October 7, 2022

Newsnap Kannada

The World at your finger tips!

election,teachers,college

Egg ban now in Vidhana soudha!ವಿಧಾನಸೌಧದಲ್ಲಿ ಈಗ ಮೊಟ್ಟೆ ಬ್ಯಾನ್.! #thenewsnap #Latest_news #EGG #Ban #vidhana_soudha #siddu #congress #politics #india #siddharamaiah #kannada_news

15 ಸಾವಿರ ಶಾಲಾ ಶಿಕ್ಷಕ’ರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ’ಯ ಫಲಿತಾಂಶ ಪ್ರಕಟ

Spread the love

ರಾಜ್ಯದಲ್ಲಿ 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಈ ಕುರಿತಂತೆ ಮಾಹಿತಿ ನೀಡಿ 2022ರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ವೈಯಕ್ತಿಕ ಅಂಕಗಳನ್ನು ಇಲಾಖಾ ವೆಬ್ ಸೈಟ್(www.schooleducation.kar.nic.in)ನಲ್ಲಿ ಪ್ರಕಟಿಸಲಾಗಿದೆ. ಇದನ್ನು ಓದಿ –ಮಂಡ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಜಯರಾಮ ರಾಯಪುರ ನೇಮಕ

WhatsApp Image 2022 08 17 at 7.09.53 PM

ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳನ್ನು ಮತ್ತು ಮೀಸಲಾತಿ ವಿವರಗಳನ್ನು ಹೊರತುಪಡಿಸಿ, ಆನ್ ಲೈನ್ ಅರ್ಜಿಯಲ್ಲಿ ವೈಯಕ್ತಿಕ ವಿವರಗಳಾದ ಅಭ್ಯರ್ಥಿಯ ಹೆಸರು, ತಂದೆ ಹೆಸರು, ತಾಯಿ ಹೆಸರು, ಜನ್ಮ ದಿನಾಂಕ, ಪದವಿ, ಬಿಇಡಿ, ಡಿಎಲ್ ಇಡಿ ಮತ್ತು ಸಿಟಿಇಟಿ ಮತ್ತು ಟಿಇಟಿ ಅಂಕಗಳಿಗೆ ಸಂಬಂಧಿಸಿದಂತೆ ಮಾತ್ರ ತಿದ್ದುಪಡಿಗೆ ಅ.24 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ದಿನಾಂಕದ ನಂತರ ಯಾವುದೇ ಮನವಿಯನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದೆ.

error: Content is protected !!