ಬೆಂಗಳೂರು
ಡ್ರಗ್ಸ್ ದಂಧೆ ಸಂಬಂಧ ಒಂದೆಡೆ ಸಿಸಿಬಿ ಕಚೇರಿಯಲ್ಲಿ ಸಂಜನಾ ಗಲ್ರಾನಿ ತನಿಖೆ ನಡೆಯುತ್ತಿದೆ. ಸದ್ಯ ಸ್ಯಾಂಡಲ್‍ವುಡ್‍ನ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿಯ ತನಿಖೆಯನ್ನು ಬೆಂಗಳೂರಿನ ಶಿವಾಜಿ ನಗರದ ಮಹಿಳಾ ಇನ್ಸ್ ಪೆಕ್ಟರ್ ಕಾತ್ಯಾಯಿನಿ ನಡೆಸುವಂತೆ ಸೂಚಿಸಲಾಗಿದೆ.
ರಾಗಿಣಿಯವರನ್ನು ವಶಕ್ಕೆ ಪಡೆದ ದಿನದಿಂದ ಸಿಸಿಬಿ ಇನ್ಸ್‍ಪೆಕ್ಟರ್ ಅಂಜುಮಾಲಾ ಹಾಗೂ ಪೂರ್ಣಿಮಾ ತನಿಖೆ ನಡೆಸುತ್ತಿದ್ದರು. ಆದರೆ ಪ್ರಸ್ತುತ ಸಿಸಿಬಿಯಲ್ಲಿ ಸಂಜನಾ ತನಿಖೆಯನ್ನು ಮಹಿಳಾಧಿಕಾರಿಗಳಾದ ಅಂಜುಮಾಲಾ ಹಾಗೂ ಪೂರ್ಣಿಮಾ ನಡೆಸುತ್ತಿರುವದರಿಂದ ಈ ಪ್ರಕರಣದ ತನಿಖಾಧಿಕಾರಿಯಾಗಿ ಇನ್ಸ್‍ಪೆಕ್ಟರ್ ಕಾತ್ಯಾಯಿನಿ ರಾಗಿಣಿಯ ತನಿಖೆ ನಡೆಸಲು ಅವಕಾಶ ನೀಡಲಾಗಿದೆ.
ಸ್ಯಾಂಡಲ್‍ವುಡ್‍ಗೆ ಡ್ರಗ್ಸ್ ನಂಟು ಆರೋಪದಡಿ ನಟಿ ರಾಗಿಣಿಯ ತನಿಖೆ ನಡೆಯುತ್ತಿದೆ. ಈ ವಿಚಾರಣೆಯಿಂದ ಕೊಂಚ ರಿಲ್ಯಾಕ್ಸ್ ಆಗಬಹುದೆಂದುಕೊಂಡಿದ್ದ ರಾಗಿಣಿಯ ವಿಚಾರಣೆ ಮತ್ತೆ ಮುಂದುವರೆಯಲಿದೆ. ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆರಂಭಿಸಿದ್ದಾರೆ . ಈ ಹಿಂದೆ ಸಿಲಿಕಾನ್ ಸಿಟಿಯಲ್ಲಿ ಬಹಳಷ್ಟು ಮಹಿಳಾ ಆರೋಪಿಗಳ ತನಿಖೆ ನಡೆಸುವಲ್ಲಿ ಖಡಕ್ ಮಹಿಳಾ ಪೊಲೀಸ್ ಆಫೀಸರ್ ಎಂದು ಕಾತ್ಯಾಯಿನಿಗೆ ಹೆಗ್ಗಳಿಕೆಯೂ ಇದೆ.
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ