ಕರ್ನಾಟಕದ 8 ರೈಲ್ವೆ ನಿಲ್ದಾಣಗಳ ಉನ್ನತೀಕರಣಕ್ಕೆ 347 ಕೋಟಿ ರೂ – ಯಾವ ನಿಲ್ದಾಣಗಳನ್ನು ಎಷ್ಟು ಕೋಟಿ

Team Newsnap
2 Min Read

ಮೈಸೂರು – ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ 508 ರೈಲ್ವೆ ನಿಲ್ದಾಣಗಳಿಗೆ ವಿಡಿಯೋ ಕಾನ್ಫೆರನ್ಸ್ ಮೂಲಕ ಶಿಲಾನ್ಯಾಸ ಮಾಡಲಿದ್ದಾರೆ.

ಈ ಪೈಕಿ ಮೈಸೂರು, ಹುಬ್ಬಳ್ಳಿ ರೈಲ್ವೆ ವಿಭಾಗದಿಂದ 15 ರೈಲು ನಿಲ್ದಾಣಗಳ ಉನ್ನತೀಕರಣ ಮಾಡಲಾಗುತ್ತಿದೆ. ಕರ್ನಾಟಕದ 8 ಪ್ರಮುಖ ರೈಲು ನಿಲ್ದಾಣಗಳನ್ನು ಹತ್ತಾರು ಕೋಟಿ ರೂಪಾಯಿ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು ಮೊದಲ ಹಂತದ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 6ರಂದು ದೇಶದಾದ್ಯಂತ 508 ರೈಲ್ವೆ ನಿಲ್ದಾಣಗಳಿಗೆ ವಿಡಿಯೋ ಕಾನ್ಫೆರನ್ಸ್ ಮೂಲಕ ಶಿಲಾನ್ಯಾಸ ಮಾಡಲಿದ್ದಾರೆ. ಈ ಪೈಕಿ ಮೈಸೂರು ರೈಲ್ವೆ ವಿಭಾಗದಿಂದ 15 ರೈಲು ನಿಲ್ದಾಣಗಳ ಉನ್ನತೀಕರಣ ಮಾಡಲಾಗುತ್ತಿದೆ. ಚಂದ್ರಯಾನ 3 ಗಗನ ನೌಕೆ: ನಾಳೆ ಚಂದ್ರನ ಕಕ್ಷೆಗೆ ಲಗ್ಗೆ

  • ಮೂಲಸೌಕರ್ಯ, ನಿಲ್ದಾಣ ನವೀಕರಿಸಿ ಮೇಲ್ದರ್ಜೆಗೆರಿಸಲು ಭಾರತೀಯ ರೈಲ್ವೆ ಇಲಾಖೆ.
  • ಈ ವರ್ಷದ ಬಜೆಟ್ ನಲ್ಲಿ ರಾಜ್ಯಕ್ಕೆ 7,561ಕೋಟಿ ಬಿಡುಗಡೆ ಮಾಡಲಾಗಿದೆ.
  • ಮೈಸೂರು ವಿಭಾಗದ ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ 347 ಕೋಟಿ ರೂ ಮಂಜೂರಾಗಿದೆ.
food , security , Yojana

ಮೈಸೂರು ರೈಲ್ವೆ ವಿಭಾಗದ 15 ರೈಲ್ವೆ ನಿಲ್ದಾಣಗಳನ್ನ ಅಭಿವೃದ್ಧಿ ಪಡಿಸಲಾಗುತ್ತಿದ್ದು ಆಗಸ್ಟ್ 6ರಂದು ಪ್ರಧಾನಿ ಮೋದಿ ಅವರು ಚಾಲನೆ ನೀಡಲಿದ್ದಾರೆ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮೈಸೂರು ವಿಭಾಗದ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ ವಾಲ್ ಮಾಹಿತಿ ನೀಡಿದರು. 5 ಲಕ್ಷ. ರು ಲಂಚ ಸ್ವೀಕಾರ ವೇಳೆ ‘ಲೋಕಾ’ ಬಲೆಗೆ ಬಿದ್ದ ಬಿಬಿಎಂಪಿ ಕಂದಾಯ ಅಧಿಕಾರಿ

ಯಾವ ಯಾವ ನಿಲ್ದಾಣಗಳನ್ನು ಎಷ್ಟು ಕೋಟಿ ರೂ.ಗಳಲ್ಲಿ ?

  • ಮೈಸೂರು ವಿಭಾಗ
    • ಅರಸೀಕೆರೆ ನಿಲ್ದಾಣವನ್ನು 34.1 ಕೋಟಿ
    • ಹರಿಹರ ರೈಲು ನಿಲ್ದಾಣ 25.2 ಕೋಟಿ ರೂ.
  • ಹುಬ್ಬಳ್ಳಿ ವಿಭಾಗದಲ್ಲಿ
    • ಅಳ್ಳಾವರ ನಿಲ್ದಾಣ 17.2 ಕೋಟಿ
    • ಘಟಪ್ರಭಾ ನಿಲ್ದಾಣ 18.02 ಕೋಟಿ
    • ಗೋಕಾಕ್ ರೋಡ್ 17 ಕೋಟಿ
    • ಗದಗ 23.2 ಕೋಟಿ
    • ಕೊಪ್ಪಳ 21.1 ಕೋಟಿ
    • ಬಳ್ಳಾರಿ ನಿಲ್ದಾಣವನ್ನು 16.7 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ.

#mysorenews #railways #railwaymysore #karnataka #india #mandya #huballi #bellary #railwaynews #railwayupdate #karnatakanews #kannadanews ಕರ್ನಾಟಕದ 8 ರೈಲ್ವೆ ನಿಲ್ದಾಣಗಳ ಉನ್ನತೀಕರಣಕ್ಕೆ 347 ಕೋಟಿ ರೂ – ಯಾವ ನಿಲ್ದಾಣಗಳನ್ನು ಎಷ್ಟು ಕೋಟಿ – 347 crores for upgradation of 8 railway stations in Karnataka – which stations and how many crores

Share This Article
Leave a comment