146 ಕಿಮೀ ಸ್ಪೀಡ್​ನಲ್ಲಿ ತಲೆಗೆ ಬಡಿದ ಚೆಂಡು: ಆಸ್ಪತ್ರೆ ಸೇರಿದ ಇಶಾನ್​ ಕಿಶನ್​

Team Newsnap
1 Min Read

ಭಾರತ ಹಾಗೂ ಪ್ರವಾಸಿ ಶ್ರೀಲಂಕಾ ನಡುವಿನ ಎರಡನೇ ಟಿ-20 ಪಂದ್ಯದಲ್ಲಿ, ತಲೆಗೆ ಚೆಂಡು ಬಡಿದು ಗಾಯಗೊಂಡಿದ್ದ ಟೀಂ ಇಂಡಿಯಾದ ಆರಂಭಿಕ ಆಟಗಾರ ಇಶಾನ್​ ಕಿಶಾನ್​ ಅವರನ್ನು ಆಸ್ಪತ್ರಗೆ ದಾಖಲಿಸಲಾಗಿದೆ

ಆರಂಭಿಕ ಅಟಗಾರ ಇಶಾನ್​ ಕಿಶನ್​ಗೆ ಪವರ್​ ಪ್ಲೇನ 3ಮೇ ಓವರ್​ನಲ್ಲಿ ಬೌಲಿಂಗ್​ಗೆ ನಿಂತಿದ್ದ, ಶ್ರೀಲಂಕಾ ವೇಗಿ ಲಹಿರು ಕುಮಾರ್​ 146 ಕಿಮೀ ಸ್ಪೀಡ್​ನಲ್ಲಿದ್ದ ಎಸೆದ ಡೆಡ್ಲಿ ಬೌನ್ಸ್​​ರನ್ನು ಇಶಾನ್​ ಹಿಂದಕ್ಕೆ ಬಾರಿಸಲು ಯತ್ನಿಸಿದ್ದಾರೆ.

ಆದರೆ ಚೆಂಡು ಬ್ಯಾಟ್​ಗೆ ತಗುಲದ ಕಾರಣ ತಲೆಗೆ ಬಿದ್ದಿದೆ. ಈ ವೇಳೆ ನಿತ್ರಾಣಗೊಂಡ ಅವರು ಮೈದಾನದಲ್ಲೇ ಕುಳಿತುಕೊಳ್ಳುತ್ತಾರೆ.

ಈ ವೇಳೆ ಮೈದಾನಕ್ಕೆ ಆಗಮಿಸಿದ್ದ ಫಿಸಿಯೋ ಇಶಾನ್​ಗೆ ಲಘು ಆರೈಕೆ ಮಾಡಿ ತೆರಳಿದ್ದರು.

ನಂತರ ಬ್ಯಾಟ್​ ಹಿಡಿದು ನಿಂತ ಕಿಶಾನ್​ 5ನೇ ಓವರ್​ನಲ್ಲಿ ಔಟ್​ ಆಗಿ ಪೆವಿಲಿಯನ್​ ಸೇರಿಕೊಂಡರು. ಇನ್ನು ಮ್ಯಾಚ್​ ಮುಗಿದ ಬಳಿಕ ಅವರಿಗೆ ತೀವ್ರ ನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಕಾಂಗ್ರಾದ ಖಾಸಗಿ ಆಸ್ಪತ್ರಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

ಕಿಶನ್ ಹೆಲ್ಮೆಟ್​ ಧರಿಸಿದ್ದರಿಂದ ಹೆಚ್ಚಿನ ಅಪಾಯವೇನು ಆಗಿಲ್ಲ. ಅವರಿಗೆ ಸದ್ಯ ಪ್ರಾಥಮಿಕ ಚಿಕಿತ್ಸೆ ನೀಡಿದ್ದು ಸಿಟಿ ಸ್ಕ್ಯಾನ್​ ಮಾಡಲಾಗಿದೆ ಎಂದು ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article
Leave a comment