ಹುತಾತ್ಮ ದಿನಾಚರಣೆ – ಇಂದು ಬೆಳಗ್ಗೆ 11 ಕ್ಕೆ 2 ನಿಮಿಷ ಮೌನಾಚರಣೆಗೆ ಕರೆ

Team Newsnap
1 Min Read

ಮಹಾತ್ಮಾ ಗಾಂಧಿ ಹುತಾತ್ಮವಾದ ದಿನವಾದ ಜ.30 ರಂದು ಪ್ರತಿ ವರ್ಷ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ.

ಇಂದು ಶನಿವಾರ ಎರಡು ನಿಮಿಷ ಮೌನವ್ರತ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಹುತಾತ್ಮ ಯೋಧರ ಸಂಸ್ಮರಣಾ ದಿನೋತ್ಸವ ಹಿನ್ನೆಲೆ 2 ನಿಮಿಷ ಮೌನದ ಮೂಲಕ ಶ್ರದ್ಧಾಂಜಲಿ ಸಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯದಿಂದ ದೇಶದ ಜನರಿಗೆ ಕರೆ ನೀಡಿದೆ.

ಇಂದು ಬೆಳಗ್ಗೆ 11 ಗಂಟೆಗೆ ಎಲ್ಲರೂ ತಮ್ಮ ಕೆಲಸಗಳನ್ನು ನಿಲ್ಲಿಸಿ 2 ನಿಮಿಷಗಳ ಕಾಲ ಮೌನಾಚರಣೆ ನಡೆಸಬೇಕೆಂದು ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸೂಚನೆ ನೀಡಿದೆ.

ವಿದ್ಯಾಸಂಸ್ಥೆ, ಸರ್ಕಾರಿ ಕಚೇರಿ, ಖಾಸಗಿ ಕಚೇರಿ ಎಲ್ಲೆಡೆ ಈ ಆದೇಶ ಜಾರಿಯಾಗಬೇಕು. ಮೌನಾಚರಣೆ ಮುಗಿಯುವ ಹೊತ್ತಲ್ಲಿ ಸೈರನ್ ಮೊಳಗಿಸಬೇಕು. ಮೌನಾಚರಣೆ ಆರಂಭ ಮತ್ತು ಅಂತ್ಯದ ವೇಳೆಗೆ ಸೈರನ್ ಮೊಳಗಿಸಬೇಕು ಎಂದು ಸೂಚಿಸಿದೆ.

Share This Article
Leave a comment