ಇಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ

Team Newsnap
1 Min Read

ನವದೆಹಲಿ
ಅರಣ್ಯ ವನ್ಯಜೀವಿಗಳ ರಕ್ಷಣೆಗಾಗಿ ತ್ಯಾಗ, ಬಲಿದಾನ ಮಾಡಿದ ಅರಣ್ಯ ಸಿಬ್ಬಂದಿಗಳ ಸ್ಮರಿಸುವ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಎಂದು ಕರೆಯಲಾಗುತ್ತದೆ.

 1730ರ ಸೆಪ್ಟೆಂಬರ್ 11 ರಂದು ರಾಜಸ್ಥಾನದ ಜೋಧಪುರದ ಮಹಾರಾಜ ಅಭಯಸಿಂಗ್ ನ ಸೈನಿಕರು ರಾಜನ ಹೊಸ ಅರಮನೆಗೆ ಅವಶ್ಯವಿದ್ದ ಕೇಜರ್ಲಿ ಮರಗಳನ್ನು ಕಡಿಯಲು ಮುಂದಾಗುತ್ತಾರೆ.
ಆಗ ಕೇಜರ್ಲಿ ಮರಗಳನ್ನು ಕಡಿಯಲು ವಿರೋಧಿಸಿದ ಅಲ್ಲಿನ ಬಿಷ್ಣೋಯಿ ಸಮುದಾಯ ದ ಮಹಿಳೆಯರು, ಮಕ್ಕಳೂ ಸೇರಿ ಒಟ್ಟು 363 ಜನರನ್ನು ಸಾಮೂಹಿಕವಾಗಿ ಆ ದಿನ ರಾಜನ ಸೈನಿಕರು ನಿರ್ದಯವಾಗಿ ಕೊಲ್ಲುತ್ತಾರೆ.

ಅರಣ್ಯ, ಮರಗಳ ಸಂರಕ್ಷಣೆಗಾಗಿ ಬಲಿದಾನ ಹೊಂದಿದ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರ್ಕಾರ ಈ ದಿನವನ್ನು*ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ವೆಂದು ಘೋಷಿಸಿರುತ್ತದೆ.

ಈ ಹಿನ್ನೆಲೆಯಲ್ಲಿ ಇಂದು ಬಿಷ್ಣೋಹಿ ಜನರ ತ್ಯಾಗದ ಜೊತೆಜೊತೆಗೆ ದೇಶದ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತ್ಯಾಗ ಮತ್ತು ಬಲಿದಾನ ಮಾಡಿ, ಹುತಾತ್ಮರಾಗಿರುವ ಅರಣ್ಯ ಸಿಬ್ಬಂದಿಗಳ ಸ್ಮರಣೆಗಾಗಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ.

Share This Article
Leave a comment