ರಿಷಿಕೇಶದ ಗವಿಯಲ್ಲಿ ವಾಸಿಸುವ 83 ವರ್ಷದ ಸಾಧುವೊಬ್ಬರು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ₹1 ಕೋಟಿ ದೇಣಿಗೆ ನೀಡಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕಾಗಿ ರಿಷಿಕೇಶದ ಸಾಧು ವಿಎಚ್‌ಪಿಗೆ ಒಂದು ಕೋಟಿ ರು. ಕೊಟ್ಟಿರುವುದಾಗಿ ವರದಿಯಾಗಿದೆ.
‘ಸುಮಾರು 50 ವರ್ಷಗಳಿಂದ ನಾನು ಗುಹೆಯಲ್ಲಿಯೇ ವಾಸಿಸುತ್ತಿದ್ದೇನೆ. ಗವಿಗೆ ಭೇಟಿ ನೀಡುವ ಭಕ್ತರು ನೀಡುವ ಕಾಣಿಕೆಗಳಿಂದ ನಾನು ಬದುಕುತ್ತಿದ್ದೇನೆ. ರಾಮ ಮಂದಿರ ನಿರ್ಮಾಣಕ್ಕಾಗಿ ವಿಎಚ್‌ಪಿ ನಡೆಸುತ್ತಿರುವ ಅಭಿಯಾನದ ಬಗ್ಗೆ ತಿಳಿಯುತ್ತಿದ್ದಂತೆ ದೇಣಿಗೆ ನೀಡಲು ನಾನು ನಿರ್ಧರಿಸಿದೆ’ ಎಂದು ಸ್ವಾಮಿ ಶಂಕರ್ ದಾಸ್ ಹೇಳಿದ್ದಾರೆ.
ಸಾಧುವೊಬ್ಬರು 1 ಕೋಟಿ ರು ಮೊತ್ತದ ಚೆಕ್ ನೀಡಿದ್ದಾರೆ. ಖಾತೆಯಲ್ಲಿ ಅಷ್ಟು ಹಣ ಇರುವುದು ಖಾತ್ರಿಯಾಗಿದೆ. ಅನಂತರ ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗುವ ಸ್ಥಳೀಯರನ್ನು ಅಧಿಕಾರಿಗಳು ಬ್ಯಾಂಕ್‌ಗೆ ಕರೆಸಿ, ರಾಮ ಮಂದಿರ ಟ್ರಸ್ಟ್‌ಗೆ ಸ್ವಾಮಿ ಶಂಕರ್ ದಾಸ್ ದೇಣಿಗೆ ನೀಡಲು ನೆರವಾಗಿದ್ದಾರೆ.
ಉತ್ತರಾಖಂಡದಲ್ಲಿ ವಿಎಚ್‌ಪಿ ಒಟ್ಟಾರೆ 5 ಕೋಟಿ ರು ದೇಣಿಗೆ ಸಂಗ್ರಹಿಸಿದೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ