December 23, 2024

Newsnap Kannada

The World at your finger tips!

harsha 10 l

ಸಚಿವ ಈಶ್ವರಪ್ಪ ಕುಟುಂಬದಿಂದ ಹರ್ಷ ಪೋಷಕರಿಗೆ 10 ಲಕ್ಷ ರು ಕೊಡುಗೆ

Spread the love

ಶಿವಮೊಗ್ಗದಲ್ಲಿ ಇತ್ತೀಚಿಗೆ ಬರ್ಬರವಾಗಿ ಹತ್ಯೆಯಾಗಿದ್ದ ಭಜರಂಗದಳ ಕಾರ್ಯಕರ್ತ ಹರ್ಷ ನಿವಾಸಕ್ಕೆ ಶನಿವಾರ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​.ಈಶ್ವರಪ್ಪ ಪತ್ನಿ ಜಯಲಕ್ಷ್ಮೀ, ಪುತ್ರ ಕಾಂತೇಶ್​ ಭೇಟಿ ನೀಡಿ  ಹರ್ಷ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ತಮ್ಮ ಕುಟುಂಬದಿಂದ ಕುಟುಂಬಕ್ಕೆ 10 ಲಕ್ಷದ ಚೆಕ್​ ನೀಡಿ ನೆರವಾದರು.

ಮೊನ್ನೆ ಕೂಡ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​​, ಉಪಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಜೊತೆಗೆ ಬಿಜೆಪಿ ಪಕ್ಷದ ಕಡೆಯಿಂದ 10 ಲಕ್ಷ ರೂಪಾಯಿಗಳ ಚೆಕ್​ ಅನ್ನು ಹರ್ಷ ಪೋಷಕರಿಗೆ ಹಸ್ತಾಂತರ ಮಾಡಿದ್ದರು.

ಸ್ವಾಮೀಜಿಗಳಿಂದ 1 ಲಕ್ಷ ರು :

ಹರ್ಷ ಕುಟುಂಬಕ್ಕೆ ಸಾಂತ್ವನ ಹೇಳಿ ಸ್ವಾಮೀಜಿಗಳ ನಿಯೋಗವು ಆರ್ಥಿಕ, ಧಾರ್ಮಿಕ, ಅಧ್ಯಾತ್ಮಿಕ ಆಶೀರ್ವಾದವನ್ನು ಮಾಡಿದ್ದೇವೆ. ಎಲ್ಲ ಧರ್ಮ-ಜಾತಿ ಜನರ ಅಂತರಂಗ ಮತ್ತು ಬಹಿರಂಗ ಮನಸ್ಸಿನಲ್ಲಿ ಶಾಂತಿ ನೆಲಸಬೇಕು. ಜನರು ಶಾಂತಿ ಸಹಬಾಳ್ವೆಯಿಂದ ಬದುಕಬೇಕಿದೆ ಎಂದರು. ಇದೇ ವೇಳೆ ಸ್ವಾಮೀಜಿಗಳಿಂದ ಹರ್ಷ ಕುಟುಂಬಕ್ಕೆ 1 ಲಕ್ಷ ಆರ್ಥಿಕ ನೆರವು ನೀಡಲಾಯಿತು.

Copyright © All rights reserved Newsnap | Newsever by AF themes.
error: Content is protected !!