ಪಟ್ಟಣದ ತಾಲೂಕು ಆಸ್ಪತ್ರೆಗೆ ಜಿ ಪಂ ಸಿಇಓ ದಿಢೀರ್ ಭೇಟಿ- ಪರಿಶೀಲನೆ

Team Newsnap
1 Min Read
ಗೃಹಜ್ಯೋತಿ ಯೋಜನೆ : ಅರ್ಜಿ ಸಲ್ಲಿಸಲು ಜುಲೈ 27 ಕೊನೆಯ ದಿನಾಂಕ- ಸಚಿವ ಕೆ.ಜೆ ಜಾರ್ಜ್

ಮದ್ದೂರು : ಪಟ್ಟಣದ ಕೆ.ಗುರುಶಾಂತಪ್ಪ ಸ್ಮಾರಕ ಸಾರ್ವಜನಿಕ ತಾಲೂಕು ಆಸ್ಪತ್ರೆಗೆ ಜಿ.ಪಂ. ಸಿಇಓ ಶೇಕ್ ತನ್ವೀರ್ ಆಸೀಫ್ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಅಹವಾಲು ಸ್ವೀಕರಿಸಿದರು.

ಸಕಾಲದಲ್ಲಿ ರೋಗಿಗಳಿಗೆ ಚಿಕಿತ್ಸೆ ಸಿಗಲೆಂಬ ಸದುದ್ದೇಶದಿಂದ ತಾಲೂಕು ಆಸ್ಪತ್ರೆಗಳಿಗೆ ಸರ್ಕಾರ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದ್ದು ಮತ್ತು ವೈದ್ಯರ ಕೊರತೆ ನೀಗಿಸಲು ಕ್ರಮವಹಿಸಲಾಗಿದೆ ಅಧಿಕಾರಿಗಳು ಹಾಗೂ ವೈದ್ಯರು ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ ಸಕಾಲದಲ್ಲಿ ಚಿಕಿತ್ಸೆ ನೀಡಲು ಮುಂದಾಗಬೇಕೆಂದು ಸೂಚಿಸಿದರು.

ಸರಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಬಗೆಯ ಮಾತ್ರೆಗಳು ಮತ್ತು ಔಷಧಗಳು ಲಭ್ಯವಿದೆ. ಆದರೂ ವೈದ್ಯರು ಖಾಸಗಿ ಔಷಧಿ ಮಳಿಗೆಗಳಿಗೆ ಚೀಟಿ ಬರೆದುಕೊಡುತ್ತಾರೆ. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಖಾಸಗಿ ಕ್ಲಿನಿಕ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು ಈ ಸಂಬಂಧ ಪರಿಶೀಲನೆ ನಡೆಸಿ ಕ್ರಮವಹಿಸುವ ಭರವಸೆ ನೀಡಿದರು.

ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ ಈಗಾಗಲೇ ಡಯಾಲಿಸಸ್, ಎಕ್ಸ್ರೇ, ಶಸ್ತ್ರಚಿಕಿತ್ಸೆ ಇನ್ನಿತರ ಸೌಲಭ್ಯಗಳು ಆಸ್ಪತ್ರೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಸರಕಾರ ಒದಗಿಸಲಿದೆ ಎಂದರು.

ತಾ.ಪಂ ಕಚೇರಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ :

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಜಿ.ಪಂ. ಸಿಇಓ ಶೇಕ್ ತನ್ವೀರ್ ಆಸೀಫ್ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರೊಟ್ಟಿಗೆ ಚರ್ಚಿಸಿ ತರಗತಿ, ಗ್ರಂಥಾಲಯ, ಪರೀಕ್ಷಾ ವಿಭಾಗಕ್ಕೆ ಪರಿಶೀಲನೆ ನಡೆಸಿದ ಬಳಿಕ ತಾ.ಪಂ. ಕಚೇರಿಗೆ ತೆರಳಿ ನರೇಗಾ ಯೋಜನೆಯಡಿ ವಿವಿಧ ಗ್ರಾಮಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.ಗೃಹಜ್ಯೋತಿ ಯೋಜನೆ : ಅರ್ಜಿ ಸಲ್ಲಿಸಲು ಜುಲೈ 27 ಕೊನೆಯ ದಿನಾಂಕ- ಸಚಿವ ಕೆ.ಜೆ ಜಾರ್ಜ್

ಈ ವೇಳೆ ತಾ.ಪಂ. ಇಓ ಸಂದೀಪ್, ತಾಲೂಕು ಆರೋಗ್ಯಾಧಿಕಾರಿ ಡಾ. ರವೀಂದ್ರ.ಬಿ. ಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಡಾ. ಮಂಗಳಮ್ಮ ಇತರರಿದ್ದರು.

Share This Article
Leave a comment