Editorial

ಮೂಲಂಗಿಯ (Radish) 10 ಉಪಯೋಗ: ಹಾಗೂ ಬಗೆ ಬಗೆಯ ಅಡುಗೆಗಳು.

ಮೂಲಂಗಿಯ ಉಪಯೋಗಗಳು:

  1. ನೈಸರ್ಗಿಕವಾಗಿ ಭೂಮಿಯಲ್ಲಿ ಬೆಳೆಯುವಂತ ಈ ಮೂಲಂಗಿಯಲ್ಲಿ ವಿಟಮಿನ್ ಪ್ರಮಾಣ ಹೇರಳವಾಗಿರುತ್ತದೆ. ಮೂಲಂಗಿಯನ್ನು ತಿನ್ನುವುದರಿಂದ ಅರೋಗ್ಯ ಉತ್ತಮವಾಗಿರುತ್ತದೆ.
  2. ಮೂಲಂಗಿಯಲ್ಲಿ ನೀರಿನಂಶ ಹೆಚ್ಚಾಗಿದ್ದು ಆರೋಗ್ಯವನ್ನು ವೃದ್ಧಿಸಲು ಹೆಚ್ಚು ಸಹಕಾರಿಯಾಗಿದೆ ಮೂಲಂಗಿ ಉತ್ತಮ ಆಹಾರವಾಗಿದೆ,
  3. ಮೂಲಂಗಿ ಸೇವನೆಯಿಂದ ಅದರಲ್ಲಿರುವ ವಿಟಿಮಿನ್ ಸಿ ನಮ್ಮ ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುವುದೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಇದು ಕ್ಯಾನ್ಸರ್ ಬರುವುದನ್ನೂ ತಡೆಯಬಲ್ಲದು.
  4. ಕೆಂಪು ರಕ್ತಕಣಗಳ ಬೆಳವಣಿಗೆ ಹಾಗೂ ಕಾಮಾಲೆ ರೋಗದ ಚಿಕಿತ್ಸೆಗೆ ಸಹಕಾರಿ. ಮೂಲಂಗಿಯ ಬೇರಿನ ಭಾಗ ಮಾತ್ರವಲ್ಲ, ಅದರ ಸೊಪ್ಪಿನ ಬಳಕೆ ಕೂಡ ಉಪಯುಕ್ತ.
  5. ಮೂಲಂಗಿ ಸೇವಿಸಿದರೆ ಬೇಗ ಹಸಿವಾಗುವುದಿಲ್ಲ. ಹೊಟ್ಟೆ ತುಂಬಿದ ಅನುಭವವವನ್ನೇ ನೀಡುತ್ತದೆ. ಅಂದರೆ ಅದು ದೇಹದ ತೂಕವನ್ನು ನಿಯಂತ್ರಿಸುತ್ತದೆ. ತೆಳ್ಳಗಾಗಬೇಕು ಎನ್ನುವವರು, ತಮ್ಮ ತಿನ್ನುವ ಚಟವನ್ನು ನಿಯಂತ್ರಿಸಿಕೊಳ್ಳಬೇಕು ಎಂಬುವವರು ಮೂಲಂಗಿ ಸಹಕಾರಿಯಾಗತ್ತದೆ.
  6. ಇನ್ನು, ಮೂಲವ್ಯಾಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಬಳಸಲು ವೈದ್ಯರೇ ಸಲಹೆ ನೀಡುತ್ತಾರೆ.
    ಮೂತ್ರಕೋಶ ಮತ್ತು ಮೂತ್ರಪಿಂಡವನ್ನು ಶುಚೀಕರಿಸಲು ಸಹಕಾರಿಯಾದ ಮೂಲಂಗಿ ಸೇವನೆಯಿಂದ ಉರಿಮೂತ್ರ ಮುಂತಾದ ಮೂತ್ರ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ಹೊಂದಲು ಅನುವಾಗುತ್ತದೆ.
  7. ಮೂಲಂಗಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಡಯಾಬಿಟಿಸ್ ಟೈಪ್ 2 ಅನ್ನು ತಡೆಯಬಹುದು. ಈ ತರಕಾರಿ ಡಯಾಬಿಟಿಕ್ ವಿರೋಧಿ ಗುಣಗಳನ್ನು ಹೊಂದಿದ್ದು ಅದು ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯವನ್ನು ಹೆಚ್ಚಿಸುತ್ತದೆ.
  8. ಗ್ಲೂಕೋಸ್ ತೆಗೆದುಕೊಳ್ಳುವಿಕೆಯನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ. ಮೂಲಂಗಿಗಳು ನೇರವಾಗಿ ಇನ್ಸುಲಿನ್ ಪ್ರತಿಕ್ರಿಯೆ ಮತ್ತು ಗ್ಲೂಕೋಸ್ ಚಯಾಪಚಯವನ್ನು ಸುಧಾರಿಸುತ್ತದೆ ಎಂದು ಅಧ್ಯಯನವು ತಿಳಿಸಿವೆ.
  9. ಅಡಿಪೋನೆಕ್ಟಿನ್ ಎಂಬುದು ಹಾರ್ಮೋನ್ ಆಗಿದ್ದು ಅದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.ಮೂಲಂಗಿಗಳಲ್ಲಿ ಗ್ಲೂಕೋಸ್ ಹೋಮಿಯೋಸ್ಟಾಸಿಸ್ ಅನ್ನು ನಿಯಂತ್ರಿಸುವಲ್ಲಿ ಪಾತ್ರವಹಿತ್ತದೆ.
  10. ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿನಪುಡಿ ಮತ್ತು ಉಪ್ಪು ಬೆರೆಸಿ ತಿನ್ನುವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ.ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.
  11. ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.
  12. ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು,ಮೂಗು,ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನವೂ ಹಸಿಮೂಲಂಗಿಯನ್ನು ಬಳಸಿ, ಒಳ್ಳೆಯದು.
  13. ಮೂಲಂಗಿ ಅಜೀರ್ಣತೆ ನಿವಾರಿಸುವಲ್ಲಿ ಸಹಕಾರಿ, ಕೆಲವರಿಗೆ ಸೇವನೆ ಮಾಡುವಂತ ಆಹಾರ ಬೇಗನೆ ಜೀರ್ಣವಾಗೋದಿಲ್ಲ, ಅಂತಹವರು ಊಟದಲ್ಲಿ ಮೂಲಂಗಿ ತಿನ್ನುವುದು ಉತ್ತಮ.
  14. ಬಿಪಿ (Blood Pressure) ತೊಂದರೆಯಿಂದ ಬಳಲುತ್ತಿರುವವರಿಗೆ ಮೂಲಂಗಿ ತುಂಬಾ ಪ್ರಯೋಜನಕಾರಿ. ಅಧಿಕ ರಕ್ತದೊತ್ತಡ ಹೊಂದಿರುವವರು ಮೂಲಂಗಿಯನ್ನು ತಿನ್ನುವುದರಿಂದ ಬ್ಲಡ್ ಪ್ಲೆಶರ್​ ನಿಯಂತ್ರಿಸಲು ಸಹಾಯಕವಾಗುತ್ತದೆ. ಇದಲ್ಲದೆ, ಈ ತರಕಾರಿಯಲ್ಲಿ ಗಣನೀಯ ಪ್ರಮಾಣದ ಪೊಟ್ಯಾಷಿಯಮ್ ಇದೆ. ಇದು ನಮ್ಮ ದೇಹದಲ್ಲಿ ಸೋಡಿಯಂ-ಪೊಟ್ಯಾಷಿಯಮ್ ಅನುಪಾತದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಇದರಿಂದ ರಕ್ತದೊತ್ತಡ ಸದಾ ನಿಯಂತ್ರಣದಲ್ಲಿರುತ್ತದೆ.

ಮೂಲಂಗಿ ಬೀಜವನ್ನು ನೀರಿನಲ್ಲಿ ನೆನೆಸಿ ಅರೆದು ದಿನಕ್ಕೆ ಮೂರು ಬಾರಿ ಮುಖಕ್ಕೆ ಹಚ್ಚಿದರೆ ಮುಖದ ಮೇಲಿನ ಕಲೆಗಳು ಮಾಯವಾಗಿ ಮುಖದ ಕಾಂತಿ ವೃದ್ಧಿಸುತ್ತದೆ.

radish

ಮೂಲಂಗಿ ಸಾಮಾನ್ಯವಾಗಿ ಬಿಳಿ ಬಣ್ಣದಲ್ಲಿದ್ದರೂ ಇತರ ಬಣ್ಣಗಳಲ್ಲಿಯೂ ದೊರಕುತ್ತದೆ. ಕೆಂಪು, ಹಳದಿ, ನೇರಳೆ, ಬಿಳಿ-ಕೆಂಪು ಮಿಶ್ರಿತ ಬಣ್ಣ, ಹಸಿರು ಮೊದಲಾದ ಬಣ್ಣಗಳಲ್ಲಿ ದೊರಕುತ್ತದೆ. Daikon ಎಂಬ ತಳಿಯ ಬಿಳಿ ಮೂಲಂಗಿ ಸಾಮಾನ್ಯವಾಗಿ ಉದ್ದ ಮತ್ತು ದೊಡ್ಡದಾಗಿದ್ದರೆ ಉಳಿದವು ಚಿಕ್ಕ ಬೀಟ್ರೂಟಿನ ಆಕಾರದಲ್ಲಿರುತ್ತವೆ. ಅಪರೂಪಕ್ಕೆ ಕಪ್ಪು ಬಣ್ಣಕ್ಕೆ ಅತಿ ಹತ್ತಿರವಾಗಿರುವ ಗಾಢನೀಲಿ ಬಣ್ಣದ ಮೂಲಂಗಿಗಳೂ ದೊರಕುತ್ತವೆ.

ಇದರ ರುಚಿ ಕೊಂಚವೇ ಖಾರವಾಗಿರುವ ಕಾರಣ ಹಲವರಿಗೆ ಇದು ಹಿಡಿಸುವುದಿಲ್ಲ. ಆದರೆ ಇದರಲ್ಲಿರುವ ಅದ್ಭುತವಾದ ಆರೋಗ್ಯಕರ ಗುಣಗಳು ಮಾತ್ರ ಈ ತರಕಾರಿಯನ್ನು ಅತಿ ಮಹತ್ವದ್ದಾಗಿಸುತ್ತದೆ.

ನೀವು ಪ್ರತಿದಿನ ಮೂಲಂಗಿ ರಸವನ್ನು ಕುಡಿಯುವ ಅಭ್ಯಾಸ ಹೊಂದಿದ್ದರೆ ಇದು ತ್ವಚೆಯ ಆರೋಗ್ಯವನ್ನು ಉತ್ತಮವಾಗಿ ಕಾಪಾಡುತ್ತದೆ ಹಾಗೂ ಅಗತ್ಯ ಪೋಷಕಾಂಶಗಳಾದ ವಿಟಮಿನ್ ಸಿ, ಸತು ಮತ್ತು ರಂಜಕಗಳನ್ನು ಒದಗಿಸುತ್ತದೆ. ಜೊತೆಗೆ ಇದು ಚರ್ಮ ಒಣಗುವಿಕೆ, ಮೊಡವೆ, ಕೀವುಗುಳ್ಳೆಗಳನ್ನು ಮತ್ತು ದದ್ದುಗಳು ಎದುರಾಗದೇ ಇರುವಂತೆ ಕಾಪಾಡುತ್ತದೆ.

ನಿಮ್ಮ ಮುಖವನ್ನು ಶುದ್ಧೀಕರಿಸಲು ನೀವು ಮೂಲಂಗಿಯನ್ನು ಅರೆದು ತಯಾರಿಸಿದ ಲೇಪವನ್ನೂ ತ್ವಚೆಗೆ ಹಚ್ಚಿಕೊಳ್ಳಬಹುದು. ಮತ್ತು ನೀವು ಇದನ್ನು ನಿಮ್ಮ ಕೂದಲಿಗೆ ಹಚ್ಚಿದರೆ, ಇದು ತಲೆಹೊಟ್ಟನ್ನು ನಿವಾರಿಸಲು, ಕೂದಲು ಉದುರುವುದನ್ನು ತಡೆಯಲು ನೆರವಾಗುತ್ತದೆ. ಅಷ್ಟೇ ಅಲ್ಲ, ಕೂದಲ ಬುಡಗಳಿಗೂ ಇಳಿದು ಕೂದಲ ಬುಡಗಳನ್ನು ದೃಢಗೊಳಿಸುವ ಮೂಲಕ ಕೂದಲ ಉದುರುವಿಕೆಯನ್ನು ತಡೆಯುತ್ತದೆ.

ಮೂಲಂಗಿಯ ಪೌಷ್ಠಿಕ ಮೌಲ್ಯ

ಮೂಲಂಗಿಯಲ್ಲಿ ಅನೇಕ ಜೀವಸತ್ವಗಳು, ಖನಿಜಾಂಶಗಳು ಮತ್ತು ರೋಗ ನಿರೋಧಕ ಅಂಶಗಳು ಒಳಗೊಂಡಿದೆ. ಗಂಟಲು ನೋವು, ಪಿತ್ತದೋಷ ಅಸ್ವಸ್ಥತೆಗಳು ಮತ್ತು ಆಯುರ್ವೇದದಲ್ಲಿ ಉರಿಯೂತದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಮೂಲಂಗಿಯನ್ನು ಬಳಸಲಾಗುತ್ತದೆ. ನೂರು ಗ್ರಾಂ ಮೂಲಂಗಿಯಲ್ಲಿ ಈ ಕೆಳಗಿನಂತೆ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ.

100 ಗ್ರಾಂ ಮೂಲಂಗಿಯಲ್ಲಿರುವ ಪೋಷಕಾಂಶಗಳು

  • ಸಾರಜನಕ ೦.7 ಗ್ರಾಂ
  • ಪಿಷ್ಟ 3.4 ಗ್ರಾಂ
  • ಮೇದಸ್ಸು ೦.1 ಗ್ರಾಂ
  • ಖನಿಜಾಂಶ ೦.6 ಗ್ರಾಂ
  • ನಾರಿನಾಂಶ ೦.8 ಗ್ರಾಂ
  • ರಂಜಕ 22 ಗ್ರಾಂ
  • ಸೋಡಿಯಂ 33 ಮಿಲಿಗ್ರಾಂ
  • ಪೊಟ್ಯಾಷಿಯಂ 138 ಮಿಲಿಗ್ರಾಂ
  • ರೈಬೋಫ್ಲೆವಿನ್ ೦.0.2 ಮಿಲಿಗ್ರಾಂ
  • ಆಕ್ಸಾಲಿಕ್ ಆಮ್ಲ 9 ಮಿಲಿಗ್ರಾಂ
  • ಎ ಜೀವಸತ್ವ 5 ಐ. ಯು.
  • ಸಿ ಜೀವಸತ್ವ 15 ಮಿಲಿಗ್ರಾಂ
  • ಸುಣ್ಣ 50 ಮಿಲಿಗ್ರಾಂ
  • ಕಬ್ಬಿಣ ೦.4 ಮಿಲಿಗ್ರಾಂ
  • ಥಯಾಮಿನ್ ೦.4ಮಿಲಿಗ್ರಾಂ

ಮೂಲಂಗಿಯನ್ನ ಸಾಂಬಾರ್, ಚಟ್ನಿ, ಪರೋಟ, ದೋಸೆ,ಹೀಗೆ ನಾನಾ ವಿಧದ ಅಡುಗೆಯಲ್ಲಿ ಬಳಸುತ್ತಾರೆ,

ಮೂಲಂಗಿ ಮೊಸರು ಸಾಸುವೆ

ಮೂಲಂಗಿ ಮೊಸರು ಸಾಸುವೆ ಮಾಡುವ ವಿಧಾನ:

  • ಮೂಲಂಗಿ 2
  • ಮೊಸರು 2 cup
  • ಉಪ್ಪು ರುಚಿಗೆ ತಕ್ಕಷ್ಟು
  • ಎರಡು ಚಮಚ ಎಣ್ಣೆ
  • 1 ಚಮಚ ಸಾಸುವೆ
  • 1 ಚಮಚ ಕಡ್ಲೆಬೇಳೆ
  • ಕರಿಬೇವು.

ಮೂಲಂಗಿಯನ್ನು ತೊಳೆದು ಒಂದು ಪಾತ್ರೆಗೆ ತುರಿದುಕೊಳ್ಳಿ, ಅದಕ್ಕೆ ಮೊಸರು ,ಉಪ್ಪು ಹಾಕಿ.ಮಿಕ್ಸ್ ಮಾಡಿ ನಂತರ ಸಾಸುವೆ ಕಡ್ಲೆಬೇಳೆ ಕರಿಬೇವು ಹಾಕಿ ಒಗ್ಗರಣೆ ಕೊಡಿ.

ಮೂಲಂಗಿ ಮೊಸರು ಸಾಸುವೆ ರೆಡಿ.

ಮೂಲಂಗಿ ಹಿಂದೆ ಎಲೆಗಳು ಇದ್ದರು ಸಹ ಅವುಗಳನ್ನು ತೆಗೆದು ಹಾಕಿ ಕೇವಲ ಮೂಲಂಗಿ ಮಾತ್ರ ಬಳಕೆ ಮಾಡುತ್ತೇವೆ. ಆದರೆ ನಿಜ ಹೇಳಬೇಕು ಎಂದರೆ ಮೂಲಂಗಿಯಲ್ಲಿ ಕಂಡು ಬರುವ ಪೌಷ್ಟಿಕ ಸತ್ವಗಳು ಮತ್ತು ಆರೋಗ್ಯ ಪ್ರಯೋಜನಗಳು ಮೂಲಂಗಿ ಎಲೆಗಳಲ್ಲಿ ಕೂಡ ಸಿಗುತ್ತವೆ.

ಮೂಲಂಗಿ ಎಲೆಯಲ್ಲಿ ಪಚಡಿ

ಒಂದು ಕಟ್ ಮೂಲಂಗಿ ಎಲೆಗಳನ್ನು ತೊಳೆದು ಸಣ್ಣದಾಗಿ ಕಟ್ ಮಾಡಿ ಒಂದು ಪಾತ್ರೆಗೆ ಹಾಕಿ ಅದಕ್ಕೆ ಸಣ್ಣದಾಗಿ ಹೆಚ್ಚಿದ 1 ಈರುಳ್ಳಿ, ಕಾಯಿತುರಿ 1 ಚಮಚ, ಉಪ್ಪು ಹಾಕಿ,ಪಚಡಿ ರೆಡಿ.

Team Newsnap
Leave a Comment

Recent Posts

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024

ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು

ನಿನ್ನೆ ರಾತ್ರಿ 72ರ ವಯಸ್ಸಿನ ಎನ್.ಮುನಿಕೆಂಪಣ್ಣ ಶಕುನಿ (Shakuni) ವೇಷದಲ್ಲಿ ವೇದಿಕೆಗೆ ಬಂದು ಪಾತ್ರ ನಿರ್ವಹಿಸುತ್ತಲೇ ವೇದಿಕೆಯ ಮೇಲೆ ಕುಸಿದು… Read More

May 4, 2024

ಬಿಜೆಪಿಯವರು ಏಕೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡುತ್ತಿಲ್ಲ ?ಡಿ.ಕೆ.ಶಿವಕುಮಾರ್

ಬಾಗಲಕೋಟೆ : ಡಿಸಿಎಂ ಡಿ.ಕೆ.ಶಿವಕುಮಾರ್ , ಬಿಜೆಪಿ ಮುಖಂಡರು ಪ್ರಜ್ವಲ್ ರೇವಣ್ಣ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ? ಹೆಣ್ಣುಮಕ್ಕಳಿಗೆ ಸಾಂತ್ವನ… Read More

May 4, 2024

ರೇವಣ್ಣ ಅಪಹರಣ ಕೇಸ್‌ : ಎಸ್‌ಐಟಿ ವಿಶೇಷ ತಂಡದಿಂದ 40 ಕಡೆ ರೇಡ್‌

ಬೆಂಗಳೂರು : ನೆನ್ನೆ ವಿಶೇಷ ತನಿಖಾ ತಂಡ (ಎಸ್‌ಐಟಿ) , ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು… Read More

May 4, 2024