ಬಡ್ಡಿರಹಿತವಾಗಿ 12,000 ಕೋಟಿ‌ ರು ರಾಜ್ಯ ಗಳಿಗೆ ಸಾಲ

Team Newsnap
1 Min Read

ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಬಡ್ಡಿರಹಿತ ಸಾಲವಾಗಿ 12,000 ಕೋಟಿ ನೀಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ತಿಳಿಸಿದರು.

ಸಾಲ ನೀಡಲು ನಿರ್ಧರಿಸಿರುವ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದ ಕೇಂದ್ರ ಸಚಿವೆ ನಿರ್ಮಲಾ ‘ಪ್ರತಿಯೊಂದು ರಾಜ್ಯಗಳಿಗೆ 50 ವರ್ಷಗಳ ಅವಧಿಗೆ ಸಾಲ ನೀಡಲಾಗುತ್ತಿದೆ. ಈ ಬಡ್ಡಿ ರಹಿತ ಸಾಲವನ್ನು ಹೊಸದಾಗಿ ಪ್ರಾರಂಭಿಸಲಾಗುವ ಅಥವಾ ಈಗಾಗಲೇ ಅಸ್ತಿತ್ವದಲ್ಕಿರುವ ಬಂಡವಾಳ ಯೋಜನೆಗಾಗಿ ಮಾತ್ರ ಈ ಸಾಲ. ಹಾಗೆಯೇ ಈ ಸಾಲವನ್ನು ಗುತ್ತಿಗೆದಾರರು, ಪೂರೈಕೆದಾರರಿಗೆ ನೀಡಬೇಕಾಗಿರುವ ಪಾವತಿಗಳಿಗೆ ಬಳಸಿಕೊಳ್ಳಬಹುದು.’ ಎಂದು ಅವರು ಹೇಳಿದರು.

ಒಟ್ಟು ಸಾಲದ ಪೈಕಿ 900 ಕೋಟಿಗಳನ್ನು ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಗಳಿಗೆ, 1,600 ಕೋಟಿಯನ್ನು ಈಶಾನ್ಯ ರಾಜ್ಯಗಳಿಗೆ ಹಾಗೂ ಉಳಿದ 7,500 ಕೋಟಿಯನ್ನು ಭಾರತದ ಇತರೆ ರಾಜ್ಯಗಳಿಗೆ ನೀಡಲಾಗುವುದು ಎಂದು ಸಾಲದ ಹಂಚಿಕೆಯ ವಿವರಗಳನ್ನು ನೀಡಿದರು.

Share This Article
Leave a comment