March 31, 2023

Newsnap Kannada

The World at your finger tips!

cyber crime , crime , video

Young woman's private video captured: Demand for 30 lakhs - Accused arrested ಯುವತಿಯ ನಗ್ನ ವಿಡಿಯೋ ಸೆರೆ : 30 ಲಕ್ಷ ರು ಗೆ ಬೇಡಿಕೆ -ಆರೋಪಿ ಬಂಧನ

ಯುವತಿಯ ನಗ್ನ ವಿಡಿಯೋ ಸೆರೆ : 30 ಲಕ್ಷ ರು ಗೆ ಬೇಡಿಕೆ -ಆರೋಪಿ ಬಂಧನ

Spread the love

ಬೆಂಗಳೂರಿನಲ್ಲಿ ಮಹಿಳೆಯೊಬ್ಬರ ಅಶ್ಲೀಲ ಚಿತ್ರ ಸೆರೆ ಹಿಡಿದು 30 ಲಕ್ಷ ರು ನೀಡುವಂತೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಮಹಾಂತೇಶ ಬಂಧಿತ ಆರೋಪಿ.ಈತ ಯುವತಿಯ ನಗ್ನ, ಅರೆ ನಗ್ನ ವಿಡಿಯೋ ಇದೆ. 30 ಲಕ್ಷ ರೂಪಾಯಿ ಹಣ ನೀಡದೆ ಇದ್ದರೆ, ಸಾಮಾಜಿಕ ಜಾಲತಾಣದಲ್ಲಿ ಪ್ರಕಟ ಮಾಡೋದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.ಯುವತಿಯ C D ಇಟ್ಕೊಂಡು ಬಸವಲಿಂಗ ಸ್ವಾಮಿಗೆ ಮತ್ತೊಬ್ಬ ಸ್ವಾಮಿ ಬ್ಲಾಕ್ ಮೇಲ್ – ಹನಿಟ್ರ್ಯಾಪ್ ಶಂಕೆ

ಈ ಸಂಬಂಧ ಈಶಾನ್ಯ ವಿಭಾಗದ ಪೊಲೀಸರಿಗೆ ನೊಂದ ಮಹಿಳೆ ದೂರು ನೀಡಿದ್ದಾಳೆ. ಪ್ರಕರಣವನ್ನು ದಾಖಲಿಸಿಕೊಂಡ ಈಶಾನ್ಯ ವಿಭಾಗದ ಪೊಲೀಸ್​ ಅಧಿಕಾರಿಗಳು ತಕ್ಷಣ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಪೊಲೀಸ್​ ವಿಚಾರಣೆ ವೇಳೆ ಆರೋಪಿ ಹೇಳಿಕೆಯನ್ನು ಕೇಳಿ ಅಧಿಕಾರಿಗಳು ಶಾಕ್​ ಆಗಿದ್ದಾರೆ . ಟ್ಯಾಂಗೊ ಎಂಬ ಆ್ಯಪ್​​ ಮೂಲಕ ಫೋಟೋ ಹಾಗೂ ವಿಡಿಯೋವನ್ನು ಸಂಪಾದನೆ ಮಾಡುತ್ತಿದ್ದ ಆರೋಪಿ ಮಹಿಳೆಯ ನಗ್ನ ಹಾಗೂ ಅರೆ ನಗ್ನ ಫೋಟೋಗಳನ್ನು ಸಂಗ್ರಹಿಸಿ, ಅವರ ನಂಬರ್​ಗೆ ಕಳುಹಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಸದ್ಯ ಆರೋಪಿಯ ಮೇಲೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

error: Content is protected !!