ದೇಶವು ಸಂಪದ್ಭರಿತ ಸಂಪನ್ಮೂಲಗಳಿಂದ ಮಾತ್ರ ಶಕ್ತಿಯುತವಾಗಿರುವುದಲ್ಲ.ಜೊತೆಗೆ ದೇಶವನ್ನು ಪ್ರತಿ ಆಯಾಮದಲ್ಲಿ ಮುನ್ನಡೆಸಲು ಯುವ ಶಕ್ತಿ ಅತಿ ಅವಶ್ಯ.ಭಾರತ ಯುವ ರಾಷ್ಟ್ರ ಅತ್ಯಧಿಕ ಯುವ ಜನತೆ ನೆಲೆಸಿದ ಯುವರಾಷ್ಟ್ರ.ಯುವ ಜನತೆಯಿದ್ದರೆ ದೇಶವು ಸುಭದ್ರದ ನೆಲೆ.
ಸ್ವಾಮಿ ವಿವೇಕಾನಂದರು ಹೇಳುವಂತೆ ಯುವಕರಲ್ಲಿ ಅಪರಿಮಿತವಾದ ಶಕ್ತಿಯಿರುತ್ತದೆ.ಅದನ್ನು ಸರಿಯಾದ ರೀತಿಯಲ್ಲಿ ನಿಯಂತ್ರಿಸಿ ವಿನಿಯೋಗಿಸಿಕೊಳ್ಳುವುದು ಬಹುಮುಖ್ಯ ಎಂಬ ಮಾತು ಯುವಜನತೆಯ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.”ಏಳು ಎದ್ದೇಳು ,ಬಲಾಢ್ಯನಾಗು ಎಲ್ಲಾ ಹೊಣೆಗಾರಿಕೆಯನ್ನು ನಿನ್ನ ಮೇಲೆ ಹೊತ್ತು ಕೋ ನಿನ್ನ ಭವಿಷ್ಯದ ನಿರ್ಮಾತೃ ನೀನೇ ಎಂಬುದನ್ನು ತಿಳಿದಿರು.ನಿನಗೆ ಅಗತ್ಯವಿರುವ ಎಲ್ಲ ಶಕ್ತಿ ಸಾಮರ್ಥ್ಯಗಳು ನಿನ್ನೊಳಗೆ ಇವೆ ಆದ್ದರಿಂದ ನಿನ್ನ ಭವಿಷ್ಯ ನೀನೇ ರೂಪಿಸಿಕೊ” ಎಂದು ತಮ್ಮ ಮಾತಿನ ಚಾಟಿ ಮೂಲಕ ಯುವ ಪಡೆಯನ್ನು ಎಚ್ಚರಿಸುತ್ತಾರೆ.
“ಯುವ ಶಕ್ತಿ ಭವ್ಯ ದೇಶದ ಆಸ್ತಿ” ಅಭಿವೃದ್ಧಿ ಪಥದತ್ತ ಕೊಂಡ್ಯೋಯುವ ಶಕ್ತಿಶಾಲಿಗಳು.ಭವಿಷ್ಯದ ನಾಯಕರು.ಸ್ವಾಸ್ಥ ಸಮಾಜದ ನಿರ್ಮಾತೃಗಳು.ದೇಶವನ್ನು ಸಾಧನೆಯತ್ತ ಮುನ್ನಡೆಸುವ ಛಲವಾದಿಗಳು.ತಾಳ್ಮೆ ಸಹನೆ ಗುರಿಯತ್ತ ಚಿತ್ತವಿದ್ದ ಯುವ ಸಮೂಹ ಎಂತಹದೆ ಸ್ಥಿತಿ ಬಂದರೂ ದಿಟ್ಟತನದಿ ಎದುರಿಸಿ ಸಂಕಷ್ಟದಿಂದ ಪಾರು ಮಾಡಿ ಬೆಳವಣಿಗೆ ಹಾದಿಯತ್ತ ಸಾಗಲು ಪರಿಶ್ರಮವಹಿಸುತ್ತದೆ.ಇನ್ನೊಂದು ವಿವೇಕಾನಂದರ ವಾಣಿ ನೆನಪಾಗುತ್ತೆ”ಯವ್ವನದ ಅವಧಿ ಚಿಕ್ಕದು ದೀರ್ಘವಲ್ಲ.ಯುವಜನರು ಸಾಟಿಯಿಲ್ಲದ ಶಕ್ತಿ ಮತ್ತು ಉತ್ಸಾಹವನ್ನು ಹೊಂದಿದ್ದಾರೆ ಬದಲಾವಣೆ ತರುವ ಶಕ್ತಿ ಅವರಿಗಿದೆ”ಎಂಬ ಸಾಲುಗಳು ಯುವ ಜನತೆಯಿಂದಲೇ ಎಂತಹ ಪರಿವರ್ತನೆಯು ಸಾಧ್ಯ ಬದಲಾವಣೆಯು ಶತಸಿದ್ದ ಆದರೆ ಅದು ಆಯಾ ದೇಶದ ಮೇಲೆ ಅವಲಂಬನೆಯಾಗಿರುತ್ತದೆ ಜೊತೆಗೆ ಅವರೊಳಗಿನ ಆತ್ಮವಿಶ್ವಾಸ ಮತ್ತು ದೇಶ ಪ್ರೇಮವೂ ಇದ್ದರೆ ಅವರೇ ಬಲಿಷ್ಠ ದೇಶ ಕಟ್ಟುವ ಕಲಿಗಳು.ಭವ್ಯ ದೇಶದ ಪ್ರಗತಿಯ ಸೂತ್ರದಾರರು.
ಯುವ ಶಕ್ತಿಯಿಂದ ದೇಶದ ಶಕ್ತಿ ಹೆಚ್ಚಾಗಲು ಹಲವಾರು ಅಂಶಗಳು ಪ್ರೇರೇಪಿಸುತ್ತವೆ.
1.ನನ್ನ ದೇಶವೆಂಬ ಅಭಿಮಾನ
2.ಹೆತ್ತ ನಾಡಿನ ಋಣವ ತೀರಿಸಬೇಕೆಂಬ ತಾಯ್ನಾಡಿನ ಬಗ್ಗೆ ಪ್ರೀತಿ
3.ದೇಶ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕೆ ನಾನೇನು ಕೊಡಬೇಕು ಎಂಬ ಆತ್ಮಾವಲೋಕನದ ಚಿಂತನಾಶೀಲ ವಿಚಾರಗಳು..
4.ಸಾಮರ್ಥ್ಯ,ಶ್ರದ್ಧೆ,ಜ್ಞಾನದಿಂದ ದೇಶದ ಕುಡಿಯಾಗಿ ಯಾವುದೇ ಕ್ಷೇತ್ರಕ್ಕಾದರೂ ಕೊಡುಗೆ ನೀಡಬೇಕೆಂಬ ಅಗಮ್ಯ ಅಭಿಲಾಷೆ
5.ನನ್ನ ದೇಶ ಎಲ್ಲ ರಾಷ್ಟ್ರಗಳಿಗಿಂತ ಎತ್ತರದಲ್ಲಿರಬೇಕು ಎಂಬ ಮನೋಭಾವನೆ
6.ನನ್ನೊಳಗೆ ಹುದುಗಿರುವ ಸೃಜನಶೀಲತೆಗೆ ರೂಪ ನೀಡಬೇಕೆಂಬ ಕ್ರಿಯಾತ್ಮಕ ಅಲೋಚನೆಯ ಉಗಮ
ಇದನ್ನು ಓದಿ –ಬೆಂಗಳೂರಿನಲ್ಲಿ’ನಮ್ಮ ಮೆಟ್ರೋ’ ಪ್ರಯಾಣ ದರ ಏರಿಕೆ
ಹೀಗೆಯೇ ಯುವಕರು ದೇಶದ ಶಕ್ತಿಯಾಗಿ ಪ್ರತಿ ಹಂತದಲ್ಲೂ ಅಭಿವೃದ್ಧಿ ಪಥದಲ್ಲಿ ಸಾಗಿಸುವ ಮಹತ್ತರ ಜವಾಬ್ದಾರಿ ಹೊತ್ತಾಗಲೆ ದೇಶವು ಬಲಾಢ್ಯವಾಗಿ ವಿಶ್ವಗುರುವಾಗಿ ಹೊರಹೊಮ್ಮುವುದು.

ಅವಿನಾಶ ಸೆರೆಮನಿ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು