ಮುಂಬಯಿ ದಾಳಿಗೆ 15 ವರ್ಷದ ಕರಾಳ ನೆನಪು : 166 ಮಂದಿಯನ್ನು ಹತ್ಯೆ ಮಾಡಿದ ಪಾಪಿಸ್ತಾನದ ಭಯೋತ್ಪಾದಕರು

Team Newsnap
1 Min Read
  • 26/11 ರಾತ್ರಿ ಮುಂಬೈ ನಗರವನ್ನು ಪ್ರವೇಶಿಸಿದ್ದ ರಕ್ತಪಿಪಾಸುಗಳು
  • ನಾಲ್ಕು ದಿನಗಳಲ್ಲಿ 166 ಜನರನ್ನು ಕೊಂದಿದ್ದ 10 ಮಂದಿ ಭಯೋತ್ಪಾದಕರು 

  • 2012ರಲ್ಲಿ ಸೆರೆಯಾದ ಕಸಾಬ್‌ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು 


ಮುಂಬಯಿ : ಭಾರತದ ರಕ್ಷಣಾ ವ್ಯವಸ್ಥೆಯನ್ನೇ ನಡುಗಿಸಿ, ಬೆಚ್ಚಿ ಬೀಳಿಸಿದ್ದ 26/11 ಭಯೋತ್ಪಾದಕ ದಾಳಿಗೆ ಬರೋಬ್ಬರಿ 15 ವರ್ಷ.

2008, ನವೆಂಬರ್ 26ರಂದು ದೇಶದ ವಾಣಿಜ್ಯ ರಾಜಧಾನಿ ಮುಂಬೈಯನ್ನು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರ 10 ಮಂದಿ ಗುಂಪು ಸುತ್ತುವರಿದ ರಕ್ತಪಿಪಾಸುಗಳು ನಾಲ್ಕು ದಿನಗಳಲ್ಲಿ 166 ಜನರನ್ನು ಕೊಂದು 300 ಜನರು ಗಾಯಗೊಳುವಂತೆ ಮಾಡಿದ್ದರು.

ಮುಂಬೈಗೆ ಎಂಟ್ರಿಕೊಟ್ಟಿದ್ದ ಲಷ್ಕರ್ ಉಗ್ರರು ತಾಜ್ ಮತ್ತು ಒಬೆರಾಯ್ ಹೊಟೇಲ್‌ ಅನ್ನೇ ಟಾರ್ಗೆಟ್ ಮಾಡಿದ್ದರು. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌, ನಾರಿಮನ್ ಹೌಸ್‌ನಲ್ಲಿರುವ ಯಹೂದಿ ಕೇಂದ್ರ ಮತ್ತು ಲಿಯೋಪೋಲ್ಡ್ ಕೆಫೆ ಮೇಲೂ ದಾಳಿ ಮಾಡಿದ್ದರು. ಮುಂಬೈನ ಬಹು ಬೇಡಿಕೆಯ ಈ ಜಾಗಗಳಿಗೆ ಯುರೋಪಿಯನ್ನರು, ಭಾರತೀಯರು ಮತ್ತು ಯಹೂದಿಗಳು ಹೆಚ್ಚಾಗಿ ಭೇಟಿ ನೀಡುತ್ತಿದ್ದರು.

ಈ ಮಾಹಿತಿಯ ಆಧಾರದ ಮೇಲೆ ಭಯೋತ್ಪಾದಕರು ಈ ಜಾಗಗಳನ್ನು ಆಯ್ಕೆ ಮಾಡಲಾಗಿತ್ತು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೇ ನಿಲ್ದಾಣದಲ್ಲಿ ಭಯಾನಕ ದಾಳಿ ನಡೆದಿತ್ತು. ಗುಂಡಿನ ಚಕಮಕಿಯಲ್ಲಿ ಒಂಬತ್ತು ಭಯೋತ್ಪಾದಕರು ಕೊಲ್ಲಲ್ಪಟ್ಟರು.

ಆದರೆ ಲಷ್ಕರ್‌ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಾಬ್‌ನನ್ನು ಮಾತ್ರ ಜೀವಂತವಾಗಿ ಬಂಧಿಸಲಾಗಿತ್ತು. ಮೇ 2010ರಲ್ಲಿ, ಕಸಾಬ್‌ಗೆ ಮರಣದಂಡನೆ ವಿಧಿಸಲಾಗಿತ್ತು. ಎರಡು ವರ್ಷಗಳ ನಂತರ ಪುಣೆ ಜೈಲಿನಲ್ಲಿ ಕಸಬ್‌ನನ್ನು ಗಲ್ಲಿಗೇರಿಸಲಾಯಿತು.ಮಂಡ್ಯ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ

26/ 11 ಭೀಕರವಾದ ಮುಂಬೈ ದಾಳಿಯು ಭಾರತದ ಭದ್ರತಾ ವ್ಯವಸ್ಥೆಯಲ್ಲಿ ಈಗಲೂ ಸವಾಲಾಗಿದೆ. ಇದರಿಂದ ಕಲಿತ ಪಾಠಗಳು ಭಯೋತ್ಪಾದನೆ ವಿರುದ್ಧದ ಹೋರಾಟ ಮತ್ತು ಜಾಗತಿಕ ಭದ್ರತೆಗೆ ನಿರ್ಣಾಯಕವಾಗಿವೆ. ಇದೀಗ 26/11 ದಾಳಿಯ 15ನೇ ವರ್ಷದಲ್ಲಿ ಹುತಾತ್ಮರಾದವರಿಗೆ ಮುಂಬೈನಲ್ಲಿ ನಮನ ಸಲ್ಲಿಸಲಾಗಿದೆ .

Share This Article
Leave a comment