ಹೊಡಾಘಟ್ಟದಲ್ಲಿ ಹಾವು ಕಡಿತದಿಂದ ಯುವಕ ಸಾವು

Team Newsnap
0 Min Read

ಮಂಡ್ಯ ತಾಲ್ಲೂಕಿನ ಹೊಡಾಘಟ್ಟ ಗ್ರಾಮದ ಲೇಟ್ ಎಚ್.ಬಿ.ಶಿವರಾಮು ಪುತ್ರ ಎಚ್.ಎಸ್. ಉಲ್ಲಾಸ್ ಗೌಡ(28) ಆಕಸ್ಮಿಕವಾಗಿ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿದ ಘಟನೆ ನಡೆದಿದೆ.

ಬುಧವಾರ ಮಧ್ಯಾಹ್ನ ಗದ್ದೆಯಲ್ಲಿ ನೀರು ಹಾಯಿಸುತ್ತಿದ್ದಾಗ ಘಟನೆ ನಡೆದಿದೆ, ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದರು.

ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಕೆರಗೋಡು ಪೊಲೀಸ್ ಠಾಣೆ ಪ್ರಕರಣ ಮಾಡಲಾಗಿದೆ. ಅಂತ್ಯಸಂಸ್ಕಾರ ಹೊಡಾಘಟ್ಟ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

Share This Article
Leave a comment