ವಂಚನೆ, ಕಿರುಕುಳಕ್ಕೆ ನೊಂದು ಗೃಹಪ್ರವೇಶವಾದ ಮನೆಯಲ್ಲಿಯೇ ಯುವತಿ ಆತ್ಮಹತ್ಯೆ

Team Newsnap
1 Min Read
A young woman commits suicide in her home, which is a home for fraud and harassment ವಂಚನೆ, ಕಿರುಕುಳಕ್ಕೆ ನೊಂದು ಗೃಹಪ್ರವೇಶವಾದ ಮನೆಯಲ್ಲಿಯೇ ಯುವತಿ ಆತ್ಮಹತ್ಯೆ

ಮಂಗಳೂರು :ವಿದೇಶದಲ್ಲಿ ಉದ್ಯೋಗದಲ್ಲಿದ್ದ ಯುವತಿಯೊಬ್ಬಳು ತಾನೇ ಖರೀದಿ ಮಾಡಿದ ಮನೆಯಲ್ಲಿ ಐದನೇ ದಿನಕ್ಕೆ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ಜರುಗಿದೆ.

ಅಶ್ವಿನಿ ಬಂಗೇರ(25) ಎಂಬಾಕೆ ಮಂಗಳೂರು ಹೊರವಲಯದ ಕುಂಪಲ ಚಿತ್ರಾಂಜಲಿ ನಗರದ ನಿವಾಸಿ. ಅಶ್ವಿನಿ ವಿದೇಶದಿಂದ ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದಿದ್ದಳು.

ಕುಂಪಲದಲ್ಲಿ ಸಂಗೀತ ಎಂಬವರಿಂದ ಅಶ್ವಿನಿ ಮನೆಯೊಂದನ್ನು ಖರೀದಿಸಿದ್ದಳು. ಜೂ.3 ರಂದು ಗೃಹ ಪ್ರವೇಶ ಮಾಡಿ ತಾಯಿ ದೇವಕಿ, ದೊಡ್ಡಮ್ಮನ ಇಬ್ಬರು ಗಂಡು ಮಕ್ಕಳೊಂದಿಗೆ ನೆಲೆಸಿದ್ದಳು. ಗೃಹ ಪ್ರವೇಶವಾದ ಐದೇ ದಿನದದಲ್ಲಿ ಅದೇ ಮನೆ ಕೋಣೆಯೊಳಗೆ ಅಶ್ವಿನಿ ನೇಣಿಗೆ ಶರಣಾಗಿದ್ದಾಳೆ.ಬಿಡಿಎ ಅಧ್ಯಕ್ಷರಾಗಿ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ನೇಮಕ

ಅಶ್ವಿನಿ ಖಿನ್ನತೆಗೊಳಗಾಗಿ ಆತ್ಮ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅಶ್ವಿನಿ ಬರೆದ 24 ಪುಟಗಳ ಡೆತ್‍ನೋಟ್ ಪೊಲೀಸರಿಗೆ ದೊರೆತಿದೆ. ಡೆತ್ ನೋಟಿನಲ್ಲಿ ತಾನು ಮನೆ ಖರೀದಿಸಿ ಮೋಸ ಹೋಗಿರುವ ಬಗ್ಗೆ ಉಲ್ಲೇಖ ಮಾಡಿದ್ದಾಳೆ. ಬ್ಯಾಂಕ್ ಅಧಿಕಾರಿಗಳ ಕಿರುಕುಳದ ಬಗ್ಗೆಯೂ ತಿಳಿಸಿದ್ದಾಳೆ.

Share This Article
Leave a comment