KRS ಭರ್ತಿಗೆ 13 ಅಡಿ ಬಾಕಿ : 22 ಸಾವಿರ ಕ್ಯೂಸೆಕ್ ಒಳಹರಿವು- ಕೊಡಗಿನಲ್ಲಿ ಮುಂದುವರೆದ ವರುಣಾರ್ಭಟ

Team Newsnap
1 Min Read

ಕಾವೇರಿ ಜಲನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಅಣೆಕಟ್ಟೆಗೆ ಭಾರಿ ಪ್ರಮಾಣದಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಕೊಡಗಿನಲ್ಲಿ ವರುಣನ ಆರ್ಭಟ ಮುಂದುವರೆದಿದೆ.

ಸೋಮವಾರ ಬೆಳಿಗ್ಗೆ 22466 ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ.

ಡ್ಯಾಂನ ಗರಿಷ್ಠ ಮಟ್ಟ 124.80 ಅಡಿ. ಇಂದಿನ ಮಟ್ಟ 110.64 ಅಡಿ . ಟಿಎಂಸಿ ಪ್ರಮಾಣದಲ್ಲಿ ಕೆಆರ್‌ಎಸ್ ಗರಿಷ್ಠ ಸಾಂದ್ರತೆ 49.452 ಟಿಎಂಸಿ. ಇಂದು 32370ಟಿಎಂಸಿಯಷ್ಟು ನೀರು ಇದೆ.

ಡ್ಯಾಂನಿಂದ 1,260ಕ್ಯೂಸೆಕ್ ನೀರನ್ನು ಹೊರಗಡೆ ಬಿಡುಗಡೆ ಮಾಡಲಾಗುತ್ತಿದೆ.

K T S ಸೇರಿದಂತೆ ಇಂದು ಮೂರು ಮಂದಿ MLC ನಿವೃತ್ತಿ: ಪರಿಷತ್ ನಲ್ಲಿ ಬಿಜೆಪಿಗೆ ಬಹುಮತ

ಕಾವೇರಿ ಜಲಾನಯನ ಪ್ರದೇಶದಲ್ಲಿ ಇದೇ ರೀತಿ ಮಳೆ ಮುಂದುವರಿದರೆ ಆಗಸ್ಟ್ ಎರಡನೇ ವಾರಕ್ಕೆ ಕೆಆರ್‌ಎಸ್ ಡ್ಯಾಂ ಭರ್ತಿಯಾಗಲಿದೆ. ಇದರಿಂದ ಮಂಡ್ಯ – ಮೈಸೂರು ಭಾಗದ ರೈತರು ಹಾಗೂ ಜನರಿಗೆ ಸಂತಸ.

Share This Article
Leave a comment