ಮೃತ ಪತಿಯ ಹೆಸರಲ್ಲಿ 3 ಕೋಟಿ ರು ವಂಚನೆ ಕೇಸ್​; ಆರೋಪಿ ಸುಪ್ರಿಯಾಳಿಗೆ ಮತ್ತೊಂದು ಶಾಕ್

Team Newsnap
1 Min Read

ಮೃತ ಗಂಡನ ನಕಲಿ ದಾಖಲೆ ನೀಡಿ ಮೂರು ಕೋಟಿ ವಿಮೆ ಹಣ ಪಡೆದುಕೊಂಡ ಪತ್ನಿ ವಿರುದ್ಧ ವಿಮಾ ​​ ಕಂಪನಿ ದೂರು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಟ್ವಸ್ಟ್ ಸಿಕ್ಕಿದೆ.

ಮೃತ ಕೃಷ್ಣ ಪ್ರಸಾದ್ ಗಾರಲಪಟ್ಟಿ ಎಂಬುವವರು ಟಾಟಾ ಎಐಎ ಲೈಫ್​ ಇನ್ಶ್ಯೂರೆನ್ಸ್ ಕಂಪನಿಯಲ್ಲಿ ವರ್ಷಕ್ಕೆ 51,777 ರೂಗಳನ್ನು ಕಟ್ಟುವ ಪಾಲಿಸಿ ಪಡೆದಿದ್ದರು.

ಆದರೆ ಮೂರು ವರ್ಷ ಪಾಲಿಸಿ ಕಟ್ಟುವ ಮುನ್ನವೇ ಸುಪ್ರಿಯಾ ಪತಿ ಮೃತಪಟ್ಟಿದ್ದರು. ಹೆಂಡತಿ ಸುಪ್ರಿಯಾರನ್ನು ನಾಮಿನಿ‌ ಮಾಡಿದ್ದ ಕಾರಣ, ಅದನ್ನೇ ದುರುಪಯೋಗ ಪಡಿಸಿಕೊಂಡ ಪತ್ನಿ ತನ್ನ ಗಂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅನ್​ಲೈನ್​ ಮೂಲಕ ವಿಮೆ ಹಣಕ್ಕಾಗಿ ಕ್ಲೈಮ್ ಮಾಡಿ 3 ಕೋಟಿ ಹಣವನ್ನು ಪಡೆದಿದ್ದರು.

ಸುಪ್ರಿಯಾ ಅಕೌಂಟ್ ಫ್ರೀಜ್

ಸುಳ್ಳು ಮಾಹಿತಿ ಹಾಗೂ ನಕಲಿ ದಾಖಲೆ ನೀಡಿ 3 ಕೋಟಿ ಕ್ಲೈಮ್ ಮಾಡಿದ್ದಾರೆ ಎಂಬುದು ಇನ್ಶ್ಯೂರೆನ್ಸ್​ ಕಂಪನಿಗೆ ತಡವಾಗಿ ತಿಳಿದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಮೃತನ ಪತ್ನಿಯ ವಿರುದ್ಧ ಇನ್ಶ್ಯೂರೆನ್ಸ್​ ಕಂಪನಿ ಕೋರಮಂಗಲ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಪಿ ಸುಪ್ರಿಯಾ ಅಕೌಂಟ್​​​ನಲ್ಲಿರುವ ಹಣವನ್ನು ಫ್ರೀಜ್​ ಮಾಡಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಇನ್ಶ್ಯೂರೆನ್ಸ್​ ಕಂಪನಿಯಿಂದ ಪಡೆದಿದರು.

ಮೂರು ಕೋಟಿ ಹಣದ ಪೈಕಿ ಇದುವರೆಗೆ ಸುಮಾರು 45 ಲಕ್ಷ ಹಣವನ್ನು ಸುಪ್ರಿಯಾ ಡ್ರಾ ಮಾಡಿರುವುದು ತಿಳಿದು ಬಂದಿದೆ.

ಮೂರು ಕೋಟಿ ಹಣದ ಪೈಕಿ, ಸುಪ್ರಿಯಾಳ HDFC ಅಕೌಂಟ್ ನಿಂದ 2.55 ಕೋಟಿ ಹಣವನ್ನು ಫ್ರೀಜ್ ಮಾಡಲಾಗಿದೆ. ಹೆಚ್ಚಿನ ಹಣ ಆರೋಪಿತೆಯ ಕೈಗೆ ಸಿಗದ ರೀತಿ ತಡೆಯಲೆಂದೇ ಪೊಲೀಸರು ಸುಪ್ರಿಯಾಳ ಅಕೌಂಟ್​ ಫ್ರೀಜ್ ಮಾಡಿದ್ದಾರೆ.

Share This Article
Leave a comment