ರಾಜ್ಯದ ವಿವಿಧೆಡೆ ಸಂಭವಿಸಲಿದೆ ಶೂನ್ಯ ನೆರಳಿನ ವಿದ್ಯಮಾನ, ವಿಸ್ಮಯ ಏನಿದು ವಿಜ್ಞಾನದ ಅಚ್ಚರಿ ಅಂತೀರಾ ? ಇಲ್ಲಿದೆ ಓದಿ
ಮುಂದಿನ ಕೆಲವು ದಿನಗಳಲ್ಲಿ ಸೂರ್ಯನು ಆಕಾಶದಲ್ಲಿ ಉತ್ತರ ದಿಕ್ಕಿನತ್ತ ಚಲಿಸುವಾಗ ನಮ್ಮೆಲ್ಲರ ನೆತ್ತಿಯ ನೇರದಲ್ಲಿ ಹಾದು ಹೋಗುವಾಗ ರಾಜ್ಯದ ವಿವಿಧೆಡೆ ಶೂನ್ಯ ನೆರಳಿನ ವಿದ್ಯಮಾನ ಸಂಭವಿಸಲಿದೆ.
ಶೂನ್ಯ ನೆರಳು ಎಂದರೇನು?
ಸೂರ್ಯನು ನೇರವಾಗಿ ತಲೆಯ ಮೇಲೆ ಇರುವಾಗ, ನೆರಳು ನಿಮ್ಮ ಕೆಳಗಿರುತ್ತದೆ. ಅಂದರೆ ನೀವು ನಿಮ್ಮ ನೆರಳಿನ ಮೇಲೆಯೇ ನಿಂತಿರುವುದರಿಂದ ಈ ನೆರಳು ನಿಮಗೆ ಗೋಚರಿಸುವುದಿಲ್ಲ. ಇದನ್ನೇ ಶೂನ್ಯ ನೆರಳು ಎನ್ನುತ್ತಾರೆ
ಮಂಗಳೂರಿನಲ್ಲಿ ಇಂದು (ಏ.24ರಂದು) ಮಧ್ಯಾಹ್ನ 12.28ಕ್ಕೆ ಮತ್ತು ಏ.25ರಂದು ಉಡುಪಿಯಲ್ಲಿ ಮಧ್ಯಾಹ್ನ 12.29ಕ್ಕೆ ಶೂನ್ಯ ನೆರಳಿನ ವಿದ್ಯಮಾನ ಗಮನಿಸಬಹುದು.
ಬೆಂಗಳೂರಿನವರು ಈ ವಿದ್ಯಮಾನವನ್ನು ಏ.24ರಂದು ಮಧ್ಯಾಹ್ನ 12.18ಕ್ಕೆ ಅನುಭವ ಮಾಡಿಕೊಂಡರು.
ಭೂಮಿಯು 23.5 ಡಿಗ್ರಿ ಕೋನದಲ್ಲಿ ಬಾಗಿದೆ. ಆಗ ಸೂರ್ಯನ ಸುತ್ತ ಚಲಿಸುವಾಗ, ಸೂರ್ಯನು ಉತ್ತರದಿಂದ ದಕ್ಷಿಣಕ್ಕೆ ಚಲಿಸಿದಂತೆ ಕಾಣುತ್ತದೆ.
ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ನಡುವೆ ವಾಸಿಸುವ ಎಲ್ಲ ಜನರಿಗೆ ವರ್ಷದ ಎರಡು ದಿನಗಳಲ್ಲಿ ಸೂರ್ಯ ಉತ್ತುಂಗದಲ್ಲಿ ಕಾಣಿಸಿಕೊಳ್ಳುತ್ತಾನೆ.
ಈ ವಿಸ್ಮಯ ಯಾವಾಗ ?
ಈ ಖಗೋಳ ವಿದ್ಯಮಾನ , ವಿಸ್ಮಯ ಪ್ರತಿವರ್ಷ ಏಪ್ರಿಲ್-ಮೇ ಮತ್ತು ಆಗಸ್ಟ್‌ನಲ್ಲಿ ಸಂಭವಿಸುತ್ತದೆ. ಯಾವುದೇ ಉಪಕರಣ ಬಳಸದೆ ಗಮನಿಸಬಹುದಾದ ಸುಲಭವಾದ ಖಗೋಳ ವಿದ್ಯಮಾನ
ಯಾವ್ಯಾವ ದಿನ, ಎಲ್ಲೆಲ್ಲಿ?
ಶೂನ್ಯ ನೆರಳಿನ ದಿನವನ್ನು ಏ.24ರಂದು ದ.ಕ., ಹಾಸನ, ಬೆಂಗಳೂರು, ಏ.25ರಂದು ಉಡುಪಿ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಏ.26ರಂದು ಕುಂದಾಪುರ, ತೀರ್ಥಹಳ್ಳಿ, ಗೌರಿಬಿದನೂರು, ಏ.27ರಂದು ಭಟ್ಕಳ, ಶಿವಮೊಗ್ಗ, ಚನ್ನಗಿರಿ, ಏ.28ರಂದು ಹೊನ್ನಾವರ, ಕುಮಟಾ, ಶಿಕಾರಿಪುರ, ಚಿತ್ರದುರ್ಗ. ಏ.29ರಂದು ಗೋಕರ್ಣ, ಶಿರಸಿ, ರಾಣೆಬೆನ್ನೂರು , ದಾವಣಗೆರೆ, ಏ.30ರಂದು ಕಾರವಾರ, ಹಾವೇರಿ, ಮೇ 1ರಂದು ಹುಬ್ಬಳ್ಳಿ , ಹೊಸಪೇಟೆ, ಬಳ್ಳಾರಿ, ಮೇ 2ರಂದು ಧಾರವಾಡ, ಗದಗ, ಮೇ 3ರಂದು ಬೆಳಗಾವಿ, ಸಿಂಧನೂರು, ಮೇ 4ರಂದು ಗೋಕಾಕ್, ಬಾಗಲಕೋಟೆ, ರಾಯಚೂರು, ಮೇ 6ರಂದು ಯಾದಗಿರಿ, ಮೇ 7ರಂದು ವಿಜಯಪುರ, ಮೇ 9ರಂದು ಕಲಬುರಗಿ, ಮೇ 10ರಂದು ಹುಮ್ನಾಬಾದ್ ಹಾಗೂ ಮೇ 11ರಂದು ಬೀದರ್‌ನಲ್ಲಿ ಕಾಣಬಹುದು.
ಈ ಸ್ಥಳದಲ್ಲಿ ನೆರಳುಗಳು ರಾಜ್ಯದ ಪೂರ್ವ ಭಾಗಗಳಲ್ಲಿ ಮಧ್ಯಾಹ್ನ 12.15ರಿಂದ ಮತ್ತು ರಾಜ್ಯದ ಪಶ್ಚಿಮ ಭಾಗಗಳಿಗೆ ಮಧ್ಯಾಹ್ನ 12.35ರ ನಡುವೆ ಒಂದು ನಿಮಿಷದಷ್ಟು ಕಾಲ ಸಂಭವಿಸುತ್ತದೆ.
ನೋಡುವುದು ಹೇಗೆ?!
ಶೂನ್ಯ ನೆರಳನ್ನು ಗಮನಿಸಲು ಸಿಲಿಂಡರ್, ಕ್ಯೂಬ್ ಅಥವಾ ಶಂಕುವಿನಂತೆ ಮೇಲಿನಿಂದ ಕೆಳಕ್ಕೆ ಸಮಾನ ಅಥವಾ ಹೆಚ್ಚುತ್ತಿರುವ ಅಗಲ ಹೊಂದಿರಬೇಕು. ಮನುಷ್ಯರ ದೇಹದ ಮೇಲ್ಭಾಗವು ಕೆಳ ಭಾಗಕ್ಕಿಂತ ವಿಶಾಲವಾಗಿದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ನೆರಳನ್ನು ಉಂಟು ಮಾಡಬಲ್ಲದು.
- ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
- ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು