K T S ಸೇರಿದಂತೆ ಇಂದು ಮೂರು ಮಂದಿ MLC ನಿವೃತ್ತಿ: ಪರಿಷತ್ ನಲ್ಲಿ ಬಿಜೆಪಿಗೆ ಬಹುಮತ

Team Newsnap
1 Min Read

ಮಂಡ್ಯದ K T ಶ್ರೀಕಂಠೇಗೌಡರೂ ಸೇರಿದಂತೆ ಮೂವರು MLC ಗಳು ನಿವೃತ್ತಿರಾಗಲಿದ್ದಾರೆ.

ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದಂತ ಹಣಮಂತ ನಿರಾಣಿ, ಶಿಕ್ಷಕರ ಕ್ಷೇತ್ರದಿಂದ ಚುನಾವಯಿತರಾಗಿದ್ದಂತಹ ಅರುಣ್ ಶಹಾಪುರ, ಪದವೀಧರ ಕ್ಷೇತ್ರದಿಂದ ಚುನಾವಯಿತರಾಗಿದ್ದಂತಹ ಕೆ.ಟಿ ಶ್ರೀಕಂಠೇಗೌಡ ಅವರು ನಿವೃತ್ತಿಯಾಗಲಿದ್ದಾರೆ. ಇವರಲ್ಲಿ ಹಣಮಂತ ನಿರಾಣಿ ಮಾತ್ರ ಪುನರಾಯ್ಕೆಯಾಗಿದ್ದಾರೆ.

ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಸದಸ್ಯ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿರುವುದರಿಂದ ಆ ಸ್ಥಾನ ತೆರವಾಗಿದೆ. ಈ ನಾಲ್ಕೂ ಸ್ಥಾನಗಳಿಗೆ ಇತ್ತೀಚಿಗೆ ಚುನಾವಣೆ ಕೂಡ ನಡೆಸಲಾಗಿತ್ತು. ಬಿಜೆಪಿಯಿಂದ ಬಸವರಾಜ ಹೊರಟ್ಟಿ, ಹಣಮಂತ ನಿರಾಣಿ ಆಯ್ಕೆಯಾಗಿದ್ದರೇ, ಕಾಂಗ್ರೆಸ್ ನಿಂದ ಪ್ರಕಾಶ್ ಹುಕ್ಕೇರಿ, ಮಧು ಜಿ ಮಾದೇಗೌಡ ಚುನಾಯಿತರಾಗಿದ್ದರು.

ವಿಧಾನ ಪರಿಷತ್ ನಲ್ಲಿ ಪಕ್ಷಗಳ ಬಲಾಬಲ :

ವಿಧಾನ ಪರಿಷತ್ ನಲ್ಲಿ ಆಡಳಿತಾರೂಡ ಬಿಜೆಪಿ ಸಭಾಪತಿ ಸೇರಿ 38, ಕಾಂಗ್ರೆಸ್ 28 ಹಾಗೂ ಜೆಡಿಎಸ್ 8 ಸ್ಥಾನಗಳನ್ನು ಹೊಂದಿದೆ. ಒಬ್ಬ ಪಕ್ಷೇತರು ಕೂಡ ಇದ್ದಾರೆ.

ಈದ್ಗಾ ಮೈದಾನ- BBMP ಹೇಳಿಕೆ ಖಂಡಿಸಿ ಜು.12ಕ್ಕೆ ಬೆಂಗಳೂರಿನ ಚಾಮರಾಜಪೇಟೆ ಬಂದ್‌

ಬಿಜೆಪಿ ಮೇಲ್ಮನೆಯಲ್ಲಿ ಬಹುಮತ ಪಡೆಯುವದರಿಂದ ಖಾಲಿ ಇರುವ ಸಭಾಪತಿ, ಉಪಸಭಾಪತಿ ಸ್ಥಾನಗಳನ್ನು ಸುಲಭವಾಗಿ ಪಡೆಯಲಿದೆ. ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿ ಮುಂದುವರೆಯಲಿದೆ.

Share This Article
Leave a comment