ಜಮೀರ್‌ ಒಬ್ಬ ಜವಾಬ್ದಾರಿಯುತ ಶಾಸಕ- ಡಿಕೆಶಿ

Team Newsnap
1 Min Read

‘ಜಮೀರ್ ಒಬ್ಬ ಜವಾಬ್ದಾರಿಯುತ ಶಾಸಕ. ತಮ್ಮ ಮೇಲಿನ ಡ್ರಗ್ಸ್ ಆರೋಪ ಹೇಗೆ ಎದುರಿಸಬೇಕೆಂದು ಅವರಿಗೆ ಗೊತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ ‘ಸಿಸಿಬಿಯವರಿಗೆ ಮಾದಕವಸ್ತು ಪ್ರಕರಣದಲ್ಲಿ ಜಮೀರ್‌ ಹೆಸರು ಕೇಳಿಬಂದಿಲ್ಲ. ದಾರಿಯಲ್ಲಿ‌ ಹೋಗುವವರು ಒಂದೊಂದು ಮಾತನಾಡುತ್ತಾರೆ. ಜಮೀರ್ ಅಹ್ಮದ್ ತಮ್ಮ ದುಡ್ಡಲ್ಲಿ ಕೊಲಂಬೋಗಾದರೂ ಹೋಗಲಿ, ಅಮೇರಿಕಕ್ಕಾದರೂ ಹೋಗಲಿ. ಅದು ಅವರ ವೈಯಕ್ತಿಕ ವಿಚಾರ ಎಂದರು.

ಡ್ರಗ್ಸ್ ಪ್ರಕರಣದಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಕುರಿತಂತೆ ಮಾತನಾಡಿದ ಅವರು ‘ಮಾದಕವಸ್ತು ಪ್ರಕರಣದಲ್ಲಿ ಸಿಸಿಬಿಯವರ ತನಿಖೆಯಲ್ಲಿ ನಾವು ಯಾರೂ ಹಸ್ತಕ್ಷೇಪ ಮಾಡುವದಿಲ್ಲ. ಅವರಿಗೆ ಯಾರ ಮೇಲೆ ಸಂಶಯ ಇದೆಯೋ ಅವರನ್ನು ಕರೆದು ವಿಚಾರಣೆ ನಡೆಸಲಿ. ಸಿಸಿಬಿಯವರು ಏಕಾಏಕಿ ಯಾರಿಗೂ ನೋಟಿಸ್ ನೀಡಲ್ಲ. ಅವರಿಗೆ ದೊರಕಿದ ಆಧಾರದ ಮೇಲೆ ನೋಟಿಸ್ ನೀಡಿ, ವಿಚಾರಣೆ ನಡೆಸುತ್ತಾರೆ. ಆದರೆ ಸಿಸಿಬಿ ಅಧಿಕಾರಿಗಳು ಯಾರದ್ದೋ ರಾಜಕಾರಣದ ಒತ್ತಡಕ್ಕೆ ಇನ್ನೊಬ್ಬರನ್ನು ಸಿಲುಕಿಸಬಾರದು. ಆದರೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬ ಮಂತ್ರಿಯೂ ಒಂದೊಂದು ಥರಹದ ಹೇಳಿಕೆ ನೀಡುತ್ತಿರುವುದು ಭಯ ಬೀಳಿಸುತ್ತಿದೆ. ತನಿಖೆ ಕುರಿತು ಗೃಹ ಮಂತ್ರಿಗಳು ಹೇಳಿಕೆ ನೀಡಬಹುದು. ಆದರೆ ಇತರೆ ಮಂತ್ರಿಗಳ ಹೇಳಿಕೆ ಅನವಶ್ಯಕ’ ಎಂದು ಅವರು ಹೇಳಿದರು.

Share This Article
Leave a comment