ನಟ ಮಾಸ್ಟರ್ ಆನಂದ್‌ಗೆ 18 ಲಕ್ಷ ರು ವಂಚನೆ : ದೂರು ದಾಖಲು

Team Newsnap
1 Min Read
18 lakh fraud to actor Master Anand: File a complaint ನಟ ಮಾಸ್ಟರ್ ಆನಂದ್‌ಗೆ 18 ಲಕ್ಷ ರು ವಂಚನೆ : ದೂರು ದಾಖಲು #MasterAnand #Kannadanews

ನಟ, ನಿರೂಪಕ ಮಾಸ್ಟರ್ ಆನಂದ್‌ಗೆ ನಿವೇಶನ ಕೊಡುವುದಾಗಿ 18 .50 ಲಕ್ಷ ರು ವಂಚನೆ ಮಾಡಿರುವ ಕಂಪನಿ ವಿರುದ್ದ ದೂರು ದಾಖಲಾಗಿದೆ.

ನಿವೇಶನ ನೀಡೋದಾಗಿ ಮಲ್ಟಿ ಲೀಪ್ ವೆಂಚರ್ಸ್ ಹೆಸರಿನ ಕಂಪನಿಯು ಆನಂದ್ ಗೆ 18.50 ಲಕ್ಷ ರೂಪಾಯಿ ವಂಚನೆ ಮಾಡಿದೆ ಎಂದು ಕಂಪನಿ ವಿರುದ್ದ ಚಂದ್ರಲೇಔಟ್ ಠಾಣೆಗೆ ನೀಡಿರುವ ದೂರಿನಲ್ಲಿ ಮಾಸ್ಟರ್ ಆನಂದ್ ದೂರಿನಲ್ಲಿ ಹೇಳಿದ್ದಾರೆ.

ಬೆಂಗಳೂರಿನ ಕೊಮ್ಮಘಟ್ಟದ ರಾಮಸಂದ್ರ ಗ್ರಾಮದಲ್ಲಿ ನಿವೇಶನ ನೀಡುವುದಾಗಿ ಆ ಕಂಪೆನಿಯು ಹೇಳಿತ್ತು.

ಮನಿಕಾ ಕೆಂ.ಎಂ ಎಂಬ ಮಹಿಳೆ ನಿವೇಶನ ಖರೀದಿಸಲು ಸಾಲ ಸೌಲಭ್ಯ ಇರುವುದಾಗಿಯೂ ಹೇಳಿದ್ದರು. ಕಂಪನಿ ಮಾತು ಕೇಳಿಕೊಂಡು ಮಾಸ್ಟರ್ ಆನಂದ್ 2000 ಸ್ಕ್ರೇರ್ ಫೀಟ ಅಳತೆ ಸೈಟ್ ಗೆ 70 ಲಕ್ಷ ರು ಮಾತನಾಡಿ 18.50 ಲಕ್ಷರು ಮುಂಗಡ ನೀಡಿದ್ದರು

ಆದರೆ, 2020 ರ ಸೆಪ್ಟಂಬರ್ ನಿಂದ 2021 ರ ಅಕ್ಟೋಬರ್ ನ ಅವಧಿಯಲ್ಲಿ ಕಂಪನಿ ತನ್ನನ್ನು ವಂಚಿಸಿದೆ ಎಂದು ಗೊತ್ತಾಗಿದೆ.

ಮಾಸ್ಟರ್ ಆನಂದ್ ಹಾಗೂ ಪತ್ನಿ ಯಶಸ್ವಿನಿ ಹೆಸರಲ್ಲಿ ಖರೀದಿ ಪತ್ರವನ್ನೂ ಕಂಪನಿ ಮಾಡಿಕೊಟ್ಟಿತ್ತು. ಈ ನಡುವೆ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿತ್ತು ಕಂಪನಿ. ಈ ಬಗ್ಗೆ ವಿಚಾರಿಸಿದಾಗ ಯಾವುದೇ ಸ್ಪಂದನೆ ಸಹ ನೀಡದೆ ಮುಂಗಡ ಹಣ ಸಹ ವಾಪಸ್ ಮಾಡಿರಲಿಲ್ಲ ಎಂದು ವಂಚನೆ ಬಗ್ಗೆ ಚಂದ್ರಲೇಔಟ್ ಠಾಣೆಯಲ್ಲಿ ಮಾಸ್ಟರ್ ಆನಂದ್ ದೂರು ನೀಡಿದ್ದಾರೆ.ಪಾರ್ವತಮ್ಮ ರಾಜ್ ಕುಮಾರ್ ತಮ್ಮನ ಮಗನಿಗೆ ಅಪಘಾತ: ಬಲಗಾಲು ಕತ್ತರಿಸಿದ ವೈದ್ಯರು

ಬಿಯುಡಿಎಸ್ (ಅನಿಯಂತ್ರಿತ ಉಳಿತಾಯ ಯೋಜನೆಗಳ ನಿಷೇಧ ಕಾಯ್ದೆ ) ಕಾಯ್ದೆ 2019 ರ ಅಡಿ ಆರೋಪಿಗಳ ವಿರುದ್ದ ಎಫ್ ಐ ಆರ್ ದಾಖಲು ಮಾಡಲಾಗಿದೆ.

Share This Article
Leave a comment