ಮುಂದಿನ ಐಪಿಎಲ್ ಸೀಸನ್ ಗೆ ಎರಡು ಹೊಸ ತಂಡಗಳ ಘೋಷಣೆಯಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ10 ತಂಡಗಳು ಕಣಕ್ಕಿಳಿಯಲಿದೆ.
ಈಗಿರುವ 8 ತಂಡಗಳೊಂದಿಗೆ ಹೊಸದಾಗಿ ಎರಡು ತಂಡಗಳು ಸೇರ್ಪಡೆಯಾಗಿದೆ. ಈ ಎರಡು ಹೊಸ ತಂಡಗಳನ್ನುಆರ್ಪಿ ಸಂಜಯ್ ಗೊಯೇಂಕಾ ಹಾಗೂ ಸಿವಿಸಿ ಕ್ಯಾಪಿಟಲ್ಸ್ ಕಂಪೆನಿ ಖರೀದಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅಹಮದಾಬಾದ್ ಮತ್ತು ಲಕ್ನೋ ಎರಡು ಹೊಸ ತಂಡಗಳಾಗಿವೆ.
ಸಿವಿಸಿ ಕ್ಯಾಪಿಟಲ್ ಪಾರ್ಟ್ನರ್ಸ್ ಅಹಮದಾಬಾದ್ ಪಡೆದರೆ, ಆರ್ ಪಿಎಸ್ ಜಿ ಗ್ರೂಪ್ ಲಕ್ನೋ ತಂಡ ಪಡೆದಿದೆ.
ಅಂತಿಮವಾಗಿ ಆರ್ಪಿ ಸಂಜೀವ್ ಗೊಯೇಂಕಾ ಆರ್ಪಿಎಸ್ಜಿ ಗ್ರೂಪ್ 7 ಸಾವಿರ ಕೋಟಿಗೆ ಮೊದಲ ತಂಡವನ್ನು ಖರೀದಿಸಿತು.
2ನೇ ತಂಡವನ್ನು ಸಿವಿಸಿ ಕ್ಯಾಪಿಟಲ್ಸ್ ಪ್ರೈವೇಟ್ ಇಕ್ಯುಟಿ ಕಂಪೆನಿ 5,200 ಕೋಟಿಗೆ ಪಡೆದುಕೊಂಡಿದೆ.
ಸಂಜೀವ್ ಗೊಯೇಂಕಾ ಈ ಹಿಂದೆ ರೈಸಿಂಗ್ ಪುಣೆ ಜೈಂಟ್ಸ್ ತಂಡದ ಮಾಲೀಕರಾಗಿದ್ದರು. ಇದೀಗ ಮತ್ತೊಮ್ಮೆ ಐಪಿಎಲ್ ತಂಡವನ್ನು ಖರೀದಿಸಿದ್ದಾರೆ.
More Stories
ಮೈಸೂರು ರಾಜವಂಶದ ಪುತ್ರನ ನಾಮಕರಣ ಸಮಾರಂಭ
ಬೆಳ್ಳಂಬೆಳಗ್ಗೆ ಬೆಂಗಳೂರಿನ ಪ್ರೆಸ್ಟೀಜ್ ಗ್ರೂಪ್ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ
8 ದಿನಗಳಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ