November 5, 2026

Newsnap Kannada

The World at your finger tips!

namma metro

ಬೆಂಗಳೂರಿನಲ್ಲಿ’ನಮ್ಮ ಮೆಟ್ರೋ’ ಪ್ರಯಾಣ ದರ ಏರಿಕೆ

Spread the love
  • ಕೊನೆಗೂ ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳ 

  • ನಮ್ಮ ಮೆಟ್ರೋ (BMRCL) ಈ ಬಗ್ಗೆ ಅಧಿಕೃತವಾಗಿ ಮಾಹಿತಿ

  • ದರ ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನಂತೆ ಟಿಕೆಟ್ ರೇಟ್ ಎಷ್ಟು? 

  • ಕನಿಷ್ಠ 10 ರು ಗರಿಷ್ಠ 90 ರು

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬಿದ್ದಿದೆ ನಾಳೆಯಿಂದಲೇ (ಫೆ9)ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಆಗುತ್ತಿದೆ.

ಭಾನುವಾರದಿಂದಲೇ ನಮ್ಮ ಮೆಟ್ರೋದಲ್ಲಿ ಪರಿಷ್ಕೃತ ದರ ಜಾರಿ ಆಗುತ್ತಿದೆ. ದರ ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನಂತೆ ನಮ್ಮ ಮೆಟ್ರೋ ದಲ್ಲಿ ಪರಿಷ್ಕೃತ ದರ ಜಾರಿಯಾಗಲಿದೆ. ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ. 5 ರಷ್ಟು ರಿಯಾಯಿತಿ ಮುಂದುವರಿಯುತ್ತದೆ ಎನ್ನಲಾಗಿದೆ.

ನಾಳೆಯಿಂದ ಬೆಂಗಳೂರಲ್ಲಿ ನಮ್ಮ ಮೆಟ್ರೋ ಪರಿಷ್ಕೃತ ದರ ಪಟ್ಟಿಯ ಮಾಹಿತಿ ಇಲ್ಲಿದೆ.

ಕಿ.ಮೀ – ಟಿಕೆಟ್ ದರ

  • 
0-2 KM – 10 ರೂಪಾಯಿ

  • 2-4KM – 20 ರೂಪಾಯಿ

  • 4-6KM – 30 ರೂಪಾಯಿ

  • 6-8KM – 40 ರೂಪಾಯಿ

  • 8-10KM – 50 ರೂಪಾಯಿ

  • 10-15KM – 60 ರೂಪಾಯಿ

  • 15-20KM – 70 ರೂಪಾಯಿ

  • 20-25KM – 80 ರೂಪಾಯಿ

  • 25-30KM – 90 ರೂಪಾಯಿ

ಇದನ್ನು ಓದಿ –“ಈ ಜನ್ಮದಲ್ಲಿ ಸೋಲಿಸಲಾಗದು” ಎಂದಿದ್ದ ಕೇಜ್ರಿವಾಲ್‌ಗೆ ಚುನಾವಣೆಯಲ್ಲಿ ಭಾರಿ ಹಿನ್ನಡೆ

ಈ ಹಿಂದಿನ ದರದಲ್ಲಿ ಮಿನಿಮಮ್ 10 ರೂಪಾಯಿ ಇಂದ ಮ್ಯಾಕ್ಸಿಮಮ್ 60 ರೂಪಾಯಿ ಇತ್ತು. ಇದೀಗ ಮಿನಿಮಮ್ 10 ರೂಪಾಯಿ ಇಂದ ಮ್ಯಾಕ್ಸಿಮಮ್ 90 ರೂಪಾಯಿ ಆಗಿದೆ.

error: Content is protected !!