ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಉಚಿತ ಗಣೇಶ ಮೂರ್ತಿ ಪಡೆದುಕೊಳ್ಳಲು ಯುವಕರು ಮುಗಿಬಿದ್ದಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ. ಇಂದ್ರೇಶ್ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸಿದರು. ಗಣೇಶೋತ್ಸವ ನೆಪದಲ್ಲಿ ಚುನಾವಣೆ ಪ್ರಚಾರಕ್ಕೆ ಮುಂದಾಗಿದ್ದಾರೆ.ನಾಳೆ ನಟಿ ರಮ್ಯಾ ಕೊಡುವ ಗುಡ್ ನ್ಯೂಸ್ ಏನು ಗೊತ್ತಾ?
ಉಚಿತ ಗಣೇಶ ಮೂರ್ತಿ ವಿತರಿಸುವುದಾಗಿ ಹತ್ತು ದಿನಗಳ ಮುಂಚೆಯೇ ಘೋಷಣೆ ಮಾಡಿದ್ದರು. ನೋಂದಣಿ ಮಾಡಿಕೊಳ್ಳುವಂತೆ ಮೇಲುಕೋಟೆ ಕ್ಷೇತ್ರದ ಜನರಿಗೆ ಇಂದ್ರೇಶ್ ಕರೆ ನೀಡಿದ್ದರು.

ಉಚಿತವಾಗಿ ಗಣೇಶ ಮೂರ್ತಿ ಸಿಗುತ್ತದೆ ಎಂಬ ಆಸೆಯಿಂದ ನೂರಾರು ಸಂಖ್ಯೆಯಲ್ಲಿ ಯುವಕರು ಆಗಮಿಸಿದ್ದರು. ಗಣೇಶ ಮೂರ್ತಿಗಾಗಿ ನಾ ಮುಂದು ತಾ ಮುಂದೆ ಎಂದು ಮುಗಿಬಿದ್ದಿದ್ದರು.
ಮೊದಲಿಗೆ ಇಂದ್ರೇಶ್ ಅವರು ತರಿಸಿದ್ದ 600 ಗೌರಿ-ಗಣೇಶ ಮೂರ್ತಿ ಕ್ಷಣಾರ್ಧದಲ್ಲಿ ಖಾಲಿ ಆಯಿತು.
ಯುವಕರ ಸಂಖ್ಯೆ ಹೆಚ್ಚಿದ್ದರಿಂದ ಸ್ಥಳೀಯವಾಗಿ ಮತ್ತಷ್ಟು ಗಣೇಶ ಮೂರ್ತಿ ತರಿಸಿ ಹಂಚಲಾಯಿತು. ಫ್ರೀ ಗಣೇಶನಿಗಾಗಿ ನೂಕು ನುಗ್ಗಲು ಕೂಡ ಹೆಚ್ಚಿತ್ತು. ಪರಿಸ್ಥಿತಿ ನಿಭಾಯಿಸಲು ಇಂದ್ರೇಶ್ ಬೆಂಬಲಿಗರು ಹರಸಾಹಸ ಪಟ್ಟರು.
- ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
- ಹೇಮಂತ್ ನಿಂಬಾಳ್ಕರ್ ವಾರ್ತಾ ಇಲಾಖೆ ಕಮೀಷನರ್ ನೇಮಕ
- ರಾಜ್ಯ ಸರ್ಕಾರದಿಂದ 11 ಐಎಎಸ್ ಅಧಿಕಾರಿ’ಗಳ ವರ್ಗಾವಣೆ
- ಬಾಡಿಗೆದಾರರಿಗೂ 200 ಯುನಿಟ್ ಉಚಿತ ವಿದ್ಯುತ್
- ಪತ್ರಕರ್ತ ಹೊನಕೆರೆ ನಂಜಂಡೇಗೌಡರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ ಪ್ರಕಟ
- ಜುಲೈ 3 ರಿಂದ ರಾಜ್ಯ ಬಜೆಟ್ ಅಧಿವೇಶನ: ಜು. 7 ರಂದು ಬಜೆಟ್ ಮಂಡನೆ
ಆದರೂ ಕೆಲ ಯುವಕರ ತಂಡಕ್ಕೆ ಗಣೇಶ ಸಿಗದೇ ನಿರಾಸೆಯಾಯಿತು.
More Stories
ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
ಹೇಮಂತ್ ನಿಂಬಾಳ್ಕರ್ ವಾರ್ತಾ ಇಲಾಖೆ ಕಮೀಷನರ್ ನೇಮಕ
ರಾಜ್ಯ ಸರ್ಕಾರದಿಂದ 11 ಐಎಎಸ್ ಅಧಿಕಾರಿ’ಗಳ ವರ್ಗಾವಣೆ