ಯುಪಿಎಸ್ ಸಿ ಜಿಹಾದ್ ಕಾರ್ಯಕ್ರಮಕ್ಕೆ ಕೇಂದ್ರ ಗ್ರೀನ್ ಸಿಗ್ನಲ್

Team Newsnap
2 Min Read

ನ್ಯೂಸ್ ಸ್ನ್ಯಾಪ್.

ನವದೆಹಲಿ.

ದೇಶದಲ್ಲಿ ಭಾರೀ ವಿವಾದದ ಅಲೆಯನ್ನೇ ಸೃಷ್ಠಿಸಿದ್ದ ‘ಯುಪಿಎಸ್ ಸಿ ಜಿಹಾದ್’ ಕಾರ್ಯಕ್ರಮಕ್ಕೆ‌ ಕೇಂದ್ರ ಸರ್ಕಾರ ಅಸ್ತು ಎಂದಿದೆ.
ಈ ಕಾರ್ಯಕ್ರಮನ್ನು ಪ್ರಸಾರ ಮಾಡಲು ದೆಹಲಿಯ ಉಚ್ಛ ನ್ಯಾಯಾಲಯ ತಡೆ ನೀಡಿತ್ತು. ಆದರೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ಕೇಂದ್ರ ಸರ್ಕಾರ ಕಾರ್ಯಕ್ರಮದ ಪ್ರಸಾರಕ್ಕೆ ಹಸಿರು ನಿಶಾನೆಯನ್ನು ನೀಡಿದೆ.

ನಡೆದದ್ದು ಏನು?

ಯುಪಿಎಸ್ ಸಿ ಪರೀಕ್ಷೆಯಲ್ಲಿ ಹೆಚ್ಚಾಗಿ ಮುಸ್ಲಿಂ ವಿದ್ಯಾರ್ಥಿಗಳೇ ತೇರ್ಗಡೆಗೊಳ್ಳುತ್ತಿದ್ದಾರೆ ಎಂದು ಖಾಸಗಿ ಟಿವಿಯು ತನ್ನ ಟ್ರೇಲರ್ ನಲ್ಲಿ ಆರೋಪಿಸಿತ್ತು. ‘ಕಾರ್ಯಕ್ರಮವು ಬಹಿರಂಗ ದ್ವೇಷವನ್ನು ಹರಡುತ್ತದೆ ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಯೂನಿವರ್ಸಿಟಿಯ ವಿದ್ಯಾರ್ಥಿಗಳ ತೇಜೋವಧೆ ಮಾಡುತ್ತಿದೆ‌. ಹಾಗಾಗಿ ಈ ಕಾರ್ಯಕ್ರಮದ ಪ್ರಸಾರವನ್ನು ತಡೆಹಿಡಿಯಬೇಕು’ ಎಂಬ ಅರ್ಜಿದಾರರ ಮನವಿಗೆ ದೆಹಲಿಯ ಉಚ್ಛ ನ್ಯಾಯಾಲಯ ಕೇಬಲ್ ಟೆಲಿವಿಷನ್ ನೆಟ್ ವರ್ಕ್ (ನಿಯಂತ್ರಣ) ಕಾಯ್ದೆ, 1995ರ ಪ್ರಕಾರ ಕಾರ್ಯಕ್ರಮ ಪ್ರಸಾರಕ್ಕೆ ಆಗಸ್ಟ್ 28ರಂದು ತಡೆ ನೀಡಿತ್ತು. ಆದರೆ ಕೇಂದ್ರ ಸರ್ಕಾರಕ್ಕೆ ಇದರಲ್ಲಿ ಯಾವುದೇ ದೋಷ ಕಂಡುಬರದಿದ್ದರಿಂದ ಕಾರ್ಯಕ್ರಮ ಪ್ರಸಾರಕ್ಕೆ ಅನುಮತಿಯನ್ನು ನೀಡಿದೆ.

ಟಿವಿ ನ್ಯೂಸ್ ನ ನಿರೂಪಕ ಸುರೇಶ್ ಚವ್ಹಾಂಕೆ, ಟ್ರೇಲರ್ ನಲ್ಲಿ‌ ‘ಜಾಮಿಯಾ ಮಿಲಿಯಾ ಇಸ್ಲಾಮಿಯಾ ಯೂನಿವರ್ಸಿಟಿಯಿಂದ ತೇರ್ಗಡೆಹೊಂದುವ ವಿದ್ಯಾರ್ಥಿಗಳು ನಿಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳಾದರೆ ನೀವು ಏನು ಮಾಡುತ್ತೀರಿ’ ಎಂಬಂತಹ ವಿವಾದಿತ ಹೇಳಿಕೆಯನ್ನು ನೀಡಿದ್ದರು.

ಆದ್ದರಿಂದ ಐಪಿಎಸ್ ಅಸೋಸಿಯೇಷನ್ ಸೇರಿದಂತೆ ಎಲ್ಲ ಕಡೆಯಿಂದಲೂ ಈ ಕಾರ್ಯಕ್ರಮಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಖಾಸಗಿ ಟಿವಿ ನ್ಯೂಸ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಪತ್ರವೊಂದನ್ನು ಬರೆದು ‘ನಮ್ಮ ಕಾರ್ಯಕ್ರಮ ತಾವು ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡುತ್ತಿಲ್ಲ. ಒಂದು ವೇಳೆ ತಮಗೆ ಕಾನೂನು ಉಲ್ಲಂಘನೆಯ ಅಂಶಗಳು ಕಂಡು ಬಂದಲ್ಲಿ ನಮ್ಮ ಮೇಲೆ ಕ್ರಮ ಕೈಗೊಳ್ಳಿ’ ಎಂದು ಕೇಳಿಕೊಂಡಿತ್ತು. ಹೀಗಾಗಿ ಕೇಂದ್ರ ಸರ್ಕಾರವು ಕಾರ್ಯಕ್ರಮ ಪ್ರಸಾರಕ್ಕೆ ಅನುಮತಿಯನ್ನ ನೀಡಿ, ‘ಕಾರ್ಯಕ್ರಮ ಪ್ರಸಾರಕ್ಕೆ ಮುಂಚೆಯೇ ಕಾರ್ಯಕ್ರಮದ ಸ್ಕ್ರಿಪ್ಟ್ ನ್ನು ಪಡೆದುಕೊಂಡು ಸೆನ್ಸಾರ್ ಮಾಡುವುದು ಚಾನೆಲ್ ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ‌. ಪ್ರಸಾರಿತ ಕಾರ್ಯಕ್ರಮದಲ್ಲಿ ಕಾನೂನಿನ ವಿರುದ್ಧದ ಅಂಶಗಳಿದ್ದಲ್ಲಿ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದೆ.

Share This Article
Leave a comment