December 19, 2024

Newsnap Kannada

The World at your finger tips!

boat,youth,dead

Ashok and Srujan , who were washed away in river, found dead ಸಂಗಮದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬೆಂಗಳೂರು ಯುವಕ ಅಶೊಕ್, ಮೈಸೂರಿನ ಸೃಜನ್ ದೇಹವೂ ಪತ್ತೆ

ಶ್ರೀರಂಗಪಟ್ಟಣದ ಸಂಗಮದ ಬಳಿ ದುರಂತ : ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಯುವಕ

Spread the love

ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹೋಗಿ ಯುವಕನೋರ್ವ ಕೊಚ್ಚಿ ಹೋಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ತಾಲೂಕಿನ ಸಂಗಮದ ಬಳಿ ಬುಧವಾರ ಜರುಗಿದೆ.

ನದಿಯಲ್ಲಿ ಕೊಚ್ಚಿ ಹೋದ ಯುವಕನನ್ನು ಅಶೋಕ್ (26) ಎಂದು ಗುರುತಿಸಲಾಗಿದೆ ಬೆಂಗಳೂರಿನ ಯಲಹಂಕ ನಿವಾಸಿ

ಕುಟುಂಬಸ್ಥರು, ಸ್ನೇಹಿತರೊಂದಿಗೆ ಪೂಜೆಗಾಗಿ ಸಂಗಮಕ್ಕೆ ಆಗಮಿಸಿದ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು,

ಬೆಳಗ್ಗೆ ನದಿಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿದ ಯುವಕ ಕೊಚ್ಚಿ ಹೋಗಿದ್ದಾನೆ. ನದಿ ನೀರಿನ ರಭಸ ಹೆಚ್ಚಿದ್ದ ಯುವಕನ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಲೈವ್‌ ನಲ್ಲೇ ಪಾಕ್‌ ಪತ್ರಕರ್ತೆಯಿಂದ ಬಾಲಕಿನಿಗೆ ಕಪಾಳ ಮೋಕ್ಷ

ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, 30ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಬೋಟ್, ಪಾತಾಳ ಗರಡಿ ಬಳಸಿ ಹುಡುಕಾಟ ನಡೆಸಲಾಗುತ್ತಿದೆ , ಪ್ರತ್ಯೇಕ ತಂಡಗಳಾಗಿ ಶೋಧ ನಡೆಸಲಾಗುತ್ತಿದೆ.

Copyright © All rights reserved Newsnap | Newsever by AF themes.
error: Content is protected !!