ಒಂದೇ ಮನೆಯಲ್ಲಿ ಅತ್ತೆ-ಸೊಸೆ ಇದ್ದರೆ ಯಾರಿಗೆ ದುಡ್ಡು ಹಾಕಬೇಕು? ಮನೆ ಯಜಮಾನಿ ಯಾರು? ಯಜಮಾನಿಗೆ ಬ್ಯಾಂಕ್ ಖಾತೆ ಇದೆಯಾ? ಎಲ್ಲವೂ ತೀರ್ಮಾನ ಆದನಂತರ ಗ್ಯಾರೆಂಟಿ ಜಾರಿ ಮಾಡುವ ಸಂಬಂಧ ನಿರ್ಧಾರ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಜೂನ್ 1ರಂದು ಕ್ಯಾಬಿನೆಟ್ ಇದೆ. ಅಂದು ಗೈಡ್‌ಲೈನ್ಸ್ ಬರಲಿದೆ. ಸ್ಟ್ರೈಕ್ ಮಾಡೋರಿಗೆ ಬೇಡ ಅನ್ನಲ್ಲ, ಮಾಡ್ಲಿ. 15 ಲಕ್ಷ ರೂ. ಪ್ರತಿಯೊಬ್ಬರ ಅಕೌಂಟ್‌ಗೆ ಹಾಕ್ತೀವಿ ಅಂದ್ರಲ್ಲಾ, ಹಾಕಿದ್ರಾ? ಮಗು ಹುಟ್ಟಿ ಇನ್ನೂ 15 ದಿನ ಆಗಿದೆ. ಬಟ್ಟೆ ಹೊಲಿಸಬೇಕು, ಅಳತೆ ಕೊಡಬೇಕು ಎಂದು ಗ್ಯಾರಂಟಿ ಯೋಜನೆಗಳ ಜಾರಿ ವಿಳಂಬವನ್ನು ಸಮರ್ಥಿಸಿಕೊಂಡರು.
ಮೊದಲು ಬಿಜೆಪಿ ಅವರು ಕೊಟ್ಟ ಭರವಸೆ ಬಗ್ಗೆ ಮಾತಾಡ್ಲಿ. ಜನರಿಗೆ ಕೊಟ್ಟ ಭರವಸೆ ಈಡೇರಿಸಬೇಕು. ಟೀಕೆ ಮಾಡಲಿ. ಒಂದು ಲಕ್ಷ ಸಾಲ ಮನ್ನಾ ಮಾಡ್ತೇವೆ ಅಂದ್ರು.. ಏನಾಯಿತು ಎಂದು ವಿಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಖಾತೆ ವಿಚಾರವಾಗಿ ರಾಮಲಿಂಗರೆಡ್ಡಿ ಅಸಮಾಧಾನ ಕುರಿತು ಪ್ರತಿಕ್ರಿಯಿಸಿ, ಪಕ್ಷದ ಹಿತದೃಷ್ಠಿಯಿಂದ ಭೇಟಿ ನೀಡಿ ಮಾತನಾಡಿದ್ದೇನೆ. ಕೆಲವೊಂದು ಊಹಾಪೋಹದ ಸ್ಟೋರಿ ಬಂದಿದೆ. ಎಂಟು ಬಾರಿ ಯಾರಾದರೂ ಆಯ್ಕೆಯಾಗಿದ್ರೆ ಅದು ರಾಮಲಿಂಗಾರೆಡ್ಡಿ. ಗ್ಯಾರಂಟಿ ಸಂಬಂಧಿಸಿದ ಖಾತೆ ವಹಿಸಿಕೊಳ್ಳಲು ಸಚಿವರ ಹಿಂದೇಟು.?
ನಾವು ಈ ಪಕ್ಷ ಕಟ್ಟಿದ್ದೇವೆ, ಬೆಳೆಸಿದ್ದೇವೆ. ಸಾಕಷ್ಟು ನೋವುಗಳನ್ನು ಅನುಭವಿಸಿದ್ದೇವೆ ಎಂದು ಹೇಳಿದರು.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ