5 ಲಕ್ಷ. ರು ಲಂಚ ಸ್ವೀಕಾರ ವೇಳೆ ‘ಲೋಕಾ’ ಬಲೆಗೆ ಬಿದ್ದ ಬಿಬಿಎಂಪಿ ಕಂದಾಯ ಅಧಿಕಾರಿ

Team Newsnap
1 Min Read

ಬೆಂಗಳೂರು: 5 ಲಕ್ಷ ರೂಪಾಯಿ ಲಂಚ ಪಡೆಯುವ ವೇಳೆ ಬಿಬಿಎಂಪಿ ಕಂದಾಯ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶುಕ್ರವಾರ ನಡೆದಿದೆ.

ಬಿಬಿಎಂಪಿಯ ಮಹದೇವಪುರ ಕಂದಾಯ ಕಚೇರಿಯಲ್ಲಿ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ನಟರಾಜ್ ಲೋಕಾಯುಕ್ತ ಬಲೆಗೆ ಬಿದ್ದವರು.

ನಿವೇಶನದ ಖಾತೆ ಮಾಡಿಸಿಕೊಡಲು ಮುಂಗಡವಾಗಿ 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಇನ್ಸ್ ಪೆಕ್ಟರ್ ಮಂಜುನಾಥ್ ಹೂಗಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

ಕಚೇರಿಯಲ್ಲಿ ಲಂಚದ ಹಣ ಪಡೆಯುತ್ತಿದ್ದಾಗಲೇ ಕಂದಾಯ ನಿರೀಕ್ಷಕ ಸಿಕ್ಕಿಬಿದ್ದಿದ್ದಾರೆ.ಚಂದ್ರಯಾನ 3 ಗಗನ ನೌಕೆ: ನಾಳೆ ಚಂದ್ರನ ಕಕ್ಷೆಗೆ ಲಗ್ಗೆ

ನಿನ್ನೆಯಷ್ಟೇ ಮಹದೇವಪುರ ಕಂದಾಯ ಕಚೇರಿ ಸೇರಿದಂತೆ ಬೆಂಗಳೂರಿನ 45 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರೂ ಈ ಅಧಿಕಾರಿ ಲಂಚ ಪಡೆದಿದ್ದಾರೆ.

Share This Article
Leave a comment