ನಾಳೆಯಿಂದಲೇ ರಾಜ್ಯದ ಚಿತ್ರಮಂದಿರಗಳಲ್ಲಿ ಶೇ100 ರಷ್ಟು ಆಸನ ಭರ್ತಿಗೆ ಹಸಿರು ನಿಶಾನೆ

Team Newsnap
1 Min Read
Siddu will not win in Kolar : Minister Sudhakarಸಿದ್ದು ಕೋಲಾರದಲ್ಲಿ ಗೆಲ್ಲುವುದಿಲ್ಲ - ಖೆಡ್ಡಾಗೆ ಬಿದ್ದಿದ್ದಾರೆ: ಸಚಿವ ಸುಧಾಕರ್‌

ನಾಳೆಯಿಂದಲೇ ಸಿನಿಮಾ ಮಂದಿರಗಳಲ್ಲಿ ಶೇ. 100 ರಷ್ಟು ಆಸನಗಳ ಭತಿ೯ಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಕೊರೊನಾ ನಿಯಮ ಸಡಲಿಕೆ ಸಂಬಂಧ ಇಂದು ರಾಜ್ಯ ಸರ್ಕಾರ ಮಹತ್ವದ ಸಭೆ ನಡೆಸಿತ್ತು. ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಏನೆಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು ಎನ್ನುವುದರ ಬಗ್ಗೆ ವಿವರ ನೀಡಿದರು.

ಷರತ್ತುಗಳು ಏನು ?

ರಾಜ್ಯದ ಚಿತ್ರ ಮಂದಿರಗಳಲ್ಲಿ ಶೇ 100 ರಷ್ಟು ಆಸನಗಳನ್ನು ಭರ್ತಿ ಮಾಡುವ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಚಲನಚಿತ್ರ ವೀಕ್ಷಣೆ ‌ಮಾಡಲು ಮಾಸ್ಕ್ ‌ಕಡ್ಡಾಯ, ಥಿಯೇಟರ್ ಒಳಗಡೆ ತಿಂಡಿ ತಿನಿಸುಗಳು ನಿಷೇಧ

ಯೋಗ, ಜಿಮ್ ಸೆಂಟರ್, ಈಜುಕೊಳಗಳಿಗೂ ಶೇಕಡಾ 100 ಅನುಮತಿ

ಯೋಗ, ಸ್ವಿಮ್ಮಿಂಗ್, ಜಿಮ್ ಸೆಂಟರ್​ ಪ್ರವೇಶಕ್ಕೆ ಡಬಲ್ ಡೋಸ್ ಲಸಿಕೆ ಕಡ್ಡಾಯ

ಸಭೆ, ಮದುವೆ, ಸಮಾರಂಭಗಳಿಗೆ ಹಳೆ ಮಾರ್ಗಸೂಚಿ ಮುಂದುವರಿಕೆ

Share This Article
Leave a comment