ಮೃತ ಗಂಡನ ನಕಲಿ ದಾಖಲೆ ನೀಡಿ ಮೂರು ಕೋಟಿ ವಿಮೆ ಹಣ ಪಡೆದುಕೊಂಡ ಪತ್ನಿ ವಿರುದ್ಧ ವಿಮಾ ಕಂಪನಿ ದೂರು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಟ್ವಸ್ಟ್ ಸಿಕ್ಕಿದೆ.
ಮೃತ ಕೃಷ್ಣ ಪ್ರಸಾದ್ ಗಾರಲಪಟ್ಟಿ ಎಂಬುವವರು ಟಾಟಾ ಎಐಎ ಲೈಫ್ ಇನ್ಶ್ಯೂರೆನ್ಸ್ ಕಂಪನಿಯಲ್ಲಿ ವರ್ಷಕ್ಕೆ 51,777 ರೂಗಳನ್ನು ಕಟ್ಟುವ ಪಾಲಿಸಿ ಪಡೆದಿದ್ದರು.
ಆದರೆ ಮೂರು ವರ್ಷ ಪಾಲಿಸಿ ಕಟ್ಟುವ ಮುನ್ನವೇ ಸುಪ್ರಿಯಾ ಪತಿ ಮೃತಪಟ್ಟಿದ್ದರು. ಹೆಂಡತಿ ಸುಪ್ರಿಯಾರನ್ನು ನಾಮಿನಿ ಮಾಡಿದ್ದ ಕಾರಣ, ಅದನ್ನೇ ದುರುಪಯೋಗ ಪಡಿಸಿಕೊಂಡ ಪತ್ನಿ ತನ್ನ ಗಂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅನ್ಲೈನ್ ಮೂಲಕ ವಿಮೆ ಹಣಕ್ಕಾಗಿ ಕ್ಲೈಮ್ ಮಾಡಿ 3 ಕೋಟಿ ಹಣವನ್ನು ಪಡೆದಿದ್ದರು.
ಸುಪ್ರಿಯಾ ಅಕೌಂಟ್ ಫ್ರೀಜ್
ಸುಳ್ಳು ಮಾಹಿತಿ ಹಾಗೂ ನಕಲಿ ದಾಖಲೆ ನೀಡಿ 3 ಕೋಟಿ ಕ್ಲೈಮ್ ಮಾಡಿದ್ದಾರೆ ಎಂಬುದು ಇನ್ಶ್ಯೂರೆನ್ಸ್ ಕಂಪನಿಗೆ ತಡವಾಗಿ ತಿಳಿದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಮೃತನ ಪತ್ನಿಯ ವಿರುದ್ಧ ಇನ್ಶ್ಯೂರೆನ್ಸ್ ಕಂಪನಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿ ಸುಪ್ರಿಯಾ ಅಕೌಂಟ್ನಲ್ಲಿರುವ ಹಣವನ್ನು ಫ್ರೀಜ್ ಮಾಡಿದ್ದಾರೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಇನ್ಶ್ಯೂರೆನ್ಸ್ ಕಂಪನಿಯಿಂದ ಪಡೆದಿದರು.
ಮೂರು ಕೋಟಿ ಹಣದ ಪೈಕಿ ಇದುವರೆಗೆ ಸುಮಾರು 45 ಲಕ್ಷ ಹಣವನ್ನು ಸುಪ್ರಿಯಾ ಡ್ರಾ ಮಾಡಿರುವುದು ತಿಳಿದು ಬಂದಿದೆ.
ಮೂರು ಕೋಟಿ ಹಣದ ಪೈಕಿ, ಸುಪ್ರಿಯಾಳ HDFC ಅಕೌಂಟ್ ನಿಂದ 2.55 ಕೋಟಿ ಹಣವನ್ನು ಫ್ರೀಜ್ ಮಾಡಲಾಗಿದೆ. ಹೆಚ್ಚಿನ ಹಣ ಆರೋಪಿತೆಯ ಕೈಗೆ ಸಿಗದ ರೀತಿ ತಡೆಯಲೆಂದೇ ಪೊಲೀಸರು ಸುಪ್ರಿಯಾಳ ಅಕೌಂಟ್ ಫ್ರೀಜ್ ಮಾಡಿದ್ದಾರೆ.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
ಮುದ್ದುಲಕ್ಷ್ಮಿ ಸೀರಿಯಲ್ ನಟ ಚರಿತ್ ಬಾಳಪ್ಪ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನ
ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ