ಮೈಸೂರಿನ ಟಿ.ನರಸಿಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಮಣಿಕಂಠ ಹಾಗೂ ಸಂದೇಶ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 6 ಜನರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದರು. ಘಟನೆ ಕುರಿತು ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿ. ನರಸೀಪುರ ಪಟ್ಟಣದಲ್ಲಿ ಹನುಮಜಯಂತಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ 2 ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಬಳಿಕ ಪಟ್ಟಣದ ಹೊರವಲಯದಲ್ಲಿ ಟಿ.ನರಸೀಪುರ ಪಟ್ಟಣದ ಶ್ರೀರಾಂಪುರ ಕಾಲೋನಿ ನಿವಾಸಿ ವೇಣುಗೋಪಾಲ್ ನಾಯಕ್ (32) ಹತ್ಯೆ ಮಾಡಲಾಗಿದೆ.
ಯುವ ಬ್ರಿಗೇಡ್’ ಕಾರ್ಯಕರ್ತನ ಹತ್ಯೆ : ಚಕ್ರವರ್ತಿ ಸೂಲಿಬೆಲೆ ಗಂಭೀರ ಆರೋಪ
ಹನುಮ ಜಯಂತಿಯ ಸಕ್ರಿಯ ಸಂಘಟಕರಾಗಿದ್ದ ಕಾರಣ ನಾವು ನಿನ್ನೆ ನಮ್ಮ ಸ್ವಯಂಸೇವಕರಲ್ಲಿ ಒಬ್ಬರನ್ನು ಕಳೆದುಕೊಂಡಿದ್ದೇವೆ! ಅವರನ್ನು ಕಾಂಗ್ರೆಸ್ ಬೆಂಬಲಿಗರು ಬರ್ಬರವಾಗಿ ಹತ್ಯೆ ಮಾಡಿದ್ದರು. ಕರ್ನಾಟಕ ಉರಿಯುತ್ತಿದೆ.. ಶೀಘ್ರದಲ್ಲೇ ಮತ್ತೊಂದು ಪಶ್ಚಿಮ ಬಂಗಾಳ ಸಾಕ್ಷಿಯಾಗಲಿದೆ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಗಂಭೀರ ಆರೋಪ ಮಾಡಿದ್ದಾರೆ.
- ರಾಜ್ಯದಲ್ಲಿ ಮಿತಿಮೀರಿದ ಅತ್ಯಾಚಾರ, ಸುಲಿಗೆ ಪ್ರಕರಣಗಳು: ಆರ್. ಅಶೋಕ್ ಆಕ್ರೋಶ
- ವಂಚನೆ ಆರೋಪ: ಮಂಡ್ಯದಲ್ಲಿ ಐಶ್ವರ್ಯಗೌಡ ವಿರುದ್ಧ ಮತ್ತೊಂದು FIR ದಾಖಲು
- ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಆಟೋಮೋಟಿವ್ ಟೆಕ್ನಾಲಜಿ ಕೇಂದ್ರ (ಐಕ್ಯಾಟ್) ಸ್ಥಾಪನೆ ಖಚಿತ
- ಬೆಂಗಳೂರು: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ – ಇಬ್ಬರು ಆರೋಪಿಗಳು ಬಂಧನ
- Mandya : KSRTC ಬಸ್ ಪಲ್ಟಿಯಾಗಿ 30 ಪ್ರಯಾಣಿಕರಿಗೆ ಗಾಯ
More Stories
ರಾಜ್ಯದಲ್ಲಿ ಮಿತಿಮೀರಿದ ಅತ್ಯಾಚಾರ, ಸುಲಿಗೆ ಪ್ರಕರಣಗಳು: ಆರ್. ಅಶೋಕ್ ಆಕ್ರೋಶ
ವಂಚನೆ ಆರೋಪ: ಮಂಡ್ಯದಲ್ಲಿ ಐಶ್ವರ್ಯಗೌಡ ವಿರುದ್ಧ ಮತ್ತೊಂದು FIR ದಾಖಲು
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಆಟೋಮೋಟಿವ್ ಟೆಕ್ನಾಲಜಿ ಕೇಂದ್ರ (ಐಕ್ಯಾಟ್) ಸ್ಥಾಪನೆ ಖಚಿತ