December 21, 2024

Newsnap Kannada

The World at your finger tips!

Mangalore women dies due to low bp

ಲೋ ಬಿಪಿಯಿಂದ ಮಂಗಳೂರಿನ 19 ವರ್ಷದ ಯುವತಿ ಸಾವು

Spread the love

ಮಂಗಳೂರು : ಲೋ ಬಿಪಿಯಿಂದ ಹೃದಯಾಘಾತ ಸಂಭವಿಸಿ ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿನಿ ಮೃತಪಟ್ಟ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನಡೆದಿದೆ.

ಸುಮಾ(19) ಮೃತ ವಿದ್ಯಾರ್ಥಿನಿ. ಮಂಗಳೂರಿನಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತಿದ್ದ ಸುಮಾಗೆ ಆಗಾಗ ಆರೋಗ್ಯ ಕೈ ಕೊಟ್ಟಿದ್ದು ಲೋ ಬಿಪಿಯಾಗಿ ಹೃದಯಾಘಾತವಾಗಿ ಸಾವು ಸಂಭವಿಸಿದೆ. ಮೈಸೂರು ಲೋಕಸಭಾ ಕ್ಷೇತ್ರ – ಜಿಟಿ , ಸಾರಾ ನಡುವೆ ಜೆಡಿಎಸ್ ಟಿಕೆಟ್ ಗೆ ಪೈಪೋಟಿ.

ಕೆಲ ದಿನಗಳ ಹಿಂದೆ ಸುಮ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆದು ಮನೆಯಲ್ಲಿದ್ದರು.

ಆಗಸ್ಟ್ 9 ರಂದು ಅನಾರೋಗ್ಯದ ಕಾರಣ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಆ.11 ರಂದು ಮತ್ತೆ ಆರೋಗ್ಯ ಕೈಕೊಟ್ಟಿದೆ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ತುಮಕೂರಿನಲ್ಲಿ ದುರಂತ : ನೀರಿನಲ್ಲಿ ಮುಳುಗುವ ಬಾಲಕನನ್ನು ರಕ್ಷಿಸಲು ಹೋಗಿ ನಾಲ್ವರು ಜಲಸಮಾಧಿ

ಮತ್ತೆ ಆ.13 ರಂದು ಸಂಜೆ ಅಸ್ವಸ್ಥಗೊಂಡಿದ್ದಾರೆ, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಲೋ ಬಿಪಿಯಿಂದ ಮಂಗಳೂರಿನ 19 ವರ್ಷದ ಯುವತಿ ಸಾವು – A 19-year-old girl from Mangalore died due to low BP #lowbp #mangalore #india #news

Copyright © All rights reserved Newsnap | Newsever by AF themes.
error: Content is protected !!