December 28, 2024

Newsnap Kannada

The World at your finger tips!

crime,murder,women

ಯುವತಿಯ ನಗ್ನ ವಿಡಿಯೋ ರೆಕಾರ್ಡ್ : ಬ್ಲಾಕ್ ಮೇಲ್ ಮಾಡಿದ ಪ್ರಿಯತಮನೇ ವಿಲನ್

Spread the love

ಯುವತಿಯ ನಗ್ನ ವಿಡಿಯೋ ರೆಕಾರ್ಡ್ ಮಾಡಿ ಬ್ಲಾಕ್ ಮೇಲ್ ಮಾಡಿ ಪ್ರಿಯತಮನೇ ದುಡ್ಡು ಕಿತ್ತು ಪೀಡಿಸಿದ ಪ್ರಕರಣ ಜರುಗಿದೆ.

ಸಾಮಾಜಿಕ ಜಾಲ ತಾಣದ ಮೂಲಕ ಆರಂಭವಾದ ಬೆಂಗಳೂರು ಟು ಮೈಸೂರು ಲವ್ ಸ್ಟೋರಿ ದುರಂತವಾಗಿದೆ

ಅಪ್ಪ – ಅಮ್ಮನ್ನು ಮೀಟ್ ಮಾಡಿಸ್ತಿನಿ ಬಾ ಅಂದಿದ್ದ ಪ್ರಿಯತಮನೇ ಪ್ರೀತಿಸಿದವಳ ಬಾಳಿಗೆ ವಿಲನ್ ಆಗ್ಬಿಟ್ಟಿದ್ದ.

ಭಾವಿ ಅತ್ತೆ ಮಾವನ್ನು ನೋಡಿ ಮಾತನಾಡಿಸುವ ಖುಷಿಯಲ್ಲಿ ಬೆಂಗಳೂರಿಂದ ಮೈಸೂರು ಬಸ್ ಹತ್ತಿದ ಯುವತಿ ವಾಪಸ್ ಹೋಗಿದ್ದು ಪೊಲೀಸ್ ಸ್ಟೇಷನ್ ಗೆ!

ಇನ್​​ಸ್ಟಾಗ್ರಾಮ್​​ ಗೆಳೆಯ ಲವ್​ ಮಾಡ್ತೀನಿ ಅಂತಾ ಹೇಳಿ, ಯುವತಿಯ ಬೆತ್ತಲೇ ವಿಡಿಯೋ ರೆಕಾರ್ಡ್​ ಮಾಡಿ ವಂಚನೆ ಮಾಡಿರುವ ಘಟನೆ ನಡೆದಿದೆ.

ಬಸನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಯುವತಿಗೆ ಮೈಸೂರಿನ ಹರ್ಷಿತ್ ಎಂಬಾತನ ಪ್ರೀತಿ ಹೆಸರಿನಲ್ಲಿ ವಂಚನೆ ಮಾಡಿದ್ದಾನೆ. ಅಲ್ಲದೇ ಬೆತ್ತಲೇ ವಿಡಿಯೋ ರೆಕಾರ್ಡ್​​ ಮಾಡಿ, ಯುವತಿಗೆ ಲೈಂಗಿಕ ಕಿರುಕುಳ ನೀಡಿ ಆರೇಳು ತಿಂಗಳುಗಳಿಂದ ಹಣವನ್ನೂ ವಸೂಲಿ ಮಾಡಿದ್ದಾನೆ.

ಪ್ರಕರಣದ ವಿವರ :

ಕಳೆದ ವರ್ಷ ಬೆಂಗಳೂರಿನ 21 ವರ್ಷದ ಯುವತಿಗೆ ಮೈಸೂರಿನ ಹರ್ಷಿತ್​ ಎಂಬ ಯುವಕನೊಂದಿಗೆ ಇನ್​​ಸ್ಟಾಗ್ರಾಮ್​ ಮೂಲಕ ಪರಿಚಯವಾಗಿತ್ತು.

ಇನ್​​ಸ್ಟಾದಲ್ಲಿ ಆರಂಭವಾದ ಸ್ನೇಹ ಸಮಯ ಕಳೆಯುತ್ತಿದಂತೆ ಪ್ರೀತಿಯಾಗಿ ಮಾರ್ಪಾಡಾಗಿತ್ತು. ಈ ನಡುವೆ ಇಬ್ಬರ ಮೊಬೈಲ್​ ನಂಬರ್​ಗಳು ಕೂಡ ಎಕ್ಸ್​​​ಚೇಂಜ್​​​ ಆಗಿದ್ದವು. ಕಳೆದ ಐದಾರು ತಿಂಗಳುಗಳಿಂದ ವಾಟ್ಸಾಪ್​​ನಲ್ಲಿ ಚಾಟ್​ ಮಾಡಲು ಆರಂಭ ಮಾಡಿದ್ದರು.

ಈ ನಡುವೆ ಆರೋಪಿ ಯುವಕ ಚಿರಾಗ್​ ಯುವತಿಗೆ ಪ್ರಪೋಸ್​ ಮಾಡಿದ್ದ. ಅಲ್ಲದೇ ನನ್ನ ಪೋಷಕರನ್ನು ಒಪ್ಪಿಸಿ ನಿನ್ನನ್ನು ಮದುವೆಯಾಗುತ್ತೀನಿ ಅಂತಾ ಯುವತಿಯ ಮನವೊಲಿಸಿದ್ದನಂತೆ.

ಈ ನಡುವೆ ಯುವತಿಗೆ ನಮ್ಮ ಪೋಷಕರಿಗೆ ನಿನ್ನನ್ನು ಪರಿಚಯ ಮಾಡಿಕೊಡುತ್ತೇನೆ. ಅದ್ಕೆ ನೀನು ಮೈಸೂರಿಗೆ ಬರಬೇಕು ಎಂದು ಯುವತಿಗೆ ಆಹ್ವಾನ ನೀಡಿದ್ದನಂತೆ.

ಆತನ ಮಾತು ನಂಬಿದ್ದ ಯುವತಿ ಕಳೆದ ಆರು ತಿಂಗಳ ಹಿಂದೆ ಮೈಸೂರಿಗೆ ಭೇಟಿ ನೀಡಿದ್ದಳು. ಆದರೆ ಆ ವೇಳೆ ನೀನು ಬರೋದು ತುಂಬಾ ತಡ ಆಗಿದೆ. ಇವತ್ತು ನೀನು ಹೋಟೆಲ್​​ನಲ್ಲಿ ಇರು, ನಾಳೆ ಬೆಳಗ್ಗೆ ನಿನ್ನನ್ನು ಮನೆಗೆ ಕರೆದುಕೊಂಡು ಹೋಗ್ತೀನಿ ಅಂತ ಹೇಳಿ ಆಕೆನ್ನು ಹೋಟೆಲ್​​ನಲ್ಲಿ ಇರಿಸಿದ್ದನಂತೆ. ಈ ವೇಳೆ ಚಿರಾಗ್​ ಯುವರಿಗೆ ಮತ್ತು ಬರೋ ಜ್ಯೂಸ್​ ಕುಡಿಸಿ ಆಕೆ ಪ್ರಜ್ಞೆ ತಪ್ಪುವಂತೆ ಮಾಡಿದ್ದು, ಬಳಿಕ ತನ್ನ ಸ್ನೇಹಿತ ಹರ್ಷಿತ್​​ನನ್ನು ರೂಮ್​ಗೆ ಕರೆಯಿಸಿಕೊಂಡಿದ್ದ. ಈ ವೇಳೆ ಇಬ್ಬರು ಸೇರಿ ಯುವತಿಯನ್ನು ಬೆತ್ತಲೆ ಮಾಡಿ ಫೋಟೋ ಹಾಗೂ ವಿಡಿಯೋ ಶೂಟ್​ ಮಾಡಿಕೊಂಡಿದ್ದರಂತೆ.

ಯುವತಿಗೆ ಬೆಳಗ್ಗೆ ಎಚ್ಚರವಾದಾಗ ಹೊಟೇಲ್​​​​ ರೂಮ್​​ನಲ್ಲಿ ಯುವತಿ ವಿವಸ್ತ್ರಗಳಾಗಿ ಇರುವುದನ್ನು ಕಂಡು ಶಾಕ್​ ಆಗಿದ್ದಾಳೆ. ಆದರೆ ಮೊದಲೇ ಸಂಚು ಮಾಡಿದ್ದ ಆರೋಪಿಗಳು ಯುವತಿಗೆ ಫೋಟೋ, ವಿಡಿಯೋ ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಸುಮಾರು 2 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ನೀಡಿದ್ದಳಂತೆ.

ಆರೋಪಿಗಳು ಕಳೆದ ವಾರ ಕೂಡ ಬೆಂಗಳೂರಿಗೆ ಆಗಮಿಸಿ, ಮೆಜೆಸ್ಟಿಕ್ ಬಳಿಯ ಹೋಟೆಲ್​​ವೊಂದಕ್ಕೆ ಯುವತಿಯನ್ನು ಕರೆಸಿದ್ದರಂತೆ. ಈ ವೇಳೆ ಯುವತಿಯ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು ಮತ್ತೆ ಆಕೆಯನ್ನು ಬೆತ್ತಲು ಮಾಡಿ ದಿನವಿಡಿ ಕೂಡಿಟ್ಟ ಪಾಪಿಗಳು, ಕುತ್ತಿಗೆ ಮೇಲೆ ಚಾಕು ಇಟ್ಟು ನಿನ್ನ ಕುಟುಂಸ್ಥರಿಗೆ ಕರೆ ಮಾಡಿ ಹಣ ತಂದುಕೊಡುವಂತೆ ಬೆದರಿಕೆ ಹಾಕಿದ್ದಾಳೆ. ಈ ವೇಳೆ ಅವರಿಂದ ತಪ್ಪಿಸಿಕೊಂಡು ಬಂದು ಯುವತಿ ನೇರ ಪೋಷಕರ ಬಳಿ ಹೋಗಿ ನಡೆದ ಒಂದು ವರ್ಷದಿಂದ ನಡೆದ ಹಿಂಸೆಯನ್ನು ವಿವರಿಸಿದ್ದಾಳೆ. ಕೂಡಲೇ ಎಚ್ಚೆತ್ತ ಪೊಲೀಸರು ಯುವತಿಯೊಂದಿಗೆ ಬಂದು ಬಸವನಗುಡಿ ಪೊಲೀಸ್​​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ಗಂಭೀರತೆಯನ್ನು ಅರಿತು ಪೊಲೀಸರು ಆರೋಪಿಗಳಾದ ಚಿರಾಗ್​ ಹಾಗೂ ಹರ್ಷಿತ್​​ನನ್ನು ಪೊಲೀಸರು ಪತ್ತೆ ಮಾಡಲು ಕಾರ್ಯಾಚರಣೆ ನಡೆಸಿದ್ದಾರೆ. ಯುವತಿಯ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಐಪಿಸಿ 323, 506, 354 ಸೆಕ್ಷನ್ ಅಡಿ ಎಫ್​​ಐಆರ್ ದಾಖಲು ಮಾಡಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!