧರಿಸಲಾಗಿದೆ.

ಗಂಧದಗುಡಿ ಸಿನಿಮಾಗೆ ಕೆಎಂಎಫ್ ಸಹ ತನ್ನ ಬೆಂಬಲ ನೀಡಿದೆ.ಈ ಮೂಲಕ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪುನೀತ್ ರಾಜ್​ಕುಮಾರ್ ಅವರಿಗೆ ಗೌರವ ಸಲ್ಲಿಸಲು ಮುಂದಾಗಿದೆ.13 ವರ್ಷದ ಬಾಲಕಿಗೆ ಹೃದಯಾಘಾತ : ದಿಢೀರ್​​​ ಕುಸಿದು ಬಿದ್ದು ಸಾವು

ಪುನೀತ್ ರಾಜ್​ಕುಮಾರ್ ಈ ಹಿಂದೆ KMFನ ಬ್ರಾಂಡ್ ಅಂಬಾಸಿಡರ್ ಆಗಿದ್ರು. ಹೀಗೆ ತನ್ನ ಅಂಬಾಸಿಡರ್ ಆಗಿದ್ದ ಅಪ್ಪು ರೈತರ ಸಹಾಯಕ್ಕೂ ಕೈ ಜೋಡಿಸಿದ್ದರು. ಹೀಗಾಗಿ ಕೆಎಂಎಫ್ ಈ ಮೂಲಕ ವಿಶೇಷವಾಗಿ ಗೌರವ ಸಲ್ಲಿಸಲು ಕೆಎಂಎಫ್ ಮುಂದಾಗಿದೆ. ಹಾಲಿನ ಪ್ಯಾಕೆಟ್ ಮೇಲೆ ಗಂಧದ ಗುಡಿ ಹೆಸರನ್ನು ಪ್ರಿಂಟ್ ಮಾಡೋ ಮೂಲಕ ಅಪ್ಪುಗೆ ಗೌರವ ಸಲ್ಲಿಕೆ ಮಾಡಲಾಗಿದೆ.

Share This Article
Leave a comment