ಮಂಡ್ಯ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ

Team Newsnap
1 Min Read

ಮಂಡ್ಯ

ಈ ಪ್ರದೇಶದಲ್ಲಿ ಮಾಂಡವ್ಯ ಋಷಿ ತಪಸ್ಸು ಮಾಡಿದ್ದು
ಅದೇ ಕಾರಣಕ್ಕೆ ಈ ಜಿಲ್ಲೆಗೆ ಮಂಡ್ಯ ಹೆಸರು ಬಂದಿದೆ
ಗಂಗರು ಹೊಯ್ಸಳರು ವಿಜಯನಗರದ ಅರಸರು
ಮೈಸೂರು ಅರಸರು ಟಿಪ್ಪು ಸುಲ್ತಾನ್ ಆಳಿದರು

ಶ್ರೀರಂಗಪಟ್ಟಣ ಮದ್ದೂರು ಮಳವಳ್ಳಿ ಪಾಂಡವಪುರ
ನಾಗಮಂಗಲ ಕೃಷ್ಣರಾಜಪೇಟೆ ಮಂಡ್ಯ ತಾಲೂಕುಗಳು
ಕಾವೇರಿ ಹೇಮಾವತಿ ಲೋಕಪಾವನಿ ಲಕ್ಷ್ಮಣ ತೀರ್ಥ
ಶಿಂಷಾ ಮತ್ತು ವೀರವೈಷ್ಣವಿ ಎಂದು ಇಲ್ಲಿನ ನದಿಗಳು

ಶಿವನಸಮುದ್ರ ಜಲಪಾತ,ಕೃಷ್ಣರಾಜಸಾಗರ ಅಣೆಕಟ್ಟು
ಕಬಿನಿ ಜಲಾಶಯ ಮತ್ತು ಚಿಕ್ಕ ಹೊಳೆ ಅಣೆಕಟ್ಟು
ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆ ಇದು
ಶಿವನ ಸಮುದ್ರದ ಮೊದಲ ವಿದ್ಯುತ್ ಸ್ಥಾವರವು

ಕಬ್ಬು ಭತ್ತ ರಾಗಿ ತೆಂಗು ಅವರೆ ಅಲಸಂದೆ ಹುಚ್ಚೆಳ್ಳು
ಹಿಪ್ಪು ನೇರಳೆ ಈ ಜಿಲ್ಲೆಯಲ್ಲಿನ ಪ್ರಮುಖ ಬೆಳೆಗಳು
ಸಕ್ಕರೆಯ ನಾಡು,ಮಧುರ ಮಂಡ್ಯ ಎಂಬ ಖ್ಯಾತಿ ಇದೆ
ಬಾಯಲ್ಲಿಟ್ಟರೆ ಕರಗುವ ಮದ್ದೂರು ವಡೆ ಹೆಸರಾಗಿದೆ

ರಂಗನ ತಿಟ್ಟು ಪಕ್ಷಿಧಾಮ ಕೊಕ್ಕರೆಬೆಳ್ಳೂರು ಪಕ್ಷಿಧಾಮ
ಕಾವೇರಿ ವನ್ಯಜೀವಿ ಅಭಯಾರಣ್ಯ ಆದಿಚುಂಚನಗಿರಿ
ನವಿಲು ಧಾಮ ಭೀಮೇಶ್ವರಿ ವನ್ಯಮೃಗ ಜೀವಿ ಧಾಮ
ಗಾಣಾಳು ಬೆಂಕಿ ಫಾಲ್ಸ್ ಹೇಮಗಿರಿ ಜಲಪಾತಗಳು

ಶ್ರೀರಂಗಪಟ್ಟಣದ ಟಿಪ್ಪು ಅರಮನೆ ಮತ್ತು ಕೋಟೆ
ಕಾವೇರಿ ನದಿ ಕವಲೊಡೆದು ಹರಿವ ಶ್ರೀರಂಗಪಟ್ಟಣ
ಇಲ್ಲಿನ ಆದಿರಂಗ ಶಿವನ ಸಮುದ್ರದ ಬಳಿ ಕವಲೊಡೆದ
ಮದ್ಯರಂಗ ಎಂಬ ರಂಗನಾಥನ ದೇವಾಲಯಗಳಿವೆ

ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರರ
ಸ್ಥಾಪಿತ ವೈಷ್ಣವ ಮಠ,ಚಲುವ ನಾರಾಯಣ ದೇಗುಲ
ನಾಗಮಂಗಲದ ಚನ್ನಕೇಶವ ಪಟ್ಟಲದಮ್ಮನ ಗುಡಿ
ಶಿವಪುರದ ಸತ್ಯಾಗ್ರಹ ಸೌಧ ಗರುಡಸ್ವಾಮಿ ಗುಡಿ

ಕವಿ ಬಿ ಎಮ್ ಶ್ರೀಕಂಠಯ್ಯನವರು ಕಾದಂಬರಿಕಾರ್ತಿ
ತ್ರಿವೇಣಿ,ಸಾಹಿತಿ ಎ ಎನ್ ಮೂರ್ತಿರಾವ್ ಪ್ರೇಮ ಕವಿ
ಕೆ ಎಸ್ ನರಸಿಂಹಸ್ವಾಮಿ ಜನಪದಗಾಯಕ ಬೋರಪ್ಪ
ಜಾನಪದ ಸಂಶೊಧಕ ರಾಮೇಗೌಡ ಮುಂತಾದವರು

ಜಾನಪದ ವಿದ್ವಾಂಶೆ ಲೇಖಕಿ ಜಯಲಕ್ಷ್ಮಿ ಸಿತಾಪುರ
ಕವಿ ಪು ತಿ ನರಸಿಂಹಾಚಾರ್ ಬಿ ಎಸ್ ಯಡಿಯೂರಪ್ಪ
ನಟ ಅಂಬರೀಶ್ ಮಂಡ್ಯ ರಮೇಶ್ ನಟಿ ರಮ್ಯರವರು
ಚಲನಚಿತ್ರ ನಿರ್ದೇಶಕ ಕೆ ಎಸ್ ಎಲ್ ಸ್ವಾಮಿಯವರು

ಇವರೆಲ್ಲ ಮಂಡ್ಯ ಜಿಲ್ಲೆಯ ಹೆಮ್ಮೆಯ ಖ್ಯಾತ ನಾಮರು
ಕರ್ನಾಟಕದ ಪಕ್ಷಿ ಧಾಮಗಳ ನಾಡೆಂದೂ ಖ್ಯಾತಯಿದೆ
ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಒದಗಿಸಿದ ಮೊದಲ
ವಿದ್ಯುತ್ ಘಟಕದ ಹೆಸರಿನ ಪ್ರಸಿದ್ಧಿ ಪಡೆದ ಜಿಲ್ಲೆಯಿದೆ

ಕಲಾವತಿ ಪ್ರಕಾಶ್

ಬೆಂಗಳೂರು

(ಜಿಲ್ಲೆ ೨೬)

Share This Article
Leave a comment